ಮುಗಿಯದ ಕೊರೋನಾ ಕಾಟ, ರಷ್ಯಾದಲ್ಲಿ ವೇತನ ಸಹಿತ ರಜೆ, ಲಾಕ್ ಡೌನ್

By Kannadaprabha NewsFirst Published Oct 31, 2021, 5:35 AM IST
Highlights

* ರಷ್ಯಾದಲ್ಲಿ ಸೋಂಕು ಹೆಚ್ಚಳ: 1 ವಾರ ವೇತನ ಸಹಿತ ರಜೆ
* ಶನಿವಾರ 40251 ಕೇಸು, 1160 ಜನರ ಸಾವು
* ಸ್ವದೇಶಿ ಲಸಿಕೆ ಸ್ಪುಟ್ನಿಕ್‌ ವಿ  ನೀಡಲಾಗಿತ್ತು
* ಚೀನಾ ಮತ್ತು ಇಂಗ್ಲೆಂಡ್ ಕಾಡುತ್ತಿರುವ ರೂಪಾಂತರಿ

ಮಾಸ್ಕೋ (ಅ. 31)  ರಷ್ಯಾದಲ್ಲಿ ದಿನೇ ದಿನೇ ಹೊಸ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸರ್ಕಾರ ಶನಿವಾರದಿಂದಲೇ ಜಾರಿಗೆ ಬರುವಂತೆ ದೇಶಾದ್ಯಂತ ಎಲ್ಲಾ ನೌಕರರಿಗೆ ಒಂದು ವಾರ ವೇತನ ಸಹಿತ ರಜೆ ಘೋಷಿಸಿದ್ದಾರೆ. 

ಶನಿವಾರ ರಷ್ಯಾದಲ್ಲಿ 40,251 ಹೊಸ ಕೋವಿಡ್‌ ಪ್ರಕರಣ ದಾಖಲಾಗಿದ್ದು, 1160 ಜನ ಸಾವನ್ನಪ್ಪಿದ್ದಾರೆ. ಇದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ಒಂದೇ ದಿನದಲ್ಲಿ ದಾಖಲಾದ ಅತ್ಯಧಿಕ ಸೋಂಕು ಮತ್ತು ಸಾವಿನ ಪ್ರಮಾಣವಾಗಿದೆ.ಕೊರೋನಾ ಸೋಂಕಿನ ಆರಂಭದಿಂದಲೂ ರಷ್ಯಾ ರಾಷ್ಟ್ರವ್ಯಾಪಿ ಲಾಕ್ಡೌನ್‌ ಘೋಷಿಸದೇ, ಸ್ವದೇಶಿ ಲಸಿಕೆ ಸ್ಪುಟ್ನಿಕ್‌ ವಿ ಯ ಮೂಲಕವೇ ಸೋಂಕನ್ನು ನಿಯಂತ್ರಿಸಲು ಪ್ರಯತ್ನಿಸಿತ್ತು. 

Latest Videos

ದೀಪಾವಳಿ, ಕನ್ನಡ ರಾಜ್ಯೋತ್ಸವ ಆಚರಣೆಗೆ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ ಸರ್ಕಾರ

ಹಲವಾರು ತಿಂಗಳಿನಿಂದ ಈ ಲಸಿಕೆಗಳನ್ನು ಉಚಿತವಾಗಿ ವಿತರಿಸುತ್ತಿದ್ದರೂ, ಶನಿವಾರದ ಸರ್ಕಾರಿ ಅಂಕಿಂಶಗಳ ಪ್ರಕಾರ ಜನಸಂಖ್ಯೆಯ ಕೇವಲ 32.5 ಶೇಕಡಾ ಜನರು ಮಾತ್ರ ಸಂಪೂರ್ಣವಾಗಿ ಲಸಿಕೆಯನ್ನು ಹಾಕಿಕೊಂಡಿದ್ದಾರೆ. ಅಕ್ಟೋಬರ್‌ ತಿಂಗಳೊಂದರಲ್ಲೇ 44265 ಜನರು ಸಾವನ್ನಪ್ಪಿದ್ದಾರೆ.

ಇಂಗ್ಲೆಂಡ್ ಮತ್ತು ಚೀನಾದಲ್ಲಿರೂ ಡೆಲ್ಟಾ ರೂಪಾಂತರಿ ಕಾಟ ಕೊಡುತ್ತಿದೆ. ಭಾರತದಲ್ಲಿ ಅತಿದೊಡ್ಡ ಲಸಿಕಾ ಅಭಿಯಾನ ಯಶಸ್ಸು ಕಂಡಿದ್ದು  ಕೊರೋನಾ ನಿಯಂತ್ರಣದಲ್ಲಿದೆ. ಈ ಸಾಧನೆಗೆ ಕಾಣವಾದ ಎಲ್ಲರನ್ನೂ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು.

click me!