*9 ಪ್ರಾಂತ್ಯಗಳ ಪೈಕಿ 7ರಲ್ಲಿ ಒಮಿಕ್ರೋನ್ ಪತ್ತೆ
*ಒಂದೇ ದಿನ 11500 ಕೋವಿಡ್ ಕೇಸ್ ದೃಢ
*5 ದಿನಗಳಲ್ಲಿ ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆ!
ಕೇಪ್‌ಟೌನ್(ಡಿ. 04): ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರೋನ್‌ನಿಂದಾಗಿ (Covid 19 New Variant Omicron) ದೇಶದಲ್ಲಿ ಕೋವಿಡ್ 4ನೇ ಅಲೆ ಕಾಣಿಸಿಕೊಂಡಿದೆ (4th Wave) ಎಂದು ದಕ್ಷಿಣ ಆಫ್ರಿಕಾ ಸರ್ಕಾರ ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ. ಮೊದಲ ಒಮಿಕ್ರೋನ್ ಕೇಸು ಪತ್ತೆಯಾದ ತಿಂಗಳೊಳಗೇ, ಅದು ಮತ್ತೊಂದು ಕೋವಿಡ್ ಅಲೆಗೆ ಕಾರಣವಾಗಿರುವುದು, ವಿಶ್ವದ ಇತರೆ ದೇಶಗಳಲ್ಲೂ ಅಂಥದ್ದೇ ಭೀತಿಯನ್ನು ಹುಟ್ಟುಹಾಕಿದೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ (Joe Phaahla), ‘ ಕೋವಿಡ್‌ನ ಹೊಸ ತಳಿ ಒಮಿಕ್ರೋನ್ ಪತ್ತೆಯಾಗುವ ಮೂಲಕ ಆಫ್ರಿಕಾಕ್ಕೆ ಕೊರೊನಾದ 4ನೇ ಲಗ್ಗೆ ಇಟ್ಟಿದೆ. ಇದುವರೆಗೂ ದೇಶದ ಒಟ್ಟು 9 ಪ್ರಾಂತ್ಯಗಳ ಪೈಕಿ 7ರಲ್ಲಿ ಒಮಿಕ್ರೋನ್ ವೈರಸ್ ಕಾಣಿಸಿಕೊಂಡಿದೆ. ಆದರೂ ಹೆಚ್ಚಿನ ಪ್ರಾಣಹಾನಿಯಾಗದಂತೆ ನಾವು ಈ ವೈರಸ್ ನಿಯಂತ್ರಿಸಲಿದ್ದೇವೆ ಎಂಬ ವಿಶ್ವಾಸವಿದೆ. ದೇಶದ ಪ್ರತಿ ಪ್ರಜೆಯೂ ಪೂರ್ಣ ಲಸಿಕೆ ಪಡೆದುಕೊಂಡರೆ, ನಾವು ಕ್ರಿಸ್‌ಮಸ್ ವೇಳೆ ಯಾವುದೇ ಕಠಿಣ ಲಾಕ್‌ಡೌನ್ ಹೇರದೇ 4ನೇ ಅಲೆಯನ್ನು ಎದುರಿಸಬಹುದು‘ ಎಂದು ಹೇಳಿದ್ದಾರೆ.
undefined
ಕಳೆದ 5 ದಿನಗಳಲ್ಲಿ ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆ!
ಸಚಿವರ ಈ ಹೇಳಿಕೆಗೆ ಪೂರಕವೆಂಬಂತೆ ಕಳೆದ 5 ದಿನಗಳ ಅವಧಿಯಲ್ಲಿ ಹೊಸ ಪ್ರಕರಣಗಳಲ್ಲಿ (New Covid Cases) ಭಾರೀ ಏರಿಕೆಯಾಗಿದೆ. ದೇಶದಲ್ಲಿ ನ.28ರಂದು 2818, ನ.29ರಂದು 2273, ನ.20ರಂದು 4373, ಡಿ.1ರಂದು 8561 ಮತ್ತು ಡಿ.2ರಂದು 11535 ಪ್ರಕರಣಗಳು ದಾಖಲಾಗಿವೆ. ನವೆಂಬರ್ ಮಧ್ಯಭಾಗದಲ್ಲಿ ದೇಶದಲ್ಲಿ ನಿತ್ಯ 200-300 ಕೇಸು ಕಂಡುಬರುತ್ತಿತ್ತು. ಅದೀಗ 10000ದ ಗಡಿದಾಟಿದೆ. 2021ರಲ್ಲಿ ಡೆಲ್ಟಾಹಾವಳಿ ಹೆಚ್ಚಾದ ಅವಧಿ ಅಂದರೆ ಜೂನ್, ಜುಲೈ ತಿಂಗಳಲ್ಲಿ ನಿತ್ಯ ಆಫ್ರಿಕಾದಲ್ಲಿ 25000 ಕೇಸು ದಾಖಲಾಗಿದ್ದೇ ಅತಿ ಗರಿಷ್ಠವಾಗಿತ್ತು. ಇದೀಗ ಮತ್ತೇ ಅಂಥದ್ದೇ ಪ್ರಮಾಣದಲ್ಲಿ ಕೇಸು ದಾಖಲಾಗುವ ಭೀತಿ ಎದುರಾಗಿದೆ.
Omicronನಿಂದ ಡೆಲ್ಟಾಕ್ಕಿಂತ 3 ಪಟ್ಟು ಮರುಸೋಂಕು ಸಾಧ್ಯತೆ, ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ!
ಅದರಲ್ಲೂ ಒಮಿಕ್ರೋನ್ ಪತ್ತೆಯಾದ ಬಳಿಕ ಚಿಕ್ಕ ಮಕ್ಕಳು (Children) ಮತ್ತು ಯುವಸಮೂಹದಲ್ಲೇ (Youth) ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಆಫ್ರಿಕಾದಲ್ಲಿ ಮೊದಲ ಒಮಿಕ್ರೋನ್ ಕೇಸು ಪತ್ತೆಯಾದ ಗೌಟೆಂಗ್ ಪ್ರಾಂತ್ಯದಲ್ಲಿ ಪತ್ತೆಯಾದ ಒಟ್ಟು ಪ್ರಕರಣದಲ್ಲಿ ಶೇ.10ರಷ್ಟುಮಕ್ಕಳದ್ದೇ ಆಗಿದೆ. ಅದರಲ್ಲೂ 0-2 ವರ್ಷ ಮತ್ತು 28-38ರ ವಯೋಮಾನದವರಲ್ಲೇ ಹೆಚ್ಚಿನ ಸೋಂಕು ಕಂಡುಬಂದಿದೆ. ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ 180ಕ್ಕೂ ಹೆಚ್ಚು ಒಮಿಕ್ರೋನ್ ಪ್ರಕರಣ ಪತ್ತೆಯಾಗಿದೆ.
5 ದಿನಗಳ ಹೊಸ ಪ್ರಕರಣಗಳ ಅಂಕಿ ಸಂಖ್ಯೆ!
ನ.28 - 2818, ನ.29 - 2273, ನ.30 - 4373, ಡಿ.1 - 8561, ಡಿ.2 - 11535
ಒಮಿಕ್ರೋನ್‌ಗೆ ಯುವಜನತೆಯೇ ಟಾರ್ಗೆಟ್?
ತ್ಯಂತ ಅಪಾಯಕಾರಿ ವೈರಸ್ ಎಂದು ಬಣ್ಣಿಸಲಾಗಿರುವ ಒಮಿಕ್ರೋನ್ ವೈರಸ್‌ನ (Omicron Variant) ಸ್ವರೂಪ ಮತ್ತು ಲಕ್ಷಣಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿರುವಾಗಲೇ ರೂಪಾಂತರಿ ತಳಿ ದಕ್ಷಿಣ ಆಫ್ರಿಕಾದಲ್ಲಿ (South Africa) ಯುವಜನತೆಯ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತಿದೆ. ವೈರಸ್ ವಿರುದ್ಧ ಹೋರಾಡುವ ಬಲ ಮತ್ತು ಆರೋಗ್ಯ ಇದ್ದವರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಅಲ್ಲದೆ ಸೋಂಕು ಹರಡಿದ ಕೆಲ ದಿನಗಳ ಬಳಿಕ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಯುವಜನರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿರುವುದರಿಂದ ರೂಪಾಂತರಿ ತಳಿ ಸೌಮ್ಯ ಲಕ್ಷಣಗಳನ್ನು ಮಾತ್ರ ಹೊಂದಿರುತ್ತದೆಂದು ಈಗಾಗಲೇ ಅಂದಾಜಿಸಲು ಸಾಧ್ಯವಿಲ್ಲ.