ನೇಪಾಳದಲ್ಲಿ ಮತ್ತೆ ಬೆಚ್ಚಿ ಬೀಳಿಸುವ ಪ್ರವಾಹ, ಬುಧಿ ಗಂಡಕಿ ನದಿಯಲ್ಲಿ ದಿಢೀರ್‌ ಜಲಪ್ರಳಯ

Gowthami K   | Kannada Prabha
Published : Oct 12, 2026, 08:01 AM IST
nepal flood budhi gandaki river gorkha

ಸಾರಾಂಶ

ನೇಪಾಳದ ಗೋರ್ಖಾ ಜಿಲ್ಲೆಯ ಬುಧಿ ಗಂಡಕಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, 15ಕ್ಕೂ ಹೆಚ್ಚು ಮನೆಗಳು ಹಾಗೂ ಸೇತುವೆಗಳು ಕೊಚ್ಚಿಹೋಗಿವೆ. ಪ್ರವಾಹದಲ್ಲಿ ಸಿಲುಕಿದ್ದ 50 ಜನರನ್ನು ರಕ್ಷಿಸಲಾಗಿದ್ದು, 10ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಹಠಾತ್ ಪ್ರವಾಹಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಕಠ್ಮಂಡು: 7000ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಕಳೆದ ಆಗಸ್ಟ್‌ ತಿಂಗಳ ಭೀಕರ ಪ್ರವಾಹ ಕಹಿನೆನಪು ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೊಂದು ಭೀಕರ ದಿಡೀರ್‌ ಪ್ರವಾಹ ಕಾಣಿಸಿಕೊಂಡಿದೆ. ಬುಧಿ ಗಂಡಕಿ ನದಿಯಲ್ಲಿ ಭಾನುವಾರ ಕಾಣಿಸಿಕೊಂಡ ಹಠಾತ್‌ ಪ್ರವಾಹದಿಂದಾಗಿ ಗೋರ್ಖಾ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಪ್ರವಾಹದ ಭೀಕರತೆಗೆ 15ಕ್ಕೂ ಹೆಚ್ಚು ಮನೆ, ಸೇತುವೆ ಮತ್ತು 2 ಜಲವಿದ್ಯುತ್‌ ಯೋಜನೆಗಳ ಘಟಕಗಳೇ ಕೊಚ್ಚಿಹೋಗಿವೆ. ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 50 ಮಂದಿಯನ್ನು ರಕ್ಷಿಸಲಾಗಿದ್ದು, 10ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಕಾರಣ ತಿಳಿದುಬಂದಿಲ್ಲ

ನದಿಯಲ್ಲಿ ನೀರು ಭಾರೀ ರಭಸದಿಂದ ಸಾಗಿಬರುತ್ತಿರುವ ಮತ್ತೊಂದು ಎದುರಾದ ವಸ್ತಗಳನ್ನೆಲ್ಲಾ ಆಪೋಶನ ತೆಗೆದುಕೊಂಡು ಮುಂದೆ ಸಾಗುತ್ತಿರುವ ದೃಶ್ಯಗಳು ನೋಡುಗರ ಎದೆ ಝಲ್ಲೆನಿಸಿದೆ. ಈ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ನದಿ ತಟದ ಗ್ರಾಮಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರ‍ಳುವಂತೆ ಸೂಚಿಸಲಾಗಿದೆ.ಕಳೆದ ಆ.26ರಂದು ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಕಾಣಿಸಿಕೊಂಡ ದಿಢೀರ್‌ ಪ್ರವಾಹದಲ್ಲಿ 7000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ಬುಧಿ ಗಂಡಕಿ ನದಿಯಲ್ಲೂ ಪ್ರವಾಹ ಕಾಣಿಸಿಕೊಂಡಿದ್ದು, ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳೀಯರ ಪ್ರಕಾರ ಲೋಕ್ಪಾ ಮತ್ತು ಚುಮುಲಿಂಗ್‌ ನಡುವೆ ಗಂಡಕಿ ನದಿಯ ಉಪನದಿಯಾದ ಸ್ಯಾರ್‌ನಲ್ಲಿ ನೀರಿನ ಹರಿವಿಗೆ ತಡೆ ಉಂಟಾಗಿ ದಿಢೀರ್‌ ಪ್ರವಾಹ ಕಾಣಿಸಿಕೊಂಡಿದೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇನಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚುನಾವಣೆ ಗೆಲ್ಲಲು ಡೊನಾಲ್ಡ್ ಟ್ರಂಪ್‌ ಮಾಡಿದ ರಹಸ್ಯ ತೈಲ ಒಪ್ಪಂದ? ರಷ್ಯಾ-ಉಕ್ರೇನ್ ಸಂಧಾನ
ಪಾಕಿಸ್ತಾನದಲ್ಲಿ ಕೋಲಾಹಲ, ಖೈಬರ್‌ನಲ್ಲಿ ಸರ್ಕಾರ ಅಮಾನತುಗೊಳಿಸಿ ತುರ್ತು ಪರಿಸ್ಥಿತಿ ಘೋಷಣೆ