Russia Ukraine War: ಉಕ್ರೇನಿಯನ್ನರಿಗೆ 18 ತಿಂಗಳ ಅವಧಿಗೆ ಅಮೆರಿಕಾದಲ್ಲಿ ಕಾನೂನುಬದ್ಧವಾಗಿ ಉಳಿಯಲು ಅವಕಾಶ

By Suvarna News  |  First Published Mar 4, 2022, 8:20 AM IST

ಈ ಕ್ರಮವು ಮಾರ್ಚ್ 1 ರಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಉಕ್ರೇನಿಯನ್ನರು 18 ತಿಂಗಳ ಅವಧಿಗೆ ಕಾನೂನುಬದ್ಧವಾಗಿ ಉಳಿಯಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. 


ವಾಷಿಂಗ್ಟನ್ (ಮಾ. 04): ರಷ್ಯಾದೊಂದಿಗಿನ ಮಿಲಿಟರಿ ಸಂಘರ್ಷದಿಂದಾಗಿ ಉಕ್ರೇನ್‌ಗೆ ಮರಳಲು ಸಾಧ್ಯವಾಗದಿರುವ ಹತ್ತಾರು ಸಾವಿರ ಉಕ್ರೇನಿಯನ್ನರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರ ಆಡಳಿತವು ತಾತ್ಕಾಲಿಕವಾಗಿ ಗಡೀಪಾರುಗಳನ್ನು ನಿಲ್ಲಿಸಿ  ಕೆಲಸದ ಪರವಾನಗಿಯನ್ನು ನೀಡುತ್ತದೆ ಎಂದು ಯುಎಸ್ ಹೋಮ್ಲ್ಯಾಂಡ್ ಸೆಕ್ಯುರಿಟಿ ( (DHS) ಇಲಾಖೆ ಗುರುವಾರ ತಿಳಿಸಿದೆ. ಉಕ್ರೇನ್ ಮೇಲೆ ರಷ್ಯಾದ ಪಡೆಗಳ ದಾಳಿಯೂ ಎರಡನೆಯ ಮಹಾಯುದ್ಧದ ನಂತರ ಯುರೋಪಿಯನ್ ರಾಜ್ಯದ ಮೇಲಿನ  ಅತಿದೊಡ್ಡ ದಾಳಿಯಾಗಿದೆ. ಹೀಗಾಗಿ 

ಈ ಕ್ರಮವು ಮಾರ್ಚ್ 1 ರಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಉಕ್ರೇನಿಯನ್ನರು 18 ತಿಂಗಳ ಅವಧಿಗೆ ಕಾನೂನುಬದ್ಧವಾಗಿ ಉಳಿಯಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಡಿಎಚ್‌ಎಸ್ ಹೇಳಿದೆ.  ಸ್ಟೇಟ್ ಆಫ್ ಯೂನಿಯನ್ (State of Union) ಭಾಷಣದಲ್ಲಿ ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಬಿಡೆನ್ ಮಂಗಳವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಹರಿಹಾಯ್ದರು. ಅಲ್ಲದೇ ಅಮೆರಿಕದ ವಾಯುಪ್ರದೇಶದಿಂದ ರಷ್ಯಾದ ವಿಮಾನಗಳನ್ನು ನಿರ್ಬಂಧಿಸಿದರು.

Latest Videos

undefined

ರಾಜಕೀಯ ಅದೃಷ್ಟದ ಮೇಲೆ ಪರಿಣಾಮ:  ಉಕ್ರೇನ್‌  ಬಿಕ್ಕಟ್ಟಿನಿಂದಾಗಿ ಬಿಡೆನ್ ಅವರ ಪ್ರತಿಕ್ರಿಯೆಯು ಅವರ ರಾಜಕೀಯ ಅದೃಷ್ಟ ಮತ್ತು ಪ್ರಪಂಚದೊಂದಿಗಿನ ಯುಎಸ್ ಸಂಬಂಧಗಳಿಗೆ ಆಳವಾದ ಪರಿಣಾಮಗಳನ್ನು ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಉಕ್ರೇನಿಯನ್ನರಿಗೆ ಗಡೀಪಾರು ಪರಿಹಾರ ಮತ್ತು ತಾತ್ಕಾಲಿಕ ಸಂರಕ್ಷಿತ ಸ್ಥಿತಿ (TPS) ಎಂದು ಕರೆಯಲ್ಪಡುವ ಕಾರ್ಯಕ್ರಮದ ಅಡಿಯಲ್ಲಿ ಕೆಲಸದ ಪರವಾನಗಿಗಳಿಗೆ ಪ್ರವೇಶವನ್ನು ನೀಡಲಾಗುವುದು. 

ಹಿಂಸಾತ್ಮಕ ಸಂಘರ್ಷ ಅಥವಾ ನೈಸರ್ಗಿಕ ವಿಕೋಪಗಳಂತಹ ಅಸಾಧಾರಣ ಸಂದರ್ಭಗಳಿಂದಾಗಿ ಸುರಕ್ಷಿತವಾಗಿ ತಮ್ಮ ದೇಶಗಳಿಗೆ ಹಿಂತಿರುಗಲು ಸಾಧ್ಯವಾಗದ ವಲಸಿಗರಿಗೆ ಈ ಕಾರ್ಯಕ್ರಮವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾನೂನುಬದ್ಧವಾಗಿ ಒಂದು ನಿರ್ದಿಷ್ಟ ಅವಧಿಯವರೆಗೆ ಉಳಿಯಲು ಮತ್ತು ಕೆಲಸ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ.

ಅಪ್ರಚೋದಿತ ದಾಳಿ: "ಉಕ್ರೇನ್‌ನ ಮೇಲೆ ರಷ್ಯಾದ ಪೂರ್ವಯೋಜಿತ ಮತ್ತು ಅಪ್ರಚೋದಿತ ದಾಳಿಯು ನಡೆಯುತ್ತಿರುವ ಯುದ್ಧ, ಪ್ರಜ್ಞಾಶೂನ್ಯ ಹಿಂಸಾಚಾರಕ್ಕೆ ಕಾರಣವಾಯಿತು ಮತ್ತು ಉಕ್ರೇನಿಯನ್ನರು ಇತರ ದೇಶಗಳಲ್ಲಿ ಆಶ್ರಯ ಪಡೆಯಬೇಕಾಯಿತು" ಎಂದು ಕಾರ್ಯದರ್ಶಿ ಅಲೆಜಾಂಡ್ರೊ ಮಯೋರ್ಕಾಸ್ (Alejandro Mayorkas) ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಮುಂಜಾನೆ, ಯುಎಸ್ ಇಮ್ಮಿಗ್ರೆಶನ್ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ಐಸಿಇ) "ಚಾಲ್ತಿಯಲ್ಲಿರುವ ಮಾನವೀಯ ಬಿಕ್ಕಟ್ಟಿನ" ಕಾರಣದಿಂದಾಗಿ ಉಕ್ರೇನ್‌ಗೆ ಗಡೀಪಾರು ಮಾಡುವ ವಿಮಾನಗಳನ್ನು ವಿರಾಮಗೊಳಿಸಿದೆ ಎಂದು ಹೇಳಿದೆ.  ಫೆಬ್ರವರಿ 24 ರಂದು ಮಾಸ್ಕೋ "ವಿಶೇಷ ಕಾರ್ಯಾಚರಣೆ" ಎಂದು ಕರೆಯುವ ಉಕ್ರೇನ್ ಅನ್ನು ರಷ್ಯಾ ಆಕ್ರಮಿಸಿದಾಗಿನಿಂದ 1 ದಶಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ಓಡಿಹೋಗಿದ್ದಾರೆ ಮತ್ತು ನೆರೆಯ ಮಧ್ಯ ಯುರೋಪಿಯನ್ ದೇಶಗಳಿಗೆ ಆಗಮಿಸಲು ಪ್ರಾರಂಭಿಸಿದ್ದಾರೆ.

ಪರಮಾಣು ಸ್ಥಾವರದ ಮೇಲೆ ರಷ್ಯಾ ಗುಂಡಿನ ದಾಳಿ:  ಇನ್ನು ಈ ಮಧ್ಯೆ  ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾ ಎನ್‌ಪಿಪಿ (Zaporizhzhia NPP) ಮೇಲೆ ರಷ್ಯಾದ ಸೈನ್ಯವು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದೆ ಎಂದು ಉಕ್ರೇನ್‌ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ (Dmytro Orlov) ಹೇಳಿದ್ದಾರೆ. ಅದು ಸ್ಫೋಟಗೊಂಡರೆ, ಅದು ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ. 

1986ರಲ್ಲಿ ಚರ್ನೋಬಿಲ್‌ ಪರಮಾಣು ಸ್ಥಾವರ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಸತ್ತಿದ್ದು ಕೆಲವೇ ನೂರಾರು ಜನರಾದರೂ, ಅದರ ಭೀಕರ ಪರಿಣಾಮಗಳಿಗೆ ತುತ್ತಾಗಿದ್ದು 5 ಲಕ್ಷಕ್ಕೂ ಹೆಚ್ಚು ಜನರು. ಈಗಲೂ ಅದರಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ. ಇನ್ನು ಎನರ್ಹೋಡರ್ (Enerhodar) ನಗರದ ಮೇಲೆ ರಷ್ಯಾ ದಾಳಿಯಿಂದ ಯುರೋಪಿನ ಅತಿದೊಡ್ಡ ಪರಮಾಣು ಶಕ್ತಿ ಕೇಂದ್ರದಿಂದ ಹೊಗೆ ಗೋಚರಿಸುತ್ತಿದೆ ಎಂದು ಉಕ್ರೇನಿಯನ್ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.  

click me!