ನೀವು ಫ್ಲೈಟ್ ಅಟೆಂಡೆಂಟ್ ಆಗಿದ್ದೀರಿ, ನನ್ನ ತಲೆಯ ಹಿಂಭಾಗವು ಒತ್ತಡದಿಂದ ಸ್ಫೋಟಗೊಂಡಿದೆ ಎಂದು ನಾನು ತಿಳಿಸಬೇಕಾಗಿತ್ತು" ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಟಿಕ್‌ಟಾಕ್‌ನ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಆಪ್‌ನಲ್ಲಿ ಮಹಿಳೆಯೊಬ್ಬರು ವಿಮಾನದಲ್ಲಿದ್ದಾಗ ಗಾಳಿಯ ಒತ್ತಡದಿಂದ ತನ್ನ ತಲೆಯ ಹಿಂಭಾಗವು ಹೇಗೆ ಸ್ಫೋಟಗೊಂಡಿದೆ ಅಥವಾ ಸಿಡಿದಿದೆ ಎಂಬುದನ್ನು ಬಹಿರಂಗಪಡಿಸಿದ್ದು,ಇದು ಸ್ವತ: ನೆಟ್ಟಿಗರನ್ನೇ ಬೆಚ್ಚಿಬೀಳಿಸಿದೆ. ಟಿಕ್‌ಟಾಕ್ ಬಳಕೆದಾರರಾದ @polish_99 ಎಂಬ ಹ್ಯಾಂಡಲ್ ಹೊಂದಿರುವ ವೆರೋನಿಕಾ ಅಕ್ಟೋಬರ್ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಈ ವಿಡಿಯೋದಲ್ಲಿ ಆಕೆ ತಲೆಯ ಸುತ್ತಲೂ ಬ್ರೇಸ್ ಅನ್ನು ಸುತ್ತಿಕೊಂಡಿದ್ದು, ಅವಳ ಮುಖದ ಮೇಲೆ ಮೂಗೇಟುಗಳನ್ನು ಹೊಂದಿರುವುದನ್ನು ತೋರಿಸಿದೆ.
"POV: ನೀವು ಫ್ಲೈಟ್ ಅಟೆಂಡೆಂಟ್ ಆಗಿದ್ದೀರಿ, ನನ್ನ ತಲೆಯ ಹಿಂಭಾಗವು ಒತ್ತಡದಿಂದ ಸ್ಫೋಟಗೊಂಡಿದೆ ಎಂದು ನಾನು ತಿಳಿಸಬೇಕಾಗಿತ್ತು" ಎಂದು ಮಹಿಳೆ ಬರೆದುಕೊಂಡಿದ್ದಾಳೆ. ಈ ವಿಡಿಯೋ 6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಇದರೊಂದಿಗೆ, ಇನ್ನೂ ಹೆಚ್ಚಿನ ವಿಡಿಯೋಗಳನ್ನು ಪೋಸ್ಟ್ ಮಾಡಿದ ವೆರೋನಿಕಾ, ಗಾಳಿಯ ಒತ್ತಡದಿಂದಾಗಿ ವಿಮಾನದಲ್ಲಿ ತಾನು ಈ ಹಿಂದೆ ಹಾಕಿಸಿಕೊಂಡಿದ್ದ ಹೊಲಿಗೆಗಳು ತೆರೆದುಕೊಂಡಿದ್ದರಿಂದ ಈ ದುರಂತವು ಹೇಗೆ ಸಂಭವಿಸಿತು ಎಂಬುದನ್ನು ವಿವರಿಸುತ್ತದೆ.
ಇದನ್ನು ಓದಿ: ಟಿಕ್‌ಟಾಕ್‌ನಲ್ಲಿ ಅರಳಿದ ಪ್ರೇಮ: ಪ್ರೀತಿಸಿದಾಕೆಯ ಜೊತೆ ಪತಿಗೆ ಮದುವೆ ಮಾಡಿಸಿದ ಪತ್ನಿ
ತಾನು ಇತ್ತೀಚೆಗೆ ‘ಪಾಕ್ಸ್ ಐ’ ಲಿಫ್ಟ್ ಮತ್ತು ಕುತ್ತಿಗೆ ಲಿಫ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು ಮತ್ತು ಅವಳು ಹಾರಾಟಕ್ಕೆ ಒಂದು ದಿನ ಮೊದಲು ಇಬ್ಬರು ವೈದ್ಯರಿಂದ ವಿಮಾನದಲ್ಲಿ ಹಾರಾಡಲು ಅರ್ಹಳು ಎಂಬ ಪ್ರಮಾಣೀಕರಣವನ್ನು ಪಡೆದಳು. ಇನ್ನು, ವಿಮಾನ ನಿಲ್ದಾಣ ವೈದ್ಯರಿಂದ ಸಹ ಆಕೆಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಯಿತು ಮತ್ತು ಆಕೆ ಫ್ಲೈಟ್‌ನಲ್ಲಿ ಕುಳಿತುಕೊಂಡಳು.
ಆದರೆ ಮಲಗಿದ್ದಾಗ ಅವಳು ಇದ್ದಕ್ಕಿದ್ದಂತೆ ಎಚ್ಚರಗೊಂಡಳು ಮತ್ತು ಅವಳ ಎಡ ಕಿವಿಯಿಂದ ಸಾಕಷ್ಟು ನೋವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾಳೆ. "ನಾನು ಎಚ್ಚರಗೊಂಡೆ ಮತ್ತು ನಾನು ತುಂಬಾ ನೋವಿನಲ್ಲಿದ್ದೆ. ನನ್ನ ಕಿವಿ ನಿಜವಾಗಿಯೂ ನೋವಿನಿಂದ ಕೂಡಿದೆ" ಎಂದೂ ಆಕೆ ಹೇಳಿದ್ದಾಳೆ. ನಂತರ, "ನಾನು ಎದ್ದು, ಶೌಚಾಲಯಕ್ಕೆ ಹೋದೆ, ಮತ್ತು ನಾನು ಈ ಶಬ್ದವನ್ನು ಕೇಳಿದೆ" ಎಂದು ಆಕೆ ಹೇಳಿದಳು.
ಕಿವಿಯ ಹಿಂದಿನ ಇನ್ಸಿಷನ್ ಒಡೆದಿದೆ ಎಂದು ಆಕೆ ಅರಿತುಕೊಂಡಳು. ಈ ಬಿಸಿ ದ್ರವವು ನನ್ನ ಕುತ್ತಿಗೆಯ ಕೆಳಗೆ ಜಿನುಗುತ್ತಿರುವುದನ್ನು ನಾನು ಅನುಭವಿಸಲು ಪ್ರಾರಂಭಿಸಿದೆ ಮತ್ತು ನಾನು ಟವೆಲ್‌ಗಳನ್ನು ಹಿಡಿದುಕೊಂಡು ಒರೆಸಲು ಪ್ರಾರಂಭಿಸಿದೆ. ನಂತರ ರಕ್ತ ಬಂದಿತು. ಲಿಪೋ ಇರುವವರಿಗೆನಿ ಮ್ಮಿಂದ ಹೊರಬರುವ ದ್ರವವು ಹಳದಿ ರಕ್ತದೊಂದಿಗೆ ಇರುತ್ತದೆ ಎಂದೂ ಆಕೆ ಟಿಕ್‌ಟಾಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Skydiving ವೇಳೆ ಪ್ಯಾರಾಚೂಟ್ ತೆರೆಯಲು ವಿಳಂಬ: TikTok Star ತಾನ್ಯಾ ದುರಂತ ಸಾವು
ವೆರೋನಿಕಾ ತನ್ನ ಶಸ್ತ್ರಚಿಕಿತ್ಸೆಯ ನಂತರ ಅವಳ ಕಿವಿಯ ಹಿಂದೆ ಅದೇ ಸ್ಥಳದಲ್ಲಿ ಡ್ರೈನ್ ಮಾಡಿದ್ದರಿಂದ ಅದು ಸಂಭವಿಸಿದೆ ಎಂದು ಊಹಿಸಲಾಗಿದ್ದು, ಅಲ್ಲಿ ಹೆಚ್ಚಿನ ದ್ರವವು ಸಂಗ್ರಹಗೊಳ್ಳುತ್ತದೆ. "ಅದು ಹೊರಬಂದಾಗ, ಎಲ್ಲಾ ದ್ರವವು ಒಂದೇ ಸಮಯದಲ್ಲಿ ಹೊರಬಂದಿತು," ಎಂದೂ ಮಹಿಳೆ ಹೇಳಿಕೊಂಡಿದ್ದಾಳೆ.
ತನ್ನ ಪರಿಸ್ಥಿತಿಯ ಬಗ್ಗೆ ಫ್ಲೈಟ್ ಅಟೆಂಡೆಂಟ್‌ಗೆ ತಿಳಿಸಿದ ನಂತರ, ಅವರು ವಿಮಾನವು ಲ್ಯಾಂಡ್ ಆಗುವರೆಗೆ ಬ್ಲಾಂಕ್ ಕಂಪ್ರೆಷನ್ ಬ್ಯಾಂಡ್ ಅನ್ನು ಅವಳ ತಲೆಗೆ ಸುತ್ತುವಂತೆ ಹೇಳಿದರು. ದ್ರವವು ಸೋರಿಕೆಯಾಗದಂತೆ ಒಡೆದಿರುವ ತಲೆಯ ಹೊದಿಕೆಯಲ್ಲಿ ಟಿಶ್ಯೂ ಪೇಪರ್‌ಗಳನ್ನು ತುಂಬಿದಳು. "ವಿಮಾನದಲ್ಲಿ ನಾನು ತುಂಬಾ ನೋವಿನಿಂದ ಬಳಲುತ್ತಿದ್ದೆ ಮತ್ತು ಅದು ತುಂಬಾ ಬಿಸಿಯಾಗಿತ್ತು" ಎಂದೂ ಆಕೆ ಹೇಳಿದ್ದಾಳೆ.
ಎಲ್ಲಾ ದ್ರವವು ಒಣಗಿದ ನಂತರ ಡ್ರೈನ್ ಇದ್ದ ರಂಧ್ರದ ಚಿತ್ರವನ್ನು ಆಕೆ ತನ್ನ ಶಸ್ತ್ರಚಿಕಿತ್ಸಕನಿಗೆ ಕಳುಹಿಸಿದಳು ಎಂದು ತಿಳಿದುಬಂದಿದೆ. ಇನ್ನು, ಈ ವಿಡಿಯೋಗೆ ಹಲವು ಟಿಕ್‌ಟಾಕ್ ಬಳಕೆದಾರರು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಹಲವರು ಆಕೆಗೆ ಸಹಾನುಭೂತಿ ವ್ಯಕ್ತಪಡಿಸಿದ್ದರೆ, ಹಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 15 ಕೋಟಿ TikTok ಫಾಲೋವರ್ಸ್: ಖಾಬಿ ಲೇಮ್‌ಗೆ ಒಂದು ಪೋಸ್ಟ್‌ಗೆ ಇಷ್ಟು ಹಣ ಸಿಗುತ್ತೆ..!