Omicron Updates: ಒಮಿಕ್ರೋನ್‌ ಬಂದರೆ ಡೆಲ್ಟಾಸೋಂಕಿನ ವಿರುದ್ಧ ಇಮ್ಯುನಿಟಿ!

By Kannadaprabha News  |  First Published Dec 30, 2021, 4:30 AM IST
  • ಒಮಿಕ್ರೋನ್‌ ಬಂದರೆ ಡೆಲ್ಟಾಸೋಂಕಿನ ವಿರುದ್ಧ ಇಮ್ಯುನಿಟಿ!
  • ಒಮಿಕ್ರೋನ್‌ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ 14 ಪಟ್ಟು ಹೆಚ್ಚಳ
  • ಮುಂದೆ ಡೆಲ್ಟಾತಗಲುವ ಸಾಧ್ಯತೆ ಕಡಿಮೆ: ದಕ್ಷಿಣ ಆಫ್ರಿಕಾ ತಜ್ಞರು

ಜೋಹಾನ್ಸ್‌ಬರ್ಗ್‌(ಡಿ.30): ಬಹಳ ಕಡಿಮೆ ರೋಗಲಕ್ಷಣಗಳಿರುವ ಹಾಗೂ ಅಷ್ಟೇನೂ ಅಪಾಯಕಾರಿಯಲ್ಲದ ಒಮಿಕ್ರೋನ್‌ ಸೋಂಕು ತಗಲಿದರೆ ಅದರಿಂದ ಮುಂದೆ ಡೆಲ್ಟಾಸೇರಿದಂತೆ ಇನ್ನಿತರ ಕೋವಿಡ್‌ ರೂಪಾಂತರಿಗಳ ವಿರುದ್ಧ ದೇಹದಲ್ಲಿ ರೋಗನಿರೋಧಕ ಶಕ್ತಿ 14 ಪಟ್ಟು ಹೆಚ್ಚುತ್ತದೆ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ದಕ್ಷಿಣ ಆಫ್ರಿಕಾದ ತಜ್ಞರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ವ್ಯಕ್ತವಾಗಿದೆ. ಕಡಿಮೆ ಅಪಾಯಕಾರಿಯಾದ ಒಮಿಕ್ರೋನ್‌ ರೂಪಾಂತರಿಯಿಂದಾಗಿ ಹೆಚ್ಚು ಅಪಾಯಕಾರಿಯಾದ ಡೆಲ್ಟಾಸೋಂಕು ಇಳಿಕೆಯಾಗಲಿದೆ. ಅಲ್ಲದೆ, ವ್ಯಕ್ತಿಗೆ ಒಮಿಕ್ರೋನ್‌ ಸೋಂಕು ತಗಲಿದರೆ ಮುಂದೆ ಆತನಿಗೆ ಡೆಲ್ಟಾಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುತ್ತದೆ. ಆತನಲ್ಲಿ ಡೆಲ್ಟಾಸೇರಿದಂತೆ ಈವರೆಗೆ ಪತ್ತೆಯಾಗಿರುವ ಕೋವಿಡ್‌ ತಳಿಗಳ ವಿರುದ್ಧದ ರೋಗನಿರೋಧಕ ಶಕ್ತಿಯು ಮೊದಲಿಗಿಂತ 14 ಪಟ್ಟು ಹೆಚ್ಚು ಅಭಿವೃದ್ಧಿಗೊಂಡಿರುತ್ತದೆ ಎಂದು ಅಧ್ಯಯನ ನಡೆಸಿದ ಆಫ್ರಿಕಾ ಹೆಲ್ತ್‌ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಅಲೆಕ್ಸ್‌ ಸಿಗಲ್‌ ಮತ್ತು ಖದೀಜಾ ಖಾನ್‌ ಹೇಳಿದ್ದಾರೆ.

Tap to resize

Latest Videos

undefined

Covid 19 Booster Doseಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು: ರೋಗನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಲಸಿಕೆ

‘ಜುಲೈ, ಆಗಸ್ಟ್‌ ವೇಳೆಯಲ್ಲಿ ಡೆಲ್ಟಾಸೋಂಕು ಹರಡಿದಾಗ ದಕ್ಷಿಣ ಆಫ್ರಿಕಾದಲ್ಲಿ ಆಸ್ಪತೆಗೆ ದಾಖಲಾಗುವವರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಬಹಳ ಹೆಚ್ಚಿತ್ತು. ಆದರೆ ಒಮಿಕ್ರೋನ್‌ನಿಂದ ಆರೋಗ್ಯ ಸೇವೆಗಳ ಮೇಲೆ ಹೆಚ್ಚೇನೂ ದೊಡ್ಡ ಹೊರೆ ಬಿದ್ದಿಲ್ಲ. ನಾವು 15 ಮಂದಿ ಒಮಿಕ್ರೋನ್‌ ಸೋಂಕಿತರನ್ನು ಅಧ್ಯಯನಕ್ಕೊಳಪಡಿಸಿದ್ದೆವು. ಅವರು ಕೋವಿಡ್‌ ಲಸಿಕೆ ಪಡೆದವರಾಗಿದ್ದು, ಈ ಹಿಂದೆ ಸೋಂಕಿಗೆ ತುತ್ತಾಗಿದ್ದವರೂ ಆಗಿರಬಹುದು’ ಎಂದೂ ತಜ್ಞರು ತಿಳಿಸಿದ್ದಾರೆ.

ದೇಶದಲ್ಲಿ ಕೊರೋನಾ ಅಪ್ಡೇಟ್:

ದೇಶದಲ್ಲಿ ಕೋವಿಡ್‌ 3ನೇ ಅಲೆ ಏಳುವ ಮುನ್ಸೂಚನೆ ಎಂಬಂತೆ ದೈನಂದಿನ ಕೋವಿಡ್‌ ಪ್ರಕರಣಗಳು ದಿಢೀರನೇ ಏರಿಕೆ ಕಂಡಿವೆ. ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ 9,195 ಪ್ರಕರಣಗಳು ದಾಖಲಾಗಿದ್ದು, ಇದು 20 ದಿನಗಳ ಗರಿಷ್ಠವಾಗಿದೆ.

ಡಿ.9ರಂದು 9416 ಪ್ರಕರಣ ದಾಖಲಾಗಿದ್ದವು. ಆ ಬಳಿಕ ಸೋಂಕು 9 ಸಾವಿರ ದಾಟದೇ ಅದಕ್ಕಿಂತ ಕಡಿಮೆ ಅಂಕಿಯಲ್ಲಿ ಹೊಯ್ದಾಡುತ್ತಿತ್ತು. ಈಗ ಮತ್ತೆ 9 ಸಾವಿರದ ಗಡಿ ದಾಟಿರುವುದು ಆತಂಕದ ವಿಚಾರ.

ಅಲ್ಲದೆ ಮಂಗಳವಾರದ ಪ್ರಕರಣಗಳಿಗೆ (6358 ಕೇಸು) ಹೋಲಿಸಿದರೆ ಬುಧವಾರ ಪ್ರಕರಣ ಸಂಖ್ಯೆ ಶೇ.44ರಷ್ಟುಹೆಚ್ಚಾದಂತಾಗಿದೆ. ಇದೇ ಅವಧಿಯಲ್ಲಿ 302 ಸೋಂಕಿತರು ಸಾವಿಗೀಡಾಗಿದ್ದಾರೆ.

ಕಳೆದ 24 ತಾಸುಗಳಲ್ಲಿ 1,546 ಸಕ್ರಿಯ ಪ್ರಕರಣಗಳು ಹೆಚ್ಚಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ 77,002ಕ್ಕೆ ಏರಿಕೆಯಾಗಿದೆ. ತನ್ಮೂಲಕ ಒಟ್ಟು ಪ್ರಕರಣಗಳು 3.48 ಕೋಟಿಗೆ, ಒಟ್ಟು ಸಾವು 4.8 ಲಕ್ಷಕ್ಕೆ ಏರಿಕೆಯಾಗಿದೆ.

128 ಹೊಸ ಒಮಿಕ್ರೋನ್‌ ಕೇಸು:

ಜೊತೆಗೆ ದೇಶದಲ್ಲಿ ಹೊಸದಾಗಿ 128 ಒಮಿಕ್ರೋನ್‌ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ ಒಟ್ಟು ಒಮಿಕ್ರೋನ್‌ ಸೋಂಕು 781ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಅತಿ ಹೆಚ್ಚು 238 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ಮಹಾರಾಷ್ಟ್ರದಲ್ಲಿ 167, ಗುಜರಾತ್‌ನಲ್ಲಿ 73, ಕೇರಳದಲ್ಲಿ 65 ಮತ್ತು ತೆಲಂಗಾಣದಲ್ಲಿ 62 ಪ್ರಕರಣಗಳು ದಾಖಲಾಗಿದೆ.

click me!