ಮಿಸ್ಟರ್ ಸಿಂಗ್ ಜಾಹೀರಾತಿಗೆ ಭಾರಿ ಆಕ್ರೋಶ, ಅಮೆರಿಕದಿಂದ ಜನಾಂಗೀಯ ನಿಂದನೆ ವಿವಾದ

Chethan Kumar   | Kannada Prabha
Published : Sep 11, 2026, 07:19 AM IST
Controversial Mr Singh Advertisement

ಸಾರಾಂಶ

ಅಮೆರಿಕದಲ್ಲಿ ಇದೀಗ ಕೋಲಾಹಲ ಶುರುವಾಗಿದೆ. ವಿದೇಶಿಗರ ಹೊರಹಾಕಲು ಇನ್ನಿಲ್ಲದ ಕಾರಣ ಹುಡುಕುತ್ತಿರುವ ಟ್ರಂಪ್ ಇದೀಗ ಜನಾಂಗೀಯ ನಿಂದನೆ ವಿವಾದಕ್ಕೆ ಸಿಲುಕಿದ್ದಾರೆ. ಮಿಸ್ಟರ್ ಸಿಂಗ್ ಜಾಹೀರಾತು ಇದೀಗ ಆಕ್ರೋಶಕ್ಕೆ ಕಾರಣಾಗಿದೆ.

ವಾಷಿಂಗ್ಟನ್‌ (ಸೆ.11): ಅಮೆರಿಕದಲ್ಲಿರುವ ವಿದೇಶಿ ಟ್ರಕ್‌ ಚಾಲಕರಿಗೆ ಸ್ವಯಂ ಗಡೀಪಾರಾಗುವಂತೆ ಆದೇಶಿಸಿ ಗೃಹ ಸಚಿವಾಲಯ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ‘ಮಿಸ್ಟರ್‌ ಸಿಂಗ್‌’ ಎಂದು ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಟ್ವೀಟಿಸಲಾಗಿರುವ ಎಐ ಸೃಷ್ಟಿತ ಪೋಸ್ಟ್‌ನಲ್ಲಿ, ಟ್ರಾನ್ಸ್‌ಫಾರ್ಮರ್ಸ್‌ ಎಂಬ ಚಿತ್ರದ ಪಾತ್ರವಾದ ಮೆಗಾಟ್ರನ್ ಮತ್ತು ಭಾರತೀಯನೊಬ್ಬ ಮುಖಾಮುಖಿಯಾಗಿದ್ದಾರೆ. ಅದರಲ್ಲಿ, ‘ನಿಮಗೆ ವಾಹನ ಚಲಾಯಿಸಲು ಬರುವುದಿಲ್ಲ ಮಿಸ್ಟರ್ ಸಿಂಗ್. ನಮ್ಮ ರಸ್ತೆಗಳಿಂದ ತೊಲಗಿ. ಸ್ವಯಂ ಗಡೀಪಾರಾಗಿ ಅಥವಾ ಪರಿಣಾಮ ಎದುರಿಸಿ’ ಎಂದು ಬರೆಯಲಾಗಿದೆ.

ಹಿಂದೂ ಅಮೆರಿಕನ್ ಫೌಂಡೇಶನ್ ಆಕ್ರೋಶ

ಇದಕ್ಕೆ ಹಿಂದೂ ಅಮೆರಿಕನ್ ಫೌಂಡೇಶನ್ ಪ್ರತಿಕ್ರಿಯಿಸಿದ್ದು, ‘ಸಿಂಗ್‌ಗಳು ಹಿಂದೂಗಳಾಗಿದ್ದಾರೆ, ಸಿಖ್ಖರಾಗಿದ್ದಾರೆ, ಅಮೆರಿಕನ್ನರಾಗಿದ್ದಾರೆ ಮತ್ತು ವಾಹನ ಚಾಲನೆ ಮಾಡುತ್ತಾರೆ. ಗೃಹ ಸಚಿವಾಲಯದ ಜನಾಂಗೀಯವಾದಿ, ಭಾರತೀಯ ವಿರೋಧಿ ಧೋರಣೆ ಅಥವಾ ಟ್ರೋಲಿಂಗ್ ನಮ್ಮ ರಾಷ್ಟ್ರದ ಸಾಮೂಹಿಕ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ’ ಎಂದು ಕಿಡಿ ಕಾರಿದೆ. ಜತೆಗೆ ಈ ಬಗ್ಗೆ ತನಿಖೆಗೂ ಕೋರಿದೆ. ಸಿಖ್ ಮೈತ್ರಿಕೂಟದಿಂದಲೂ ವಿರೋಧ ವ್ಯಕ್ತವಾಗಿದೆ.

ಅಮೆರಿಕದಲ್ಲಿ ವೀಸಾ ನಿಯಮ ಕಠಿಣ

ವಲಸಿಗರಿಗೆ ಮತ್ತೊಂದು ಹೊಡೆತ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಸಜ್ಜಾಗಿದೆ. ಎಚ್‌1ಬಿ ವೀಸಾದಾರರು ಸೇರಿ ಕೆಲವು ವಿದೇಶಿ ನೌಕರರು ಉದ್ಯೋಗ ಕಳೆದುಕೊಂಡ ನಂತರ ಹೊಸ ಕಂಪನಿಗಳನ್ನು ಹುಡುಕಲು ಇರುವ 60 ದಿನಗಳ ಗ್ರೇಸ್ ಅವಧಿ ತೆಗೆದುಹಾಕಲು ಚಿಂತನೆ ನಡೆಸುತ್ತಿದೆ. ಅರ್ಥಾತ್‌ ಕೆಲಸ ಕಳೆದುಕೊಂಡ ತಕ್ಷಣ ಈ ನೌಕರರು ಸ್ವದೇಶಕ್ಕೆ ಮರಳಬೇಕಾಗುತ್ತದೆ. ಈ ಕ್ರಮವು ಭಾರತೀಯರು ಮತ್ತು ಚೀನೀಯರು ಸೇರಿ ವಿದೇಶಿ ಕಾರ್ಮಿಕರನ್ನು ಹೆಚ್ಚಾಗಿ ಅವಲಂಬಿಸಿರುವ ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ.

ಡೋನಾಲ್ಡ್ ಟ್ರಂಪ್ ನಿರ್ಧಾರಗಳು ತೀವ್ರ ವಿವಾದದ ಜೊತೆ ಕೋಲಾಹಲಕ್ಕೆ ಕಾರಣಾಗಿದೆ. ಅಮೆರಿಕದಿಂದ ವಲಸಿಗರನ್ನು ಹೊರಹಾಕಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಟ್ರಂಪ್, ಹಲವರ ಆತಂಕಕ್ಕೆ ಕಾರಣಾಗಿದೆ. ನ್ಯಾಯಯುತವಾಗಿ ಜೀವನ ಸಾಗಿಸುತ್ತಿರುವ ವಿದೇಶಿಗರ ಮೇಲೆ ಅಮೆರಿಕ ಹದ್ದಿನ ಕಣ್ಣಿಟ್ಟಿದ್ದು, ದೇಶದಿಂದ ಹೊರಹಾಕಲು ಎಲ್ಲಾ ಹೋರಾಟ ನಡೆಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿನ್‌ಪಿಂಗ್‌ ಭಾರತ ಭೇಟಿ ಎಷ್ಟು ದೊಡ್ಡ ಒಪ್ಪಂದ? ಭಾರೀ ಸಂಚಲನ, ಭಾರತಕ್ಕೆ ಸಿಗುವ ದೊಡ್ಡ ಲಾಭ ಏನು?
BRICS : ಭಾರತದ ರಾಜತಾಂತ್ರಿಕತೆಗೆ ಅಗ್ನಿ ಪರೀಕ್ಷೆ, ಜಂಟಿ ಘೋಷಣಾಪತ್ರ ವಿಚಾರದಲ್ಲಿ ಎದುರಾಯ್ತು ಬಿಗ್‌ ಚಾಲೇಂಜ್