ಸಮುದ್ರ ತೀರದಲ್ಲಿ ನಿಗೂಢ ಬಿಳಿ ವಸ್ತು ಪತ್ತೆ: ತಲೆ ಕೆಡಿಸಿಕೊಂಡ ವಿಜ್ಞಾನಿಗಳು!

By Sathish Kumar KH  |  First Published Oct 13, 2024, 6:56 PM IST

ಕಡಲತೀರಗಳಲ್ಲಿ ನಿಗೂಢವಾದ ಬಿಳಿ ವಸ್ತು ಪತ್ತೆಯಾಗಿದೆ. ಇದು ಎಣ್ಣೆಯ ವಾಸನೆಯಿರುವ ಕೊಬ್ಬಿನಂಶವಿರುವ ವಸ್ತುವಾಗಿದೆ ಎಂದು ಆ ವಿಚಿತ್ರ ವಸ್ತುವನ್ನು ನೋಡಿದವರು ಹೇಳುತ್ತಾರೆ. ಆದರೆ, ನಿಜಕ್ಕೂ ಅಲ್ಲಿ ಕಾಣಿಸುತ್ತಿರುವು ಏನು?


ಒಟ್ಟಾವಾ: ಕಡಲತೀರದಲ್ಲಿ ಕಾಣಸಿಕ್ಕ ನಿಗೂಢವಾದ ಬಿಳಿ ಬಣ್ಣದ ಕೊಬ್ಬಿನಂಶವಿರುವ ವಸ್ತುವಿನ ಬಗ್ಗೆ ತನಿಖೆ ನಡೆಯುತ್ತಿದೆ. ಅರೆ ಬರೆ ಬೆಂದಿರುವ ಹಸಿ ರೊಟ್ಟಿಯಂತೆ ಕಾಣುತ್ತದೆ ಎಂದು ಅದನ್ನು ನೋಡಿದವರು ಹೇಳುತ್ತಾರೆ. ನ್ಯೂಫೌಂಡ್‌ಲ್ಯಾಂಡ್‌ನ ಕಡಲತೀರಗಳಲ್ಲಿ ಈ ನಿಗೂಢ ವಸ್ತು ಪತ್ತೆಯಾಗಿದೆ. ಎಣ್ಣೆಯ ವಾಸನೆಯಿರುವ ಕೊಬ್ಬಿನಂಶವಿರುವ ವಸ್ತು ಎಂದು ಮತ್ತೆ ಕೆಲವು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಕಳೆದೊಂದು ತಿಂಗಳಿಂದ ಅಂದರೆ ಸೆಪ್ಟೆಂಬರ್‌ನಿಂದ ಕೆನಡಾದ ಪ್ರಾಂತ್ಯದ ದಕ್ಷಿಣ ಭಾಗದ ಕಡಲತೀರಗಳಿಗೆ ಬರುವವರು ಈ ನಿಗೂಢ ವಸ್ತುವನ್ನು ನೋಡಿದ್ದಾಗಿ ಹೇಳುತ್ತಿದ್ದಾರೆ. ಆದರೆ ಈ ವಿದ್ಯಮಾನಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಬಿಬಿಸಿ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿದ ವಿಜ್ಞಾನಿಗಳು ಕಡಲಿನ ಯಾವುದೋ ಜೀವಿ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಮುದ್ರ ಅಧ್ಯಯನ ವಿಭಾಗ ಈ ಮಾತನ್ನು ಇನ್ನೂ ದೃಢಪಡಿಸಿಲ್ಲ. ಈಗ ತನಿಖೆ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ಬಗ್ಗೆ ವರದಿ ನೀಡುವುದಾಗಿ ಹೇಳಿದೆ.

Latest Videos

ಮ್ಯಾನೇಜರ್ ಬೇಡಿಕೆಗೆ ಬೇಸತ್ತು, ಮೊದಲ ದಿನವೇ ಕೆಲಸ ಬಿಟ್ಟ ಉದ್ಯೋಗಿ!

ಇನ್ನು ಸಾಮಾಜಿಕ ಜಾಲತಾಣದಲ್ಲಿ ಫಿಲಿಪ್ ಗ್ರೇಸ್ ಎಂಬುವವರು ಭಾರವಾದ, ಜಿಗುಟಾದ ವಸ್ತುವಿನ ಫೋಟೋವನ್ನು ಮೊದಲು ಪೋಸ್ಟ್ ಮಾಡಿದರು. ಟೌಟನ್ ಮಾವ್ (ನ್ಯೂಫೌಂಡ್‌ಲ್ಯಾಂಡ್‌ನ ಸಾಂಪ್ರದಾಯಿಕ ಬ್ರೆಡ್ ಖಾದ್ಯ) ರಂತೆ ಕಾಣುವ ಈ ವಸ್ತು ಏನೆಂದು ಯಾರಿಗಾದರೂ ತಿಳಿದಿದೆಯೇ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದರು. ಕೆಲವರು ಇದು ಶಿಲೀಂಧ್ರ ಎಂದು ಹೇಳಿದರೆ, ಇನ್ನು ಕೆಲವರು ತಿಮಿಂಗಿಲದ ವಾಂತಿಯಾದ ಅಂಬರ್‌ಗ್ರಿಸ್ ಎಂದು ಹೇಳಿದರು. ಶೋಲ್ ಕೋವ್ ಬೀಚ್, ಬರಾಸ್ವೇ ಬೀಚ್, ಗೂಸ್‌ಬೆರಿ ಕೋವ್ ಬೀಚ್, ಸದರ್ನ್ ಹಾರ್ಬರ್, ಅರ್ನಾಲ್ಡ್ಸ್ ಕೋವ್‌ನಂತಹ ಕಡಲತೀರಗಳಲ್ಲಿ ಇದೇ ರೀತಿಯ ಬ್ಲಾಬ್‌ಗಳು ಕಂಡುಬಂದಿವೆ ಎಂದು ಇತರರು ವರದಿ ಮಾಡಿದ್ದಾರೆ.

ಎನ್ವಿರಾನ್ಮೆಂಟ್ ಆಂಡ್ ಕ್ಲೈಮೇಟ್ ಚೇಂಜ್ ಕೆನಡಾ (ಇಸಿಸಿಸಿ) ಇದು ಏನೆಂದು ಕಂಡುಹಿಡಿಯಲು ಅಧ್ಯಯನ ಆರಂಭಿಸಿದೆ ಎಂದು ಸಮಂತಾ ಬಯಾರ್ಡ್ ಹೇಳಿದ್ದಾರೆ. ಕೆನಡಿಯನ್ ಕೋಸ್ಟ್ ಗಾರ್ಡ್‌ನ ಸಹಾಯದಿಂದ ಸಂಶೋಧಕರು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದು ಜೀವಿ ಅಲ್ಲ ಎಂದು ಸಮುದ್ರ ಪರಿಸರ ಸಂಶೋಧನಾ ಗುಂಪಿನ ಮುಖ್ಯಸ್ಥೆ ನದೀನ್ ವೆಲ್ಸ್ ಹೇಳಿದ್ದಾರೆ. ಬೆಂಕಿ ಹಚ್ಚಿದಾಗ ಇದು ಉರಿಯುತ್ತದೆ, ಆದ್ದರಿಂದ ಎಣ್ಣೆಯ ಅಂಶ ಇದೆ ಎಂದು ತೀರ್ಮಾನಿಸಲಾಗಿದೆ ಎಂದು ನದೀನ್ ವೆಲ್ಸ್ ಹೇಳಿದ್ದಾರೆ. ವಿವರವಾದ ಸಂಶೋಧನೆ ನಡೆಸಲು ನಿರ್ಧರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಪ್ಪ ಮಗನ ಎಣ್ಣೆ ಪಾರ್ಟಿಯಲ್ಲಿ ಅಪ್ಪನ ಜೀವನವನ್ನೇ ಕ್ಲೋಸ್ ಮಾಡಿದ ಮಗ!

ಪ್ರಾಣಿ ಕೊಬ್ಬಿನಂತೆ ಕಾಣುತ್ತಿರುವ ವಸ್ತು: ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಕಂಡುಬರುವ ಕೊಬ್ಬಿನ ಮಾದರಿಯಲ್ಲಿ ಈವಸ್ತು ಕಂಡುಬರುತ್ತಿದೆ. ಆದರೆ, ವಿವಿಧ ಬೀಚ್‌ಗಳನ್ನು ಇಂತಹ ವಸ್ತುಗಳು ಕಂಡುಬಂದಿದ್ದರಿಂದ ಇದೀಗ ಜನರಿಗೆ ಆತಂಕ ಶುರುವಾಗಿದೆ. ಇದು ಮನುಷ್ಯನಿಗೆ ಹಾನಿಕಾರಕ ಆಗಿದ್ದರೆ, ಸಮುದ್ರ ದಂಡೆಯಲ್ಲಿ ಸಂಚಾರ ಮಾಡುವವರಿಗೆ ಗಂಭೀರ ಕಾಯಿಲೆಗಳೂ ಉಲ್ಬಣಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಈಗಾಗಲೇ ತನಿಖೆ ಶುರುವಾಗಿದ್ದು, ವಿಜ್ಞಾನಿಗಳು ಜನರ ಕುತೂಹಲಕ್ಕೆ ಉತ್ತರ ನೀಡುವ ಮೂಲಕ ಆತಂಕವನ್ನು ದೂರ ಮಾಡಲಿದ್ದಾರೆ.

click me!