ಉ.ಕೊರಿಯಾದಲ್ಲಿಲ್ಲ ಒಂದೇ ಒಂದು ಕೊರೋನಾ ಕೇಸ್, ಸೀಕ್ರೆಟ್ ಬಿಚ್ಚಿಟ್ಟ ಕಿಮ್ ಜಾಂಗ್ ಉನ್!

By Suvarna News  |  First Published Jul 3, 2020, 7:15 PM IST

ಕೊರೋನಾ ವೈರಸ್ ಮಹಾಮಾರಿಗೆ ವಿಶ್ವವೇ ಮಕಾಡೆ ಮಲಗಿದೆ. ಬತ್ತಳಿಕೆಯಲ್ಲಿರುವ ಬಹುತೇಕ ಅಸ್ತ್ರಗಳನ್ನು ಪ್ರಯೋಗಿಸಿದರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೆ ನಾರ್ತ್ ಕೊರಿಯಾದಲ್ಲಿ ಇದುವರೆಗೂ ಒಂದೇ ಒಂದು ಕೊರೋನಾ ವೈರಸ್ ಕೇಸ್ ಪತ್ತೆಯಾಗಿಲ್ಲ. ಇದಕ್ಕೆ ಕಾರಣವನ್ನೂ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ. 


ಪ್ಯೊಂಗ್ಯಾಂಗ್(ಜು.03):  ಚೀನಾದ ವುಹಾನ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಕೊರೋನಾ ವೈರಸ್ ಇದೀಗ ವಿಶ್ವದ ಎಲ್ಲಾ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿದೆ. ಅಮೆರಿಕ, ರಷ್ಯ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಮಿತಿ ಮೀರುತ್ತಿದೆ. ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದ್ದರೂ ಕೊರೋನಾ ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ಆದರೆ ಉತ್ತರ ಕೊರಿಯಾದಲ್ಲಿ ಮಾತ್ರ ಇದುವರೆಗೆ ಯಾವುದೇ ಕೊರೋನಾ ವೈರಸ್ ಪತ್ತೆಯಾಗಿಲ್ಲ. ಇದು ಇತರ ಎಲ್ಲಾ ರಾಷ್ಟ್ರಗಳ ಆಶ್ಚರ್ಯಕ್ಕೆ ಕಾರಣವಾಗಿದೆ. 

ಉತ್ತರ ಕೊರಿಯಾದಲ್ಲಿ ಕೊರೋನಾ ಕೇಸುಗಳೇ ಇಲ್ವಂತೆ, ಯಾಕೆ?

Tap to resize

Latest Videos

ಉತ್ತರ ಕೊರಿಯಾದಲ್ಲಿ ಕೊರೋನಾ ವೈರಸ್ ನುಸುಳದಂತೆ ತಡೆಯವಲ್ಲಿ ನಾರ್ತ್ ಕೊರಿಯಾ ಯಶಸ್ವಿಯಾಗಿದ್ದು ಹೇಗೆ? ಈ ಕುರಿತು ನಾರ್ತ್ ಕೊರಿಯಾ ರಾಜಧಾನಿ ಪೊಂಗ್ಯಾಂಗ್‌ನಲ್ಲಿ ನಡೆದ ಆಡಳಿತ ಪಕ್ಷದ ಸಭೆಯಲ್ಲಿ ಉತ್ತರ ಕೊರಿಯಾ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಬಹಿರಂಗ ಪಡಿಸಿದ್ದಾರೆ. ದೂರದೃಷ್ಟಿಯ ನಾಯಕತ್ವವೇ ಕೊರೋನಾ ವೈರಸ್ ತಡೆಗೆ ಕಾರಣ ಎಂದಿದ್ದಾರೆ.

ಕಿಮ್ ಜಾಂಗ್ ಉನ್ ಕಚೇರಿಯಲ್ಲೇ ನಡೆಯುತ್ತೆ ಈ ದಂಧೆ: ಬಯಲಾಯ್ತು ಶಾಕಿಂಗ್ ಮಾಹಿತಿ!

ಕಳೆದ 6 ತಿಂಗಳಲ್ಲಿ ನಾರ್ತ್ ಕೊರಿಯಾದ ತುರ್ತು ಸಾಂಕ್ರಾಮಿಕ ರೋಗ ನಿಯಂತ್ರಣ ತಂಡ ಅವಿರತ ಕೆಲಸ ಮಾಡಿದೆ. ಈ ತಂಡವನ್ನು ಮತ್ತಷ್ಟು ಬಲಪಡಿಸುತ್ತೇವೆ. ಕಾರಣ ವಿಶ್ವದಿಂದ ಕೊರೋನಾ ವೈರಸ್ ತೊಲಗುವ ವರೆಗೂ ಈ ತಂಡ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಇದು ದೂರದೃಷ್ಟಿಯ ನಾಯಕತ್ವದಿಂದ ಮಾತ್ರ ಸಾಧ್ಯ ಎಂದು ಕಿಮ್ ಜಾಂಗ್ ಉನ್ ಕಳೆದ 6 ತಿಂಗಳ ವರದಿ ಪರಿಶೀಲಿಸಿ ಹೇಳಿದ್ದಾರೆ.

ನಾರ್ತ್ ಕೊರಿಯಾದ ಸರ್ಕಾರಿ ಅಧೀಕೃತ ದಾಖಲೆಗಳಲ್ಲಿ ಒಂದೇ ಒಂದು ಕೊರೋನಾ ವೈರಸ್ ಕೇಸ್ ಪತ್ತೆಯಾಗಿಲ್ಲ. ಆದರೆ ವಾಸ್ತವಾಂಶದ ಕುರಿತು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರಣ ನಾರ್ತ್ ಕೊರಿಯಾದಲ್ಲಿ ಯಾವ ಮಾಧ್ಯಮಕ್ಕೂ ಸ್ವಾತಂತ್ರವಿಲ್ಲ. ಸರ್ಕಾರದ ವಿರುದ್ಧ ಒಂದಕ್ಷರ ಗೀಚುವಂತಿಲ್ಲ. ಇತ್ತ ದೇಶದ ಪ್ರತಿ ಮಾಹಿತಿಯನ್ನು ಸೇನಾ ಮಾಹಿತಿಗಳಂತೆ ಗೌಪ್ಯವಾಗಿ ಕಾಪಾಡಲಾಗುತ್ತದೆ. ಹೀಗಾಗಿ ಕೊರಿಯಾ ಕೊರೋನಾ ಕುರಿತು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

click me!