* ಸ್ತ್ರೀಯರ ಮೇಲೆ ತಾಲಿಬಾನ್ ಮತ್ತಷ್ಟು ಕಠಿಣ ನಿರ್ಬಂಧ
* ಪುರುಷರಿಲ್ಲದೇ ದೂರ ಪ್ರಯಾಣ ಇಲ್ಲ
* ಚುನಾವಣಾ ಆಯೋಗವೂ ರದ್ದು
ಕಾಬೂಲ್(ಡಿ.27): 20 ವರ್ಷಗಳ ನಂತರ ಮತ್ತೆ ಅಷ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್‌ಗಳು, ದೇಶದಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳನ್ನು ಮತ್ತಷ್ಟುಕಠಿಣಗೊಳಿಸಿದ್ದಾರೆ. ಪುರುಷ ಸಂಬಂಧಿ ಜೊತೆಗಿಲ್ಲದೇ ಹೋದಲ್ಲಿ ಮಹಿಳೆಯರು ಒಬ್ಬೊಂಟಿ ದೂರ ಪ್ರಯಾಣ ಮಾಡುವಂತಿಲ್ಲ. ಹಿಜಾಬ್ ಧರಿಸದೇ ಹೊರಗೆ ಬರುವಂತಿಲ್ಲ ಎಂದು ಉಗ್ರ ಸಂಘಟನೆ ಹೇಳಿದೆ.
ಜೊತೆಗೆ, ಮಹಿಳೆಯರು ಧಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಹಿಳೆಯರಿರುವರ ಕ್ಯಾಬ್‌ಗಳಲ್ಲಿ ಹಾಡು ಹಾಕುವಂತಿಲ್ಲ. ಮದುವೆ ಸಮಾರಂಭಗಳಲ್ಲಿ ಲೈವ್ ಮ್ಯೂಸಿಕ್ ಬ್ಯಾಂಡ್ ಮತ್ತು ಮಹಿಳೆ ಪುರುಷರು ಒಟ್ಟಿಗೆ ನೃತ್ಯ ಮಾಡುವಂತಿಲ್ಲ, ಮಹಿಳೆಯರಿಗೆ ದೇಹ ಪೂರ್ತಿ ಮುಚ್ಚುವಂತ, ಪಾರದರ್ಶಕವಲ್ಲದ ಬುರ್ಖಾ ಮತ್ತು ಕೈ ಗವಸು ಧರಿಸುವುದನ್ನು ಕಡ್ಡಾಯಗೊಳಿಸಿದೆ.
ಆಯೋಗವೇ ರದ್ದು:
ಇಸ್ಲಾಮಿಕ್ ಕಾನೂನಿನಡಿಯಲ್ಲಿ ಕಾರ್ಯನಿರ್ವಹಿಸುವ ಅಷ್ಘಾನಿಸ್ತಾನಕ್ಕೆ ಚುನಾವಣಾ ಆಯೋಗದ ಅವಶ್ಯಕತೆ ಇಲ್ಲ. ಚುನಾವಣೆಯಿಂದ ಆಫ್ಘನ್ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಹಾಗಾಗಿ ಆಯೋಗವನ್ನು ರದ್ದು ಮಾಡಲಾಗುತ್ತಿದೆ ಎಂದು ತಾಲಿಬಾನ್ ವಕ್ತಾರ ಬಿಲಾಲ್ ಕರೀಮಿ ಹೇಳಿದ್ದಾನೆ.
ಆಹಾರಕ್ಕಾಗಿ ದೇಹದ ಅಂಗಾಗಗಳನ್ನೇ ಮಾರುತ್ತಿರುವ ಅಫ್ಘಾನಿಗಳು!
ಅಫ್ಘಾನಿಸ್ತಾನದಲ್ಲಿ (Afghanistan) ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ತಾಲಿಬಾನ್ (Taliban) ಆಡಳಿತ ಮತ್ತೆ ಸ್ಥಾಪಿತವಾದ ಬಳಿಕ, ಅಲ್ಲಿನ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಬದುಕು ಸಾಗಿಸಲು ಜನರು ತಮ್ಮ ದೇಹಗಳ ಅಂಗಾಂಗಗಳನ್ನೇ (Body Organs) ಮಾರಾಟ ಮಾಡಿಕೊಂಡು ಜೀವನ ನಡೆಸುವಂತಹ ಪರಿಸ್ಥಿತಿಗೆ ಬಂದು ತಲುಪಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಬೂಲ್‌ನ (Kabul) ಬೀದಿಯೊಂದರ ಮರವೊಂದಕ್ಕೆ ಅಂಟಿಸಿದ್ದ ಭಿತ್ತಿಪತ್ರದಲ್ಲಿ "ಕಿಡ್ನಿ ಮಾರಾಟಕ್ಕಿದೆ" ಎಂದು ಬರೆಯಲಾಗಿದ್ದು, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದೆ.
ತಾಲಿಬಾನಿಗಳ ಕ್ರೂರ ಆಡಳಿತದ ಬಳಿಕ ಅಫ್ಘಾನಿಸ್ತಾನದಲ್ಲಿ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದು, ಅತ್ಯಗತ್ಯ ವಸ್ತುಗಳಾದ ಆಹಾರ ಹಾಗೂ ಇಂಧನದ ಬೆಲೆ ಗಗನಕ್ಕೇರಿದೆ. ಚಳಿಗಾಲದ ಸಂಕಷ್ಟಗಳಿಂದ ಅಫ್ಘನ್ನರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹಸಿವು ನೀಗಿಸಿಕೊಳ್ಳಲು ಜನರು ತಮ್ಮ ಹೆಣ್ಣು ಮಕ್ಕಳನ್ನು ಮತ್ತು ಆಸ್ತಿಗಳನ್ನೆಲ್ಲ ಮಾರಿಕೊಳ್ಳುತ್ತಿದ್ದಾರೆ.
ಹಸಿವೆ ಹಾಗೂ ಅರಾಜಕತೆಯಿಂದಾಗಿ ಸಾಯುವ ಅಫ್ಘನ್ನರ ಸಂಖ್ಯೆಯು ಮುಂದಿನ ದಿನಗಳಲ್ಲಿ ದುಪ್ಪಟ್ಟು ಇರಲಿದೆ ಎಂದು ವಿಶ್ವ ಸಂಸ್ಥೆಯ ವಿಶ್ವ ಸಂಸ್ಥೆಯ ಜಾಗತಿಕ ಆಹಾರ ಕಾರ್ಯಕ್ರಮ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.
India's Aid to Afghan : ಅಫ್ಘಾನ್‌ಗೆ ಭಾರತದ ನೆರವಿಗೆ ಪಾಕ್ ಅಡ್ಡಿ
ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ಅಷ್ಘಾನಿಸ್ತಾನ ಭೀಕರ ಬರ ಎದುರಿಸುತ್ತಿದ್ದು, ದೇಶದ 4 ಕೋಟಿ ಜನಸಂಖ್ಯೆಯ ಪೈಕಿ 2 ಕೋಟಿ 28 ಲಕ್ಷ ಜನ ಹಸಿವಿನ ಭೀತಿಗೆ ತುತ್ತಾಗಿದ್ದಾರೆ. ಅದರಲ್ಲೂ ಕೃಷಿಯನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ಪ್ರದೇಶದ ಮೇಲೆ ಬರ ಭೀಕರ ಪರಿಣಾಮ ಬೀರಿದ್ದು, 73 ಲಕ್ಷ ಜನ ಮತ್ತು ಜಾನುವಾರುಗಳು ಅತಂತ್ರರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ.
Afghanistan: Talibanಯಿಂದ ನಟಿ, ನಿರೂಪಕಿಯರಿಗೆ ಹೊಸ 'ಧಾರ್ಮಿಕ' ಮಾರ್ಗಸೂಚಿ!
ಈ ನಡುವೆ ನಿರುದ್ಯೋಗ, ಬಡತನದಿಂದ ತತ್ತರಿಸಿರುವ ಜನತೆಗೆ ಆಹಾರ ಪೂರೈಸಲು ತಾಲಿಬಾನ್ ಸರ್ಕಾರ, ಭಾರತದ ಉದ್ಯೋಗ ಖಾತ್ರಿ ಯೋಜನೆಯ ಕೂಲಿಗಾಗಿ ಕಾಳು ಎಂಬ ಯೋಜನೆ ಜಾರಿಗಳಿಸಿದೆ. ತಾಲಿಬಾನಿ ಆಡಳಿತ ಕಾರ್ಮಿಕರಿಗೆ ಸಂಬಳದ ರೂಪದಲ್ಲಿ ಗೋದಿ ನೀಡುತ್ತಿದೆ. ಅಷ್ಘಾನಿಸ್ತಾನದಾದ್ಯಂತ ಈ ಯೋಜನೆ ಜಾರಿ ಮಾಡಿದ್ದು, ರಾಜಧಾನಿ ಕಾಬೂಲ್ ಒಂದರಲ್ಲೇ 40,000 ಜನಕ್ಕೆ ಕಾಲುವೆ ತೋಡುವ ಕಾಮಗಾರಿ ನೀಡಿ ಸಂಬಳದ ರೂಪದಲ್ಲಿ ಗೋದಿ ನೀಡುತ್ತಿದೆ.