ವೈಲ್ಡ್‌ ಕರ್ನಾಟಕ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಅಟೆನ್‌ಬರೋಗೆ ಇಂದಿರಾ ಶಾಂತಿ ಪ್ರಶಸ್ತಿ

By Kannadaprabha NewsFirst Published Nov 20, 2019, 9:02 AM IST
Highlights

ಖ್ಯಾತ ಇತಿಹಾಸಕಾರ ಮತ್ತು ಪರಿಸರವಾದಿ ಬ್ರಿಟನ್‌ ಮೂಲದ ಸರ್‌. ಡೇವಿಡ್‌ ಅಟೆನ್‌ಬರೋ ಅವರಿಗೆ 2019ನೇ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿ ಪ್ರಕಟಿಸಲಾಗಿದೆ. 

ನವದೆಹಲಿ (ನ. 20): ಖ್ಯಾತ ಇತಿಹಾಸಕಾರ ಮತ್ತು ಪರಿಸರವಾದಿ ಬ್ರಿಟನ್‌ ಮೂಲದ ಸರ್‌. ಡೇವಿಡ್‌ ಅಟೆನ್‌ಬರೋ ಅವರಿಗೆ 2019ನೇ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿ ಪ್ರಕಟಿಸಲಾಗಿದೆ.

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ನೇತೃತ್ವದ ಆಯ್ಕೆ ಸಮಿತಿ ಅಟೆನ್‌ಬರೋ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅಟೆನ್‌ಬರೋ ಅವರು ನೈಸರ್ಗಿಕ ಜಗತ್ತಿನ ಅಚ್ಚರಿಗಳನ್ನು ಬಯಲುಗೊಳಿಸಲು ನೀಡಿದ ಜೀವಮಾನ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶ್ವದ ಒಳಿತಿಗಾಗಿ ಜೀವನವನ್ನು ಮುಡಿಪಾಗಿಟ್ಟಕೆಲವೇ ಕೆಲವು ವ್ಯಕ್ತಿಗಳಲ್ಲಿ ಅಟೆನ್‌ಬರೋ ಒಬ್ಬರು ಎಂದು ನ್ಯಾಯದರ್ಶಿ ಸಮಿತಿ ತಿಳಿಸಿದೆ.

ಬಿಕಿನಿ ತೊಟ್ಟರೆ ಫ್ರೀ ಗ್ಯಾಸ್: ಬಂಕ್ ಮುಂದೆ ಗಂಡಸರ ಲೈನ್!

2019 ರಲ್ಲಿ ಕರ್ನಾಟಕದ ವನ್ಯ ಸಂಪತ್ತಿನ ಕುರಿತು ‘ಎ ಮೆಜೆಸ್ಟಿಕ್‌ ಸೆಲಬರೇಷನ್‌: ವೈಲ್ಡ್‌ ಕರ್ನಾಟಕ’ ಎಂಬ ಸಾಕ್ಷ್ಯಚಿತ್ರವನ್ನು ಡೇವಿಡ್‌ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಕನ್ನಡಿಗ ರಿಕಿ ಕೇಜ್‌ ಹಿನ್ನೆಲೆ ಸಂಗೀತ ನೀಡಿದ್ದರು.

ಬಿಬಿಸಿಯ ನೈಸರ್ಗಿಕ ಇತಿಹಾಸ ವಿಭಾಗದ ಸಂಯೋಗದೊಂದಿಗೆ 9 ನೈಸರ್ಗಿಕ ಇತಿಹಾಸ ಸಾಕ್ಷ್ಯಚಿತ್ರಗಳನ್ನು ಸಾದರಪಡಿಸಿದ್ದಾಕ್ಕಾಗಿ ಅಟೆನ್‌ಬರೋ ಖ್ಯಾತರಾಗಿದ್ದಾರೆ. ಅವರನ್ನು ಬ್ರಿಟನ್‌ನಲ್ಲಿ ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾಗಿದೆ. ಇವರು ನಟ, ನಿರ್ದೇಶಕ ರಿಚರ್ಡ್‌ ಅಟೆನ್‌ಬರೋ ಅವರ ಕಿರಿಯ ಸಹೋದರ.

click me!