
ಇಸ್ರೇಲ್ (ನ.09) ಇಸ್ರೇಲ್ ಚುನಾವಣಾ ಫಲಿತಾಂಶ ಬಂದ ದಿನಗಳು ಉರುಳುತ್ತಿದ್ದರೂ ಸರ್ಕಾರ ರಚನೆ ಕಗ್ಗಂಟಾಗಿದೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಲಿಕುಡ್ ಪಾರ್ಟಿ, ವಿರೋಧಿ ಪಕ್ಷವಾಗಿರುವ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್‌ಗೂ ಸ್ಪಷ್ಟಬಹುಮತ ಸಿಕ್ಕಿಲ್ಲ. ಇದೀಗ ಇಸ್ರೇಲ್ ಪ್ರಧಾನಿ ಐಸನ್‌ಕೋಟ್‌ಗೆ ಸರ್ಕಾರ ರಚನೆಗೆ ಆಹ್ವನಾ ನೀಡಿದ್ದಾರೆ. ಇದೇ ವೇಳೆ 28 ದಿನದಲ್ಲಿ ಬಹುಮತ ಸಾಬೀತುಪಡಿಸಲು ಡೆಡ್‌ಲೈನ್ ನೀಡಿದ್ದಾರೆ. ಇದರ ಬೆನ್ನಲ್ಲೇ ಐಸನ್‌ಕೋಟ್, ನೇತನ್ಯಾಹು ಅವರ ಲಿಕುಡ್ ಪಾರ್ಟಿಯ ಸದಸ್ಯರು ಸರ್ಕಾರ ರಚನೆಗೆ ಬೆಂಬಲ ನೀಡಲು ಮನವಿ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಬೆಂಜಮಿನ್ ನೇತನ್ಯಾಹು ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಬೆಂಜಮಿನ್ ನೇತನ್ಯಾಹು ತಮ್ಮ ಭಾಷಣದಲ್ಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ದೇಶ ಎದುರಿಸುವ ಆರ್ಥಿಕ ಸವಾಲು, ಭದ್ರತಾ ಪರಿಸ್ಥಿತಿ, ಯುದ್ಧ ಸನ್ನಿವೇಶಗಳಲ್ಲಿ ರಾಜಕೀಯ ಸ್ಥಿರತೆ ಮುಖ್ಯ. ದೇಶದ ಭದ್ರತೆ ಅತೀವ ಮುಖ್ಯವಾಗಿದೆ. ಈ ಹಂತದಲ್ಲಿ ಹೊಸ ಸರ್ಕಾರ ಸುಭದ್ರವಾಗಿರುವುದು ಅತೀ ಮುಖ್ಯ. ಹೀಗಾಗಿ ದೇಶದ ಐಕ್ಯತೆ, ಭದ್ರತೆ ಹಾಗೂ ಸುರಕ್ಷತೆ ಕಾರಣದಿಂದ ಐಸನ್‌ಕೋಟ್ ಜೊತೆ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಲು ಲಿಕುಡ್ ಪಾರ್ಟಿ ಮುಕ್ತವಾಗಿದೆ ಎಂದು ನೇತನ್ಯಾಹು ಅಚ್ಟರಿ ಹೇಳಿಕೆ ನೀಡಿದ್ದಾರೆ.
ಬೆಂಜಮಿನ್ ನೇತನ್ಯಾಹು ಅವರ ಲಿಕುಡ್ ಪಾರ್ಟಿ ವಿರುದ್ಧ ಐಸನ್‌ಕೋಟ್ ಯಾಶರ್ ಪಾರ್ಟಿ ಸ್ಪರ್ಧಿಸಿತ್ತು. ಇಬ್ಬರು ಪರಸ್ಪರ ವಿರೋಧಿಗಳು. ಇಬ್ಬರ ಪಾರ್ಟಿ ಬೇರೆ ಬೇರೆ. ಇದೀಗ ದೇಶದ ಐಕ್ಯತೆ, ಭದ್ರತೆಗಾಗಿ ಸ್ಥಿರ ಸರ್ಕಾರ ನೀಡಲು ಬೆಂಬಲ ನೀಡುವುದಾಗಿ ನೆತನ್ಯಾಹು ಘೋಷಿಸಿದ್ದಾರೆ. ಆದರೆ ನೆತನ್ಯಾಹು ಹೇಳಿಕೆಯನ್ನು ಹಲವರು ರಾಜಕೀಯದ ಕೊನೆಯ ದಾಳ ಎಂದು ವಿಶ್ಲೇಷಿಸಿದ್ದಾರೆ. ನೆತನ್ಯಾಹು ಅಧಿಕಾರ ಉಳಿಸಿಕೊಳ್ಳಲು ಮಾಡುತ್ತಿರುವ ಕೊನೆಯ ಹೋರಾಟ ಇದು ಎಂದಿದ್ದಾರೆ.
120 ಸದಸ್ಯ ಬಲದ ಇಸ್ರೇಲ್ ಸಂಸತ್ (Knesset) ನಲ್ಲಿ ಸರ್ಕಾರ ರಚಿಸಲು 61 ಸ್ಥಾನಗಳ ಅಗತ್ಯವಿದೆ. ಇತ್ತೀಚಿನ ಚುನಾವಣೆಯಲ್ಲಿ ನೆತನ್ಯಾಹು ಮೈತ್ರಿಕೂಟ 53 ಸ್ಥಾನಗಳಿಗಷ್ಟೇ ಸೀಮಿತವಾಗಿದ್ದರೆ, ಗಾಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟಕ್ಕೆ 67 ಸಂಸದರು ಆಡಳಿತಕ್ಕೆ ಬೆಂಬಲ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ