ವಿಸ್ಕಿ, ವೈನ್‌ನಿಂದ ಬಿಲಿಯನ್ ಡಾಲರ್ ಡೀಲ್‌ಗಳವರೆಗೆ.. ಎನ್ವಿಡಿಯಾ CEO ಚೀನಾದ ಗೂಢಚಾರದ Honeytrap ಬಲೆಗೆ ಬಿದ್ದಿದ್ದು ಹೇಗೆ? Inside story

Published : Nov 09, 2026, 04:23 PM IST
Nvidias Jensen Huang Admits To Affair With Suspected Chinese Spy

ಸಾರಾಂಶ

ಕೃತಕ ಬುದ್ಧಿಮತ್ತೆ (ಎಐ) ಮತ್ತು ಚಿಪ್ ದೈತ್ಯ ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಮತ್ತು ಚೀನಾದ ಗುಪ್ತಚರ ಸಂಸ್ಥೆಯ ಉದ್ಯಮಿ ಆಲಿಸ್ ಹುವಾಂಗ್ ನಡುವಿನ ಸಂಬಂಧದ ಬಗ್ಗೆ ಅಮೆರಿಕ ಗುಪ್ತಚರ ಸಂಸ್ಥೆ ರಹಸ್ಯ ಮಾಹಿತಿ ನೀಡಿದೆ. ಈ ಸಂಬಂಧದ ಮೂಲಕ ಚೀನಾ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪಿತೂರಿ ಮಾಡುತ್ತಿರಬಹುದು ಎಂದು ಶಂಕಿಸಲಾಗಿದೆ.

ಕೃತಕ ಬುದ್ಧಿಮತ್ತೆ (ಎಐ) ಮತ್ತು ಚಿಪ್ ದೈತ್ಯ Nvidia ಸಿಇಓ ಜೆನ್ಸನ್ ಹುವಾಂಗ್ ಬಗ್ಗೆ ಅಮೆರಿಕ ಗುಪ್ತಚರ ಸಂಸ್ಥೆ ರಹಸ್ಯ ಮಾಹಿತಿ ನೀಡಿದೆ. ಬೆನ್ನಲ್ಲೇ ಸಿಇಒ ಜೆನ್ಸನ್ ಹುವಾಂಗ್ ಮೇಲೆ ಅನುಮಾನಗಳು ಶುರುವಾಗಿದ್ದು, ವಿಶ್ವದೆಲ್ಲಡೆ ಸಂಚಲನ ಸೃಷ್ಟಿಯಾಗಿದೆ.

ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದ್ದು ಏನು?

ಚೀನಾದ ಗುಪ್ತಚರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯಮಿ ಆಲಿಸ್ ಹುವಾಂಗ್ ಜೊತೆ ಜೆನ್ಸನ್ ಹುವಾಂಗ್‌ ನಡುವೆ ಸಂಬಂಧ ಇದೆ. ಅವರಿಬ್ಬರು ನಿಕಟ ಮತ್ತು ಪ್ರಣಯ ಸಂಬಂಧ ಹೊಂದಿದ್ದಾರೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದೆ. ಆ ಮೂಲದ ಅಮೆರಿಕದ ಹುವಾಂಗ್‌ ಅವರನ್ನು ಬಳಿಸಿಕೊಂಡು ಚೀನಾ ಮೋಸ ಮಾಡಲು ಯತ್ನಿಸುತ್ತಿರಬಹುದು. ಯಾಕೆಂದರೆ ವಿಶ್ವದ ಅತ್ಯಂತ ಪ್ರಭಾವಶಾಲಿ ಟೆಕ್ ದೈತ್ಯ ಜೇನ್ಸನ್ ಹುವಾಂಗ್. ಅವರಿಂದ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಎಐ ಉದ್ಯಮಕ್ಕೆ ಸಂಬಂಧಿಸಿ ಅವರ ನಿರ್ಧಾರಗಳ ಮೇಲೆ ಪ್ರಭಾರ ಬೀರಲು ಚೀನಾ ಬೇಹುಗಾರಿಕೆಯ ಪಿತೂರಿ ಮಾಡಿರಬಹುದು ಎಂದು ಅಮೆರಿಕ ಗುಪ್ತಚರ ಸಂಸ್ಥೆ ಅನುಮಾನ ವ್ಯಕ್ತಪಡಿಸಿದೆ.

ಈ ವಿಚಾರವನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿದೆ. ಅಮೆರಿಕ ಗುಪ್ತಚರ ಇಲಾಖೆಯು ಇದನ್ನು ಮೊದಲೇ ತಿಳಿದುಕೊಂಡಿತ್ತು. ಆದರೆ ಅದರ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಆದರೆ ವಿಷಕ್ಕೆ ಸಂಬಂಧಿಸಿ ಒಂದು ವರದಿಯನ್ನ ಸಿದ್ಧಮಾಡಿತ್ತು. ಬಳಿಕ ಅಮೆರಿಕ ಸರ್ಕಾರಕ್ಕೆ ಗೌಪ್ಯವಾಗಿ ನೀಡಿತ್ತು ಎಂದು ಫೈನಾನ್ಷಿಯಲ್ ಟೈಮ್ಸ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿವೆ.

ಡೈಲಿ ಮೇಲ್ ವರದಿ ಪ್ರಕಾರ.. ಜೆನ್ಸನ್ ಹುವಾಂಗ್ ಅವರನ್ನು ಸಂಪರ್ಕಿಸಲು ಚೀನಾದ ಗುಪ್ತಚರ ಇಲಾಖೆ ಆಲಿಸ್ ಹುವಾಂಗ್‌ರನ್ನು ಸಂಪರ್ಕಿಸಿರಬಹುದು. ಯಾಕೆಂದರೆ ಇವರಿಬ್ಬರು ತೈಪೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗಿಯಾಗಿದ್ದರು. 2024, ಜುಲೈನಲ್ಲಿ ತೈಪೆ ಕಾರ್ಯಕ್ರಮ ನಡೆದಿತ್ತು. ಅದಾದ ನಂತರ ಇಬ್ಬರು ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಂದ ಅವರಿಬ್ಬರು ಡೇಟ್ ಮಾಡಲು ಶುರುಮಾಡಿದಂತಿದೆ. ತೈಪೆ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಬಾರ್‍‌ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು ಎಂದು ವರದಿ ಹೇಳಿದೆ.

ಅದೇ ರೀತಿ 2025 ರಲ್ಲೂ ಮತ್ತೊಮ್ಮೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡರು. ಎನ್ವಿಡಿಯಾ ಮುಖ್ಯಸ್ಥ ಜೇನ್ಸನ್ ಹುವಾಂಗ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಈಕೆ ಭಾಗಿಯಾಗಿದ್ದಳು. ಈ ವೇಳೆ ನಡೆದ ಲೈವ್ ವಿಡಿಯೋದಲ್ಲಿ ಹುವಾಂಗ್ ಮತ್ತು ಆಲಿಸ್ ಒಟ್ಟಿಗೆ ಕೂತಿರೋದು ವೈರಲ್ ಆಗಿತ್ತು. ನಂತರ ಹುವಾಂಗ್ ಅವರು ಮಾಧ್ಯಮಗಳ ಎದುರು ಬಂದಾಗಲೂ ಆಲಿಸ್ ಹಿಂಬಾಲಿಸಿದ್ದರು. ಬೆನ್ನಲ್ಲೇ ಇಬ್ಬರು ಒಂದೇ ಕಾರಿನಲ್ಲಿ ಒಟ್ಟಿಗೆ ಹೊರಟು ಹೋದರು.

ಆಲಿಸ್ ಹುವಾಂಗ್‌ ಯಾರು?

ಆಲಿಸ್ ಹುವಾಂಗ್ ಅವರನ್ನು ಹುವಾಂಗ್ ಲೇ ಎಂದು ಕರೆಯಲಾಗುತ್ತದೆ. ಈಕೆ ಚೀನಾದ ಪ್ರಜೆ. AI ಚಿಪ್ ಉದ್ಯಮದ ಮೇಲೆ ಪ್ರಬಾವ ಹೊಂದಿದ್ದಾರೆ. ಅವರು ಈ ತಂತ್ರಜ್ಞಾನಕ್ಕೆ ಪ್ರವೇಶ ಮಾಡುವ ಮೊದಲು ದೂರದರ್ಶನದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಳು. ಇನ್ನು ಕೆಲವು ಮಾಹಿತಿಗಳ ಪ್ರಕಾರ, HSBC ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚೀನಾ ರಾಜ್ಯದ ಪ್ರಸಾರಕ ಸಿಸಿಟಿವಿ ಮತ್ತು ಹುನಾನ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ಬಳಿಕ ಅವರು ಸಿಂಗಾಪುರ ಮೂಲದ ಮೆಗಾಸ್ಪೀಡ್ ಇಂಟರ್‍‌ನ್ಯಾಷನಲ್‌ನಲ್ಲಿ ಸೀನಿಯರ್ ಎಕ್ಸಿಕ್ಯೂಟೀವ್ ಆದರು. ಇದು ಎಐ ಸಿಸ್ಟಮ್‌ಗಳಿಗೆ ಟ್ರೈನಿಂಗ್ ಹಾಗೂ ಕಂಪನಿಗಳಿಗೆ ಕಂಪ್ಯೂಟಿಂಗ್ ಶಕ್ತಿಯ ನೀಡುವ ಕಂಪನಿ ಆಗಿದೆ. ಇದೇ ಮೆಹಾಸ್ಪೀಡ್ ನವ್ವಿಡಿಯಾ ಕಂಪ್ಯೂಟಿಂಗ್ ಪವರ್ ಕ್ಲೌಡ್ ವ್ಯವಹಾರದಲ್ಲಿ ಪ್ರಮುಖ ಪಾಲುದಾರ ಎನ್ನಲಾಗಿದೆ.

ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ..ಮೆಗಾಸ್ಪೀಡ್ ಮೇಲೆ 2024ರಿಂದ ಅಮೆರಿಕ ಕಣ್ಣಿಟ್ಟಿದೆ. ಈ ಕಂಪನಿಯು ನಿಷೇಧಿತ ಚಿಪ್‌ಗಳ ಪೂರೈಕೆಯಲ್ಲಿ ಭಾಗಿಯಾಗಿರುವ ಶಂಕೆಯನ್ನ ವ್ಯಕ್ತಪಡಿಸಿದೆ. ಎನ್‌ವಿಡಿಯಾದಿಂದ ಸುಧಾರಿತ AI ಪ್ರೊಸೆಸರ್‌ಗಳನ್ನು ಹಿಂಬಾಗಿಲಿನ ಮೂಲಕ ಚೀನಾಕ್ಕೆ ಕಳ್ಳಸಾಗಣೆ ಮಾಡಲು ಕಂಪನಿಯು ಸಹಾಯ ಮಾಡುತ್ತಿದೆ ಎಂದು ಮೆಗಾಸ್ಪೀಡ್ ಮೇಲೆ ಅಮೆರಿಕ ಅನುಮಾನ ವ್ಯಕ್ತಪಡಿಸಿದೆ. ವರದಿಗಳ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ Nvidia 4.8 ಶತಕೋಟಿಗೂ ಹೆಚ್ಚು ಡಾಲರ್ ಮೌಲ್ಯದ ಚಿಪ್‌ಗಳನ್ನ ಖರೀದಿಸಿದೆ. ಚೀನಾದ ಮಿಲಿಟರಿ ಮತ್ತು ತಾಂತ್ರಿಕ ಶಕ್ತಿಯ ಬೆಳವಣಿಗೆ ತಡೆಯಲು ಅಮೆರಿಕವು ತನ್ನ ಅತ್ಯಾಧುನಿಕ AI ಪ್ರೊಸೆಸರ್‌ಗಳನ್ನು ಚೀನಾಕ್ಕೆ ರಫ್ತು ಮಾಡುವುದರ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ. ಆದರೆ ಇದನ್ನು ಮೆಗಾಸ್ಪೀಡ್ ಅನ್ನು ತಳ್ಳಿಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಟಿವಿ ನಿರೂಪಕಿ ರಾಬಿಯಾ ಅಹ್ಸಾನ್ ಗುಂಡಿಕ್ಕಿ ಹ*ತ್ಯೆ; ಪತಿಯೇ ಕೊ*ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದೇಕೆ?
ಚೀನಾ ಹೂಡಿದ ರಹಸ್ಯ ಜಾಲದಲ್ಲಿ ಅಮೆರಿಕದ AI ತಂತ್ರಜ್ಞಾನ ಲೋಕದ 63ರ ಸಿಇಒ, ಡೇಟಿಂಗ್ ನೆರಳಲ್ಲಿ ಗೂಢಚಾರಿಕೆ!