
ಟೆಹ್ರಾನ್: ಇರಾನ್ ಸರ್ವೋಚ್ಚ ನಾಯಕ ಖಮೇನಿ ಅವರ ಇಸ್ಲಾಮಿಕ್ ಆಡಳಿತದ ವಿರುದ್ಧದ ಜನತಾ ದಂಗೆ ಶನಿವಾರ 13 ದಿನ ಪೂರೈಸಿದ್ದು, ಕಿಚ್ಚು ದೇಶವ್ಯಾಪಿಯಾಗಿದೆ. ಅನೇಕ ಸರ್ಕಾರಿ ಕಟ್ಟಡಗಳಿಗೆ ಜನ ಬೆಂಕಿ ಹಾಕಿದ್ದಾರೆ. ‘ನಗರಗಳನ್ನು ವಶ ಮಾಡಿಕೊಳ್ಳಿ’ ಎಂದು ಗಡೀಪಾರಾಗಿರುವ ಖಮೇನಿ ವಿರೋಧಿ ಯುವರಾಜ ರೆಜಾ ಪಹ್ಲವಿ ಕರೆ ನೀಡಿದ್ದಾರೆ.
ಟೆಹ್ರಾನ್: ಪರಮೋಚ್ಛ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ ನೇತೃತ್ವದ ಸರ್ಕಾರದ ವಿರುದ್ಧ ಇರಾನ್‌ನಲ್ಲಿ ಕಳೆದ 2 ವಾರಗಳಿಂದ ನಡೆಯುತ್ತಿರುವ ಹೋರಾಟ ಭಾರೀ ಹಿಂಸಾರೂಪ ಪಡೆದಿದ್ದು, ಭದ್ರತಾ ಪಡೆಗಳ ಗುಂಡಿಗೆ ಗುರುವಾರ ರಾತ್ರಿ ಒಂದೇ ದಿನ 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಬಲಿಯಾಗಿದ್ದಾರೆ.
ಇದು ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ನಡೆಸಿದ ಅಮಾನವೀಯ ಕ್ರಮ ಎಂದು ವರದಿಗಳು ಹೇಳಿವೆ. ಕೇವಲ ಟೆಹ್ರಾನ್ ನಗರದ 6 ಆಸ್ಪತ್ರೆಗಳಲ್ಲಿ ಗುರುವಾರ ರಾತ್ರಿ 217 ಜನರ ಶವಗಳು ಸಂಗ್ರಹವಾಗಿದ್ದವು. ಎಲ್ಲಾ ದೇಹಗಳ ಮೇಲೂ ಗುಂಡಿನ ಏಟಿತ್ತು ಎಂದು ಹೆಸರು ಹೇಳಬಯಸದ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ಟೈಮ್ ಮ್ಯಾಗಜಿನ್ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ