ಕಾರ್ಮಿಕ ನೀತಿ ಸಡಿಲಗೊಳಿಸಿದ ಜರ್ಮನಿ, ಭಾರತೀಯರಿಗೆ ಮೊದಲ ಆದ್ಯತೆ!

Published : Jul 20, 2023, 03:25 PM ISTUpdated : Jul 20, 2023, 03:28 PM IST
ಕಾರ್ಮಿಕ ನೀತಿ ಸಡಿಲಗೊಳಿಸಿದ ಜರ್ಮನಿ, ಭಾರತೀಯರಿಗೆ ಮೊದಲ ಆದ್ಯತೆ!

ಸಾರಾಂಶ

ಜರ್ಮನಿಯಲ್ಲಿ ಹೊಸ ಕಾರ್ಮಿಕರ ನೀತಿಯನ್ನು ಜಾರಿಗೊಳಿಸಲಾಗಿದೆ. ಈ ನೀತಿಯಲ್ಲಿ ಭಾರತ ತನ್ನ ಸುದೀರ್ಘ ದಶಕಗಳ ಪಾರ್ಟ್ನರ್ ಎಂದು ಘೋಷಿಸಿದೆ. ಇಷ್ಟೇ ಅಲ್ಲ ಭಾರತದಿಂದ ಕೆಲಸಕ್ಕಾಗಿ ಜರ್ಮನಿಗೆ ಆಗಮಿಸುವವರಿಗೆ ರತ್ನಗಂಬಳಿ ಸ್ವಾಗತ ನೀಡಿದೆ. ಈ ಕುರಿತು ಜರ್ಮನಿ ಸಚಿವ ಮಾಹಿತಿ ನೀಡಿದ್ದಾರೆ.

ನವದೆಹಲಿ(ಜು.20) ಭಾರತ ಹಾಗೂ ಜರ್ಮನಿ ಹಲವು ವರ್ಷಗಳ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಇದಕ್ಕೂ ಮಿಗಿಲಾಗಿದೆ ಭಾರತದ ಅತೀ ಹೆಚ್ಚಿನ ವಿದ್ಯಾರ್ಥಿಗಳು ಜರ್ಮನಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಜರ್ಮನಿಯಲ್ಲಿ ಮೂರನೇ ಅತೀ ದೊಡ್ಡ ವಿದ್ಯಾರ್ಥಿಗಳ ಸಂಖ್ಯೆ ಭಾರತೀಯರು. ಇದೀಗ ಜರ್ಮನಿ ತನ್ನ ಕಾರ್ಮಿಕ ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಈ ನೀತಿಯಲ್ಲಿ ಭಾರತಕ್ಕೆ ವಿಶೇಷ ಸ್ಥಾನ ನೀಡಿದೆ. ಭಾರತದಿಂದ ಪ್ರತಿಭಾನ್ವಿತ, ನುರಿತ ಕೆಲಸಗಾರರಿಗೆ ಜರ್ಮನಿಯಲ್ಲಿ ಎಲ್ಲಾ ರೀತಿಯ ಅವಕಾಶ ನೀಡಲಾಗುವುದು ಎಂದು ಜರ್ಮನಿ ಹೇಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜರ್ಮನಿ ಕಾರ್ಮಿಕ ಹಾಗೂ ಸೋಶಿಯಲ್ ಅಫೇರ್ ಸಚಿವ ಹಬರ್ಟಸ್ ಹೈಲ್ ಹೇಳಿದ್ದಾರೆ.

ಜರ್ಮನಿಗೆ ಉತ್ತಮ ಹಾಗೂ ನುರಿತ ಕೆಲಸಗಾರರ ಅಗತ್ಯವಿದೆ. ಜರ್ಮನಿ ಸ್ಥಳೀಯವಾಗಿ ಈ ಕುರಿತು ಪ್ರತಿಭಾನ್ವಿತ ಕೆಲಸಗಾರರನ್ನು ತಯಾರು ಮಾಡುತ್ತಿದೆ. ಆದರೆ ವಿಶ್ವಮಟ್ಟದಲ್ಲಿ ಸ್ಪರ್ಧಿಸಲು ಹೆಚ್ಚಿನ ಕೆಲಸಗಾರರ ಅಗತ್ಯವಿದೆ. ಹೀಗಾಗಿ ನಾವು ಭಾರತವನ್ನು ನಮ್ಮ ಮೊದಲ ಆಯ್ಕೆಯಾಗಿ ನೋಡುತ್ತಿದ್ದೇವೆ ಎಂದು ಹಬರ್ಟಸ್ ಹೈಲ್ ಹೇಳಿದ್ದಾರೆ. 

ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆ: ಎಸ್ & ಪಿ ವರದಿ

ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತ ಹಾಗೂ ಜರ್ಮನಿ ಮೈಗ್ರೇಶನ್ ವಿಚಾರದಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಬೆನ್ನಲ್ಲೇ ಇದೀಗ ಜರ್ಮನಿ ಭಾರತೀಯರಿಗೆ ಉತ್ತಮ ವೇತನ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ನೀಡಿ ಕೆಲಸ ನೀಡಲು ಸದಾ ಸಿದ್ಧ ಎಂದಿದೆ. ಭಾರತ ಜನಸಂಖ್ಯೆಯಲ್ಲಿ ಅತೀ ದೊಡ್ಡ ರಾಷ್ಟ್ರ. ಭಾರತದ ಸರಾಸರಿ ವರ್ಷ 28. ಯುವ ಸಮೂಹ ಉತ್ತಮ ಭವಿಷ್ಯರೂಪಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿಭಾನ್ವಿತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಭಾರತೀಯರು ಜರ್ಮನಿ ಮೊದಲ ಆದ್ಯತೆ ನೀಡಲಿದೆ ಎಂದು ಹಬರ್ಟಸ್ ಹೇಳಿದ್ದಾರೆ.

ಜರ್ಮನಿಗೆ ಕೆಲ ಕ್ಷೇತ್ರಗಳಲ್ಲಿ ನುರಿತರ ಅಗತ್ಯವಿದೆ. ಭಾರತದಿಂದ ನಾವು ಐಟಿ ವೃತ್ತಿಪರರು, ಎಂಜಿನೀಯರ್ಸ್, ನರ್ಸ್ ಸೇರಿದಂತೆ ಹಲವು ಕ್ಷೇತ್ರದ ನುರಿತರನ್ನು ನೇಮಕ ಮಾಡಿಕೊಳ್ಳಲು ಜರ್ಮನಿ ತಯಾರಾಗಿದೆ. ನಮ್ಮ ನೂತನ ಕಾರ್ಮಿಕ ನೀತಿಯಲ್ಲಿ ವಿದೇಶಗಳ ನುರಿತರಿಗೆ ಮುಕ್ತ ಅವಕಾಶ ನೀಡಿದೆ. ಆದರೆ ನಾವು ಕೆಲ ದೇಶಗಳಿಂದ ಕೆಲಸಕ್ಕೆ ನೇಮಕ ಮಾಡಲು ಸಮಸ್ಯೆ ಇದೆ. ಉದಾಹರಣೆಗೆ ಕೆಲ ದೇಶಗಳಲ್ಲಿ ನರ್ಸಿಂಗ್ ವ್ಯಾಸಾಂಗದ ಸಮಸ್ಯೆ ಇದೆ. ಇಂತಹ ದೇಶಗಳಿಂದ ನರ್ಸ್‌ಗಳನ್ನು ನೇಮಕ ಮಾಡಲು ಸಾಧ್ಯವಿಲ್ಲ. ಆದರೆ ಭಾರತಿಂದ ಈ ರೀತಿಯ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಕ್ಷೇತ್ರದಿಂದ ನಾವು ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಹಬರ್ಟಸ್ ಹೇಳಿದ್ದಾರೆ.

ಜರ್ಮನಿಗೆ ಎಲ್ಲರಿಗೂ ಸ್ವಾಗತ, ನೀವು ಜರ್ಮನಿಯಲ್ಲಿ ಉಳಿಯುವುದಾದರೆ ಮತ್ತಷ್ಟು ಸಂತೋಷ. ಎಲ್ಲಾ ರೀತಿಯಲ್ಲಿ ಜರ್ಮನಿ ನಿಮಗೆ ನೆರವು ನೀಡಲಿದೆ ಎಂದು ಹಬರ್ಟಸ್ ಹೇಳಿದ್ದಾರೆ. ಜರ್ಮನಿಯಲ್ಲಿ ಬಂದು ನೆಲೆಸಲು, ಆಗಮಿಸಲು ವೀಸಾ, ಇಲ್ಲಿನ ಕೆಲ ನಿಯಮಗಳನ್ನು ನಾವು ಸಡಿಲ ಮಾಡಿದ್ದೇವೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೇ ಪ್ರಯಾಣ ಮಾಡಬಹುದು ಎಂದಿದ್ದಾರೆ.

ಜರ್ಮನಿಯಲ್ಲಿನ ಮೋದಿ ಕಾರ್ಯಕ್ರಮದಲ್ಲಿ ಮೊಳಗಿತು ಕನ್ನಡ ಹಾಡು!

ಜರ್ಮನಿಯಲ್ಲಿ ಭಾರತದ ಅತೀ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಇಲ್ಲಿನ ಒಂದು ಸಮಸ್ಯೆ ಎಂದರೆ ಇಲ್ಲಿ ಜರ್ಮನಿಯನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ. ಹೀಗಾಗಿ ಭಾಷಾ ಸಮಸ್ಯೆಯಾಗಬಹುದು. ಆದರೆ ಇದು ಗಂಭೀರ ವಿಚಾರವಲ್ಲ. ಇಂಗ್ಲೀಷ್ ಭಾಷೆಯಲ್ಲಿ ಸಂವಹನವಿದೆ ಎಂದು ಹಬರ್ಟಸ್ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?