ಪತಿಯ ಕೊಳಕು ಸಾಕ್ಸ್‌ ಬಗ್ಗೆ ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಮಲಾಲ ಟ್ವೀಟ್‌ ವೈರಲ್‌!

By Santosh NaikFirst Published Feb 7, 2023, 7:35 PM IST
Highlights

ನೊಬೆಲ್‌ ಪ್ರಶಸ್ತಿ ಪುರಸ್ಕೃತೆ 25 ವರ್ಷದ ಮಲಾಲ ಯುಸೂಫ್‌ಜೈ ಟ್ವಿಟರ್‌ನಲ್ಲಿ ತನ್ನ ಗಂಡನ ಕುರಿತಾಗಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಸಾಕಷ್ಟು ವೈರಲ್‌ ಆಗಿದೆ. ಇದರಲ್ಲಿ ಗಂಡನ ಕೊಳಕು ಸಾಕ್ಸ್‌ಅನ್ನು ಕಸದ ತೊಟ್ಟಿಗೆ ಎಸೆದ ಕುರಿತು ಅವರು ಪ್ರಸ್ತಾಪ ಮಾಡಿದ್ದಾರೆ.
 

ನವದೆಹಲಿ (ಫೆ.7): ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜೈ ಇತ್ತೀಚೆಗೆ ಟ್ವಿಟರ್‌ನಲ್ಲಿ ಮದುವೆಯ ಬಳಿಕದ ತಮ್ಮ ಜೀವನದ ಸಣ್ಣ ಉದಾಹರಣೆ ನೀಡಿದ್ದಾರೆ. 25 ವರ್ಷದ ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್‌ಜೈ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಮ್ಯಾನೇಜರ್‌ ಆಗಿರುವ ಅಸ್ಸೆರ್‌ ಮಲೀಕ್‌ ಅವರ ವಿವಾಹವಾಗಿದ್ದಾರೆ. ಪತಿಯ ಕೊಳಕಾದ ಸಾಕ್ಸ್‌ಅನ್ನು ಕಸದ ತೊಟ್ಟಿಗೆ ಎಸೆದ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದು, ಕೆಲವರು ಅವರ ಕಾರ್ಯಕ್ಕೆ ಶಹಬ್ಬಾಸ್‌ ಅಂದಿದ್ದರೆ, ಇನ್ನೂ ಕೆಲವರು ಇದು ಹೇಳಿಕೊಳ್ಳುವಂಥ ವಿಚಾರವೇ ಎಂದು ಕಾಲೆಳೆದಿದ್ದಾರೆ. ಮಲಾಲ ಅವರ ಟ್ವೀಟ್‌ಗೆ ಅವರ ಪತಿ ಉತ್ತರ ನೀಡಿದ್ದಲ್ಲದೆ, ಪೂಲ್‌ ಕೂಡ ಕ್ರಿಯೇಟ್‌ ಮಾಡಿ ಚರ್ಚೆ ಮಾಡಿದ್ದು ವಿಶೇವಾಗಿ ಕಂಡಿದೆ.

Found socks on sofa, asked if they were his, he said the socks were dirty and I can put them away. So I took them and put them in the (rubbish) bin.

— Malala Yousafzai (@Malala)


'ನಾನು ಸೋಫಾದ ಮೇಲೆ ಸಾಕ್ಸ್‌ಅನ್ನು ನೋಡಿದ್ದೆ. ಇದು ಅಸ್ಸೆರ್‌ ಮಲೀಕ್‌ ಅವರ ಸಾಕ್ಸ್‌ಗಳೇ ಎಂದು ಕೇಳಿದ್ದೆ. ಅದಕ್ಕೆ ಅವರು ಸಾಕ್ಸ್‌ಗಳು ಕೊಳಕಾಗಿದ್ದವು. ಅದನ್ನು ಹೊರಹಾಕುವ ಸಲುವಾಗಿ ಅಲ್ಲಿಟ್ಟಿದ್ದೇನೆ ಎಂದಿದ್ದರು. ಅದಕ್ಕಾಗಿ ನಾನು ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕಿದ್ದೇನೆ' ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದರು.

ಮಲಾಲ ಅವರ ಟ್ವೀಟ್‌ಗೆ ಉತ್ತರ ನೀಡಿರುವ ಪತಿ ಅಸ್ಸೆರ್‌ ಮಲೀಕ್‌, ಟ್ವಿಟರ್‌ ಪೂಲ್‌ಅನ್ನು ಸೃಷ್ಟಿ ಮಾಡಿದ್ದಾರೆ. 'ಕೊಳಕಾದ ಸಾಕ್ಸ್‌ಗಳನ್ನು ಸೋಫಾ ಮೇಲೆ ಇರಿಸಿದ್ದೇನೆ ಎಂದು ಯಾರಾದರೂ ನಿಮಗೆ ಹೇಳಿದರೆ ನೀವೇನು ಮಾಡುತ್ತೀರಿ? ಎಂದು ಪ್ರಶ್ನೆಯನ್ನು ಕೇಳಿ ಅದಕ್ಕೆ ಎರಡು ಆಯ್ಕೆಗಳನ್ನು ನೀಡಿದ್ದರು. 'ಅವುಗಳನ್ನು ಲಾಂಡ್ರಿಗೆ ನೀಡುತ್ತೇನೆ' ಮತ್ತು 'ಅವುಗಳನ್ನು ಕಸದ ಬುಟ್ಟಗೆ ಹಾಕುತ್ತೇನೆ' ಎನ್ನುವುದು. ಇದಕ್ಕೆ ಹೆಚ್ಚಿನವರು ಕಸದ ಬುಟ್ಟಿಗೆ ಹಾಕುತ್ತೇನೆ ಎನ್ನುವ ಆಯ್ಕೆಗೆ ವೋಟ್‌ ಮಾಡಿದ್ದಾರೆ. ಅವರು ತಮ್ಮ ಟ್ವೀಟ್‌ ಅನ್ನು 'ಆಸ್ಕಿಂಗ್‌ ಫಾರ್‌ ಎ ಫ್ರೆಂಡ್‌' ಎನ್ನುವ ಟ್ಯಾಗ್‌ ಬಳಸಿ ಪೋಸ್ಟ್‌ ಮಾಡಿದ್ದಾರೆ.

ಮಲಾಲ ಅವರ ಕ್ರಿಯೆಗೆ ಟ್ವಿಟರ್‌ನಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗಿರುವುದು ಮಾತ್ರವಲ್ಲ, ಸಾಕಷ್ಟು ಮೀಮ್ಸ್‌ಗಳೂ ಕೂಡ ಸೃಷ್ಟಿಯಾಗಿದೆ. ಹೆಚ್ಚಿನವರು ಆಕೆ ಮಾಡಿದ್ದು, ಸರಿ ನಾನಾಗಿದ್ದರೂ ಹಾಗೆಯೇ ಮಾಡುತ್ತಿದ್ದೆ ಎಂದು ಬರೆದಿದ್ದಾರೆ. ಒಬ್ಬರು, 'ಮದುವೆಯ ನಂತರದ ಜೀವನಕ್ಕೆ ಸ್ವಾಗತ-ಸೋಫಾದ ಮೇಲೆ ಕೊಳಕು ಸಾಕ್ಸ್‌ಗಳ ವೃತ್ತ, ಸಮಂಜಸವಾಗಿರಲು ಹೋರಾಟ, ಲಾಂಡ್ರಿ / ಬಸ್ಟ್ ಬಿನ್, ಸೋಫಾ ಮೇಲೆ ಮತ್ತೊಂದು ಕೊಳಕು ಜೋಡಿ ಸಾಕ್ಸ್‌ಗಳು"ಇವೆಲ್ಲವೂ ಸಾಮಾನ್ಯ ಎಂದು ಬರೆದಿದ್ದಾರೆ.

ಇನ್ನೊಬ್ಬ ವ್ಯಕ್ತಿ ಮಲಾಲ ಪತಿಗೆ ಮನೆಯ ಜವಾಬ್ದಾರಿಯ ಬಗ್ಗೆ ಪಾಠ ಮಾಡಿದ್ದಾರೆ. 'ಸರಿಯಾಗಿಯೇ ಮಾಡಿದ್ದೀರಿ. ಆಕೆ ಒನ್‌ ಆಂಡ್‌ ಓನ್ಲಿ ಮಲಾಲ ಅನ್ನೋ ಕಾರಣಕ್ಕಾಗಿ ಮಾತ್ರವಲ್ಲ. ಮುಂದಿನ ಸಾರಿ ನೀವು ಸಾಕ್ಸ್‌ಅನ್ನು ಇಡಬಾರದಂಥ ಸ್ಥಳಗಳಲ್ಲಿ ಇಡಬಾರದು. ಮನೆ ನಡೆಸೋದು ಇಬ್ಬರ ಜವಾಬ್ದಾರಿ ಆಗಿರುತ್ತದೆ. ಕೇವಲ ಮಲಾಲ ಜವಾಬ್ದಾರಿ ಮಾತ್ರವೇ ಅಲ್ಲ' ಎಂದು ಹೇಳಿದ್ದಾರೆ.

 

Hijab Row: ತನ್ನದೇ ಕೃತಿಯಲ್ಲಿ ಬುರ್ಖಾಗೆ ವಿರೋಧ: ವಿವಾದದ ಬಗ್ಗೆ ಧ್ವನಿ ಎತ್ತಿ ಟ್ರೋಲ್ ಆದ ಮಲಾಲಾ

"ನಾನು ನನ್ನ ಪತಿಗೆ ಅವರ ಬೆವೆತ ಹಾಕಿ ಆಟದ ಬಟ್ಟೆಗಳು ಹಾಗೂ ಸ್ಟಿಕ್‌ಗಳನ್ನು, ಮುಖ, ಪಾತ್ರೆ, ಟವೆಲ್ ಇತ್ಯಾದಿಗಳೊಂದಿಗೆ ಬೆರೆಸಬೇಡಿ ಎಂದು ಪದೇ ಪದೇ ಹೇಳಿದ್ದೇನೆ. ಆದ್ದರಿಂದ ಅವುಗಳನ್ನು ಪ್ರತಿ 4-5 ವಾರಗಳಿಗೊಮ್ಮೆ ತೊಳೆಯಬೇಕು. ಇದನ್ನು ಅವರು ಕೇಳಲಿಲ್ಲ. ಇದರ ಪರಿಣಾಮವಾಗಿ ಕೆಲವು ವಾರಗಳ ಕಾಲ ಅವರು ತಮ್ಮ ವಿಶೇಷ ಹಾಕಿ ಒಳಉಡುಪು ಹಾಗೂ ಸಾಕ್ಸ್‌ಗಳನ್ನು ಮನೆಯಲ್ಲಿ ಮತ್ತೆಂದೂ ನೋಡಲಿಲ್ಲ' ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

 

Malala Gets Degree: ಆಕ್ಸ್‌ಫರ್ಡ್‌ ಪದವಿ ಪಡೆದ ಮಲಾಲಾಗೆ ಪತಿಯಿಂದ ಹೃದಸ್ಪರ್ಶಿ ಪೋಸ್ಟ್

'ನಾನು ಎಂದೂ ಬಳಕೆ ಮಾಡಿದ ಸಾಕ್ಸ್‌ಅನ್ನು ಸೋಫಾ ಮೇಲೆ ಇಡೋದಿಲ್ಲ. ಒಳ್ಳೆಯ ಕೆಲಸ ಮಲಾಲ. ಮುಂದಿನ ಸಾರಿ ಅವರು ಸಾಕ್ಸ್‌ಅನ್ನು ಸೋಫಾ ಮೇಲೆ ಹಾಕುವ ಬದಲು ತಮ್ಮ ಸಾಕ್ಸ್‌ಅನ್ನು ತಾವೇ ತೊಳೆಯುತ್ತಾರೆ' ಎಂದು ಬರೆದಿದ್ದಾರೆ.

click me!