
ನವದೆಹಲಿ (ಆ.07) ಭಾರತದ ಹಾಗೂ ರಷ್ಯಾ ನಡುವಿನ ವ್ಯವಹಾರ ಅಮೆರಿಕಗೆ ಇಷ್ಟವಿಲ್ಲ. ಅದು ಡೋನಾಲ್ಡ್ ಟ್ರಂಪ್‌ಗೆ ಮಾತ್ರವಲ್ಲ, ಇದರ ಹಿಂದಿನ ಎಲ್ಲಾ ಅಮೆರಿಕದ ಎಲ್ಲಾ ಅಧ್ಯಕ್ಷರಿಗೂ ವ್ಯತ್ಯಾಸವಿಲ್ಲ. ಆದರೆ ಇತರ ಅಧ್ಯಕ್ಷರು ಈ ರೀತಿ ಕಠಿಣ ನಿರ್ಧಾರ ತೆಗೆದುಕೊಂಡಿರಲಿಲ್ಲ ಅಷ್ಟೇ. ಇದೀಗ ಟ್ರಂಪ್ ಡಬಲ್ ತೆರಿಗೆಯಿಂದ ಭಾರತ ಆಕ್ರೋಶಗೊಂಡಿದೆ. ಇದರ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಸ್ಕೋದಲ್ಲಿ ರಷ್ಯಾ ಅಧ್ಯಶ್ರ ವ್ಲಾದಿಮಿರ್ ಪುಟಿನ್ ಬೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತ ಚೀನಾ ಕೂಡ ಭಾರತಕ್ಕೆ ಬೆಂಬಲ ನೀಡಿದೆ. ಈ ಮಾತುಕತೆ ಹಾಗೂ ಬೆಂಬಲದಲ್ಲಿ ಬ್ರಿಕ್ಸ್ ಒಕ್ಕೂಟ ಅಮೆರಿಕ ಹೊರಗಿಟ್ಟು ವ್ಯಾಪಾರ ವಹಿವಾಟು ಮಾತ್ರವಲ್ಲ ಡಾಲರ್ ವಿರುದ್ಧ ಕರೆನ್ಸಿ ಘೋಷಿಸುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಅಜಿತ್ ದೋವಲ್ ರಷ್ಯಾ ಪ್ರವಾಸದಲ್ಲಿದ್ದಾರೆ. ವ್ಲಾದಿಮಿರ್ ಪುಟಿನ್ ಭೇಟಿಯಾಗಿ ರಕ್ಷಣಾ ಒಪ್ಪಂದ, ದ್ವಿಪಕ್ಷೀಯ ಇಂಧನ ಒಪ್ಪಂದ ಸೇರಿದಂತೆ ಹಲವು ಪ್ರಮುಖ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತೆರಿಗೆ, ಬೆದರಿಕೆ ಕುರಿತು ಮಾತುಕತೆ ನಡೆಸಲಾಗಿದೆ. ರಷ್ಯಾದಿಂದ ಇಂಧನ ಖರೀದಿಯೇ ಇದಕ್ಕೆಲ್ಲಾ ಮೂಲವಾಗಿದೆ. ಭಾರತ ವಿಶ್ವದ ಪ್ರಮುಖ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಇದು ಅಮೆರಿಕ ನಿದ್ದೆಗೆಡಿಸಿದೆ. ಇದೀಗ ಬ್ರಿಕ್ಸ್ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಈ ಮಾತುಕತೆಯಿಂದ ವ್ಯಕ್ತವಾಗುತ್ತಿದೆ.
ಅಮೆರಿಕ ಜೊತೆ ಮಾತುಕತೆಗೆ ಪುಟಿನ್ ಮುಂದಾಗಿದ್ದಾರೆ. ಭಾರತದ ಮೇಲೆ ವಿಧಿಸಿರುವ ದುಬಾರಿ ತೆರಿಗೆ ಕುರಿತು ಪುಟಿನ್ ಮಾತುಕತೆ ನಡೆಸುವ ಸಾಧ್ಯತೆ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಅಮೆರಿಕಗ ಸ್ಪಷ್ಟ ಸಂದೇಶ ನೀಡಿದ್ದಾರೆ. ಅದೆಷ್ಟೆ ಬೆಲೆ ತೆತ್ತರೂ ಪರ್ವಾಗಿಲ್ಲ, ಭಾರತೀಯ ರೈತರು, ಭಾರತೀಯರ ರಕ್ಷಣೆ ಸಿದ್ದ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಟ್ರಂಪ್ ತೆರಿಗೆ ಬೆದರಿಕೆಗೆ ಬೆದರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜೊತೆ BRICS ಒಕ್ಕೂಟ ರಾಷ್ಟ್ರಗಳಲ್ಲಿ ಪ್ರಮಖರಾದ ರಷ್ಯಾ, ಭಾರತ, ಚೀನಾ ಇದೀಗ ಅಮೆರಿಕ ತೆರಿಗೆ ವಿರುದ್ಧ ಗರಂ ಆಗಿದೆ.
ಅಜಿತ್ ದೋವಲ್ ಹಾಗೂ ಪುಟಿನ್ ಭೇಟಿ ವೇಳೆ ಹಲವು ವಿಚಾರಗಳ ಕುರಿತು ಚರ್ಚೆಯಾಗಿದೆ. ಬಳಿಕ ಮಾತನಾಡಿರುವ ಅಜಿತ್ ದೋವಲ್, ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀನಡುತ್ತಿದ್ದಾರೆ ಎಂದಿದ್ದಾರೆ. ಆದರೆ ದಿನಾಂಕ ಸ್ಪಷ್ಟವಾಗಿಲ್ಲ. ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ