ತಾನು ಸುಲಭವಾಗಿ ಗಿನ್ನೆಸ್ ದಾಖಲೆ ಮಾಡಬೇಕು ಎಂದು ಒಂದು ವಾರಗಳ ಕಾಲ (7 ದಿನ) ಕಣ್ಣೀರು ಸುರಿಸಿ ಹುಚ್ಚಾಟ ಮಾಡಿದ ಯುವಕ ಈಗ ಕಣ್ಣಿನ ದೃಷ್ಟಿ ಕಳೆದುಕೊಂಡು ಪರದಾಡುವಂತಾಗಿದೆ.
ನೈಜೀರಿಯಾ (ಜು.20): ಸಾಮಾನ್ಯವಾಗಿ ಯಾವುದಾದರೂ ಒಂದು ರೀತಿಯಲ್ಲಿ ಹೆಸರು ಮಾಡಬೇಕು ಎಂದು ವಿವಿಧ ರೀತಿಯಲ್ಲಿ ಕಸರತ್ತು ಮಾಡುವ ಜನರು ಸಾಕಷ್ಟಿದ್ದಾರೆ. ಇನ್ನು ಕಲೆವರು ಅಪಾಯಕಾರಿ ಕೆಲಸಗಳನ್ನು ಮಾಡಿದರೆ, ಮತ್ತೆ ಕೆಲವರು ಹುಚ್ಚಾಟ ಎನ್ನುವಂತಹ ಕಾರ್ಯಗಳನ್ನು ಮಾಡಿ ಪೇಚಿಗೆ ಸಿಲುಕುತ್ತಾರೆ. ಆದರೆ, ಇಲ್ಲೊಬ್ಬ ನೈಜೀರಿಯಾ ಪ್ರಜೆಯೂ ಕೂಡ ತಾನು ಗಿನ್ನೆಸ್ ದಾಖಲೆ ಮಾಡಬೇಕೆಂದು ಬರೋಬ್ಬರಿ 7 ದಿನಗಳ ಕಾಲ ನಿದ್ದೆಯನ್ನೂ ಮಾಡದೇ ಕಣ್ಣೀರು ಸುರಿಸಿದ್ದಾರೆ.
ನಮ್ಮ ದೇಶದಲ್ಲಿ ಅಳುವುದು ಎಂದಾಕ್ಷಣ ಮಹಿಳೆಯರ ನೆನಪಾಗುತ್ತದೆ. ಮಹಿಳೆಯರು ಯಾವುದೇ ಸಣ್ಣ ವಿಚಾರಕ್ಕೂ ಕಣ್ಣೀರು ಸುರಿಸುತ್ತಾರೆ ಎಂಬ ನಂಬಿಕೆಯೂ ಪುರುಷ ಸಮಾಜದಲ್ಲಿ ಬೇರೂರಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಷ್ಟೇ ಅಳುತ್ತಾರೆ ಎಂಬ ನಂಬಿಕೆ ದೂರವಾಗಿದೆ. ಅಳುವಿನ ಬಗ್ಗೆ ಇಷ್ಟೊಂದು ಯಾಕೆ ಮಾತನಾಡಲಾಗುತ್ತಿದೆ ಎಂದರೆ, ಇಲ್ಲೊಬ್ಬ ನೈಜೀರಿಯಾದ ವ್ಯಕ್ತಿ ತಾನು ಅಳುವುದರಲ್ಲಿಯೇ ಗಿನ್ನೆಸ್ ದಾಖಲೆ ಮಾಡಬೇಕು ಎಂದು ವಿವಿಧ ಕಸರತ್ತು ಮಾಡಿ, ಈಗ ಕಣ್ಣು ದೃಷ್ಟಿಗೇ ಆಪತ್ತು ತಂದುಕೊಂಡಿದ್ದಾನೆ.
ರೈತರಿಗೆ ಹೆಣ್ಣು ಕೊಡ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ
ಗಿನ್ನೆಸ್ ದಾಖಲೆ ಎಂದಾಕ್ಷಣ ಏನಾದರೂ ಹೊಸತನ್ನು ಮಾಡಬೇಕು ಎಂದುಕೊಂಡ ಯುವಕ ಅಳುವುದರಲ್ಲಿಯೇ ದಾಖಲೆ ಮಾಡುವುದಕ್ಕೆ ಮುಂದಾಗಿದ್ದಾನೆ. ಇದಕ್ಕಾಗಿ ಸತತ 7 ದಿನಗಳ ಕಾಲ ನಿದ್ರೆಯನ್ನೂ ಮಾಡದೇ ಸತತವಾಗಿ ಕಣ್ಣೀರು ಹಾಕಿದ್ದಾನೆ. ಆದರೆ, ಕಣ್ಣೀರು ಸುರಿಸಿದ ದಾಖಲೆಗಳನ್ನು ಗಿನ್ನೆಸ್ ಸಂಸ್ಥೆಗೆ ಕಳುಹಿಸುವ ಮೊದಲೇ ಯುವಕನ ಕಣ್ಣು ದೃಷ್ಟಿಯೇ ನಿಂತು ಹೋಗಿದೆ. ಯಾರನ್ನೂ ಗುರುತಿಸಲಾಗದೇ ತನ್ನ ಕಣ್ಣುಗಳು ದೃಷ್ಟಿಯನ್ನು ಕಳೆದುಕೊಂಡಿವೆ ಎಂದು ಪರದಾಡಿದ್ದಾನೆ.
ಇನ್ನು ಕಣ್ಣೀರು ಸುರಿಸಿದ ವ್ಯಕ್ತಿಯನ್ನು ತೆಂಬು ಎಬೆರೆ ಎಂದು ಹೇಳಲಾಗುತ್ತಿದೆ. ಈ ವ್ಯಕ್ತಿ ಕಳೆದ 7 ದಿನಗಳ ಕಾಲ ಎಡೆಬಿಡದೆ ಅಳುತ್ತಾ ವಿಶ್ವದಾಖಲೆ ನಿರ್ಮಿಸಿದ್ದಾನೆ.
ಆದರೆ ಈ ದಾಖಲೆ ಮಾಡಿರುವ ಸಂತೋಷದ ಬೆನ್ನಲ್ಲೇ ಇತನಿಗೆ ಕಣ್ಣು ದೃಷ್ಟಿಯ ಸಂಕಷ್ಟ ಎದುರಾಗಿತ್ತು. ಕಣ್ಣೀರು ಸುರಿಸುವುದನ್ನು ನಿಲ್ಲಿಸಿದ ಆರಂಭದಲ್ಲಿ ತಲೆನೋವು, ಮುಖದ ಊತ, ಉಬ್ಬಿದ ಕಣ್ಣುಗಳ ನೋವುಗಳಿಂದ ಬಳಲುತ್ತಿದ್ದನು. ಇದಾದ ನಂತರ ಸುಮಾರು 45 ನಿಮಿಷಗಳ ಕಾಲ ತನ್ನ ದೃಷ್ಟಿ ಕಳೆದುಕೊಂಡಿದ್ದನು. ಇನ್ನು ವೈದ್ಯರ ಬಳಿ ಕಣ್ಣು ತಪಾಸಣೆ ಮಾಡಿಸಿದಾಗ, ಕಣ್ಣಿನಲ್ಲಿ ಮಂಜು ಕವಿದಂತಾಗಿದ್ದು ಕಣ್ಣು ಕಾಣಿಸುತ್ತವೆ ಎಂದು ಭರವಸೆ ನೀಡಿದ್ದಾರೆ. ಇನ್ನು ಚಿಕಿತ್ಸೆ ಪಡೆದು ಗುಣಮುಖನಾದ ನಂತರ, ತಾನು ಅಳುತ್ತಾ ರೆಕಾರ್ಡ್ ಕೂಡ ಮಾಡಿದ ದಾಖಲೆಗಳೊಂದಿಗೆ ಗಿನ್ನೆಸ್ ರೆಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಆದರೆ, ಗಿನ್ನೆಸ್ ಸಂಸ್ಥೆಯವರು ಅದನ್ನು ದಾಖಲೆಯಾಗಿ ಪರಿಗಣಿಸದೇ ತಿರಸ್ಕಾರ ಮಾಡಿದ್ದಾರೆ.
ಇನ್ನು ಒಂದು ವಾರಗಳ ಕಾಲ ಅಳುತ್ತಾ ಕಣ್ಣೀರು ಸುರಿಸಿದರೂ ಟೆಂಬು ಎಬರೆ ಎಂಬ ಯುವಕನಿಗೆ ಗಿನ್ನೆಸ್ ದಾಳೆಯೂ ಸಿಗಲಿಲ್ಲ. ಜೊತೆಗೆ, ಕಣ್ಣೀಗೂ ಸ್ವಲ್ಪ ಹಾನಿಯಾಗಿದ್ದು, ಇಂತಹ ಹುಚ್ಚಾಟಗಳನ್ನು ಮಾಡದಂತೆ ವೈದ್ಯರು ಸೂಚನೆಯನ್ನು ನೀಡಿದ್ದಾರೆ. ನೈಜೀರಿಯಾದಲ್ಲಿ ಟೆಂಬು ಎಬೆರೆ ಮಾತ್ರವಲ್ಲದೆ ಅನೇಕರು ಗಿನ್ನೆಸ್ ದಾಖಲೆಗೆ ವಿಚಿತ್ರ ಹಾಗೂ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆದರೆ, ದೇಹಕ್ಕೆ ಹಾನಿಯಾಗುವಂತಹ ಹಾಗೂ ಅಪಾಯಕಾರಿ ಆಗುವಂತಹ ಘಟನೆಗಳಿಂದ ಗಿನ್ನೆಸ್ ದಾಖಲೆ ಮಾಡುವ ಹುಚ್ಚು ಪ್ರಯತ್ನ ಮಾಡಬೇಡಿ ಎಂದು ಗಿನ್ನೆಸ್ ವರ್ಲ್ಡ್ ಮ್ಯಾನೇಜ್‌ಮೆಂಟ್ ನೈಜಿರಿಯಾ ಪ್ರಜೆಗಳಿಗೆ ಸೂಚನೆ ನೀಡಿದೆ.