Operation Ganga: ಉಕ್ರೇನ್‌ನಿಂದ ಒಂದೇ ದಿನ 3726 ಭಾರತೀಯರ ರಕ್ಷಣೆ: 63 ಕನ್ನಡಿಗರು ತಾಯ್ನಾಡಿಗೆ ವಾಪಸ್‌!

By Kannadaprabha News  |  First Published Mar 4, 2022, 8:35 AM IST

*19 ವಿಮಾನಗಳಲ್ಲಿ ಬೃಹತ್‌ ರಕ್ಷಣಾ ಕಾರ‍್ಯ
*34 ವಿಮಾನಗಳಲ್ಲಿ ಈವರೆಗೆ 7115 ಜನರ ರಕ್ಷಣೆ
*63 ಕನ್ನಡಿಗರು ತಾಯ್ನಾಡಿಗೆ ವಾಪಸ್‌
*2 ದಿನದಲ್ಲಿ 7400 ಜನರ ಕರೆತರಲು ಕೇಂದ್ರದ ಗುರಿ


ಮುಂಬೈ/ನವದೆಹಲಿ (ಮಾ. 04): ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್‌ ಗಂಗಾ’ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರ ತನ್ನ ಕಾಯಕವನ್ನು ಚುರುಕುಗೊಳಿಸಿದೆ. ಗುರುವಾರ ಸುಮಾರು 19 ವಿಮಾನಗಳಲ್ಲಿ 3726 ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಉಕ್ರೇನ್‌ ಯುದ್ಧ ಆರಂಭವಾದ ಬಳಿಕ ಇದು ಈವರೆಗಿನ ಒಂದು ದಿನದ ಬೃಹತ್‌ ರಕ್ಷಣಾ ಕಾರಾರ‍ಯಚರಣೆ. ಈ ವಿಮಾನಗಳಲ್ಲಿ 63 ಕನ್ನಡಿಗರನ್ನೂ ಕರೆತರಲಾಗಿದ್ದು, 5 ದಿನದಲ್ಲಿ ಏರ್‌ಲಿಫ್ಟ್‌ ಅಡಿ ರಕ್ಷಿಸಲ್ಪಟ್ಟಕರುನಾಡಿಗರ ಸಂಖ್ಯೆ 149ಕ್ಕೇರಿಕೆಯಾಗಿದೆ.

ಈ ಮೂಲಕ ಈವರೆಗೆ 34 ವಿಮಾನಗಳಲ್ಲಿ 7115 ಜನರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಕರೆತಂದಂತಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇನ್ನೊಂದೆಡೆ, ಮುಂದಿನ 2 ದಿನಗಳಲ್ಲಿ 17 ವಿಮಾನಗಳ ಮೂಲಕ 7400 ಮಂದಿಯನ್ನು (ಶುಕ್ರವಾರ 3500, ಶನಿವಾರ 3900 ಜನರನ್ನು) ಭಾರತಕ್ಕೆ ಕರೆತರಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

Tap to resize

Latest Videos

ಈ ನಡುವೆ, ಬುಧವಾರ ‘ತಕ್ಷಣವೇ ಖಾರ್ಕೀವ್‌ನಿಂದ ಹೊರಡಿ’ ಎಂಬ ಸಂ

ಇದನ್ನೂ ಓದಿ: Russia Ukraine War: ಉಕ್ರೇನಿಯನ್ನರಿಗೆ 18 ತಿಂಗಳ ಅವಧಿಗೆ ಅಮೆರಿಕಾದಲ್ಲಿ ಕಾನೂನುಬದ್ಧವಾಗಿ ಉಳಿಯಲು ಅವಕಾಶ

798 ಜನರ ಕರೆತಂದ ‘ಗ್ಲೋಬ್‌ ಮಾಸ್ಟರ್‌’: ಗುರುವಾರ ರೊಮೇನಿಯಾದ ಬುಕಾರೆಸ್ಟ್‌, ಹಂಗೇರಿಯ ಬುಡಾಪೆಸ್ಟ್‌ ಮತ್ತು ಪೋಲೆಂಡ್‌ನ ಝೇಶುವ್‌ನಿಂದ ಹೊರಟ 798 ಜನರನ್ನು ಹೊತ್ತ ವಾಯುಸೇನೆಯ ನಾಲ್ಕು ಸಿ-17 ಗ್ಲೋಬ್‌ ಮಾಸ್ಟರ್‌ ವಿಮಾನಗಳು ಗುರುವಾರ ಬೆಳಗ್ಗೆ ನವದೆಹಲಿಗೆ ಬಂದಿಳಿದವು. ಕೇಂದ್ರ ಸಚಿವ ಅಜಯ್‌ ಭಟ್‌ ಅವರು ಪ್ರಯಾಣಿಕರನ್ನು ಸ್ವಾಗತಿಸಿದರು. 

ಇವುಗಳ ಹೊರತಾಗಿ ಏರ್‌ ಇಂಡಿಯಾ, ಇಂಡಿಗೋ ವಿಮಾನಗಳು ರೊಮೇನಿಯಾ ರಾಜಧಾನಿ ಬುಕಾರೆಸ್ಟ್‌, ಹಂಗೇರಿಯ ಬುಡಾಪೆಸ್ಟ್‌ ಮತ್ತಿತರ ಉಕ್ರೇನ್‌ ನೆರೆಯ ರಾಷ್ಟ್ರಗಳಿಂದ ಏರ್‌ಲಿಫ್ಟ್‌ ಕಾರಾರ‍ಯಚರಣೆ ನಡೆಸಿದವು.

ಫೆ.24ರಿಂದ ಭಾರತ ಸರ್ಕಾರ ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನಲ್ಲಿ ಅತಂತ್ರರಾಗಿರುವ ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲು ರೊಮೇನಿಯಾ, ಪೋಲೆಂಡ್‌, ಹಂಗೇರಿ ಸೇರಿದಂತೆ ಉಕ್ರೇನ್‌ ನೆರೆಯ ದೇಶಗಳಿಂದ ಕಾರಾರ‍ಯಚರಣೆ ನಡೆಸುತ್ತಿದೆ. ನಾಲ್ವರು ಕೇಂದ್ರ ಸಚಿವರು ಉಕ್ರೇನ್‌ ಗಡಿ ದೇಶಗಳಿಗೆ ತೆರಳಿ ಸ್ಥಳಾಂತರ ಕಾರಾರ‍ಯಚರಣೆಯ ಉಸ್ತುವಾರಿ ವಹಿಸಿದ್ದಾರೆ. 

ಇದನ್ನೂ ಓದಿ: Russia- Ukraine Crisis: ಏನಿವು ವಾರ್ಸಾ ಮತ್ತು ನ್ಯಾಟೋ? ರಷ್ಯಾಗೇಕೆ ಉಕ್ರೇನ್ ಮೇಲೆ ಸಿಟ್ಟು.?

ಹಂಗೇರಿಯಲ್ಲಿ ಹರ್‌ದೀಪ್‌ ಸಿಂಗ್‌ ಪುರಿ , ರೊಮೇನಿಯಾದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಸ್ಲೊವೋಕಿಯಾದಲ್ಲಿ ಕಿರಣ್‌ ರಿಜಿಜು ಮತ್ತು ಪೋಲೆಂಡ್‌ನಲ್ಲಿ ವಿ.ಕೆ.ಸಿಂಗ್‌ ಮೇಲ್ವಿಚಾರಣೆ ವಹಿಸಿದ್ದಾರೆ.

ಭಾರತೀಯರನ್ನು ಒತ್ತೆ ಇಟ್ಟುಕೊಂಡಿಲ್ಲ: ಕೇಂದ್ರ:  ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆ ಇಟ್ಟುಕೊಳ್ಳಲಾಗಿದೆ ಎಂದು ಉಕ್ರೇನ್‌ ಮೇಲೆ ರಷ್ಯಾ ಹಾಗೂ ರಷ್ಯಾ ಮೇಲೆ ಉಕ್ರೇನ್‌ ಮಾಡಿದ್ದ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಇಂತಹ ಯಾವುದೇ ಘಟನೆಗಳೂ ನಡೆದಿಲ್ಲ. ಎಲ್ಲ ಭಾರತೀಯ ವಿದ್ಯಾರ್ಥಿಗಳೂ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದೆ.

ಭಾರತೀಯರ ರಕ್ಷಣೆಗೆ ರಷ್ಯಾದಿಂದ 130 ಬಸ್‌!: ಯುದ್ಧ ನಡೆಯುತ್ತಿರುವ ಉಕ್ರೇನ್‌ನ ಖಾರ್ಕೀವ್‌, ಸುಮಿ ನಗರಗಳಿಂದ ಭಾರತೀಯ ವಿದ್ಯಾರ್ಥಿಗಳು, ಇತರೆ ವಿದೇಶೀಯರನ್ನು ಸ್ಥಳಾಂತರಿಸಲು ರಷ್ಯಾ 130 ಬಸ್‌ ವ್ಯವಸ್ಥೆ ಮಾಡಿದೆ. ಬಸ್‌ ಮೂಲಕ ಭಾರತೀಯರನ್ನು ರಕ್ಷಿಸಿ ರಷ್ಯಾಕ್ಕೆ ಕರೆದೊಯ್ದು ಅಲ್ಲಿಂದ ತವರಿಗೆ ಕಳುಹಿಸುವುದಾಗಿ ಪ್ರಕಟಿಸಿದೆ.

ಉಕ್ರೇನ್‌ ಕಡಲ ನಗರಿ ಖೇರ್ಸನ್‌ ರಷ್ಯಾ ವಶಕ್ಕೆ: 

- ತನ್ನ ನಿಯಂತ್ರಿತ ಪ್ರದೇಶ ಕ್ರಿಮಿಯಾ ಪಕ್ಕದಲ್ಲೇ ಇರುವ, ಕರಾವಳಿ ನಗರಿ ಖೇರ್ಸನ್‌ ವಶಕ್ಕೆ ಪಡೆದ ರಷ್ಯಾ

- ರಷ್ಯಾ ಗಡಿಗೆ ಸಮೀಪದಲ್ಲಿರುವ ಬಂದರು ನಗರಿ ಮರಿಯುಪೋಲ್‌ ಸುತ್ತುವರೆದ ಪುಟಿನ್‌ ಪಡೆಗಳು

- ಕಡಲ ನಗರ ಒಡೆಶಾಕ್ಕೂ ಲಗ್ಗೆ. ಈ 2 ನಗರ ರಷ್ಯಾ ವಶವಾದರೆ ಉಕ್ರೇನ್‌ಗೆ ಕರಾವಳಿ ಸಂಪರ್ಕ ಕಡಿತ

- ಕೀವ್‌, ಖಾರ್ಕೀವ್‌ ವಶಕ್ಕೆ ರಷ್ಯಾ ಯತ್ನ ಮುಂದುವರಿಕೆ. ಉಕ್ರೇನ್‌ನಿಂದ ಪ್ರತಿರೋಧ. ಭಾರಿ ಕಾಳಗ

- ಉಕ್ರೇನ್‌ನ ಹಲವು ನಗರಗಳಲ್ಲಿ ವಸತಿ ಪ್ರದೇಶ ಗುರಿಯಾಗಿಸಿ ಕ್ಷಿಪಣಿ, ಶೆಲ್‌ ದಾಳಿ ಮುಂದುವರಿಕೆ

- ತನ್ನ ಪ್ರತಿ ದಾಳಿ ವೇಳೆ ರಷ್ಯಾ ಸೇನೆಯ ಮೇಜರ್‌ ಜನರಲ್‌ ಹತ: ಉಕ್ರೇನ್‌ನಿಂದ ಪ್ರತಿಪಾದನೆ

click me!