ವಿಶ್ವದಾದ್ಯಂತ 100 ಕೋಟಿ ಜನರಿಗೆ ಗೃಹಬಂಧನ| ಸೋಂಕು ತಡೆಗೆ 40ಕ್ಕೂ ಹೆಚ್ಚು ದೇಶಗಳಲ್ಲಿ ಕಡ್ಡಾಯ ಮನೆವಾಸ| ಜನತಾ ಕರ್ಫ್ಯೂ ಸೇರಿದರೆ 230 ಕೋಟಿ ಜನರಿಗೆ ಕಡ್ಡಾಯ ಸೆರೆ
ನವದೆಹಲಿ(ಮಾ.22): ವಿಶ್ವದ 185ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿ, 12000 ಜನರನ್ನು ಬಲಿಪಡೆದಿರುವ ಕೊರೋನಾ ಸೋಂಕು ಅಕ್ಷರಶಃ ಇಡೀ ವಿಶ್ವವನ್ನೇ ಆತಂಕದ ಮಡುವಿಗೆ ತಳ್ಳಿದೆ. ಹೀಗಾಗಿಯೇ ಸೋಂಕು ನಿಗ್ರಹಕ್ಕಾಗಿ 40ಕ್ಕೂ ಹೆಚ್ಚು ದೇಶಗಳು, ಕರ್ಫ್ಯೂ ಹೇರಿಕೆ ಸೇರಿದಂತೆ ಜನರ ಸಂಚಾರಕ್ಕೆ ಪೂರ್ಣ ನಿಷೇಧ ಹೇರಿವೆ. ಪರಿಣಾಮ ಈ ದೇಶಗಳ 100 ಕೋಟಿಗೂ ಹೆಚ್ಚಿನ ಜನ ಗೃಹಬಂಧನಕ್ಕೆ ಒಳಪಡುವಂತೆ ಆಗಿದೆ.
ಇನ್ನು ಭಾನುವಾರದಂದು ಭಾರತದಲ್ಲಿ ಜನತಾ ಕರ್ಫ್ಯೂ ಘೋಷಿಸಿರುವ ಕಾರಣ 130 ಕೋಟಿ ಜನರು ಮನೆಯಲ್ಲೇ ಉಳಿಯಲಿದ್ದಾರೆ. ಒಟ್ಟಾರೆ ವಿಶ್ವದೆಲ್ಲೆಡೆ 230 ಕೋಟಿ ಜನರು ಗೃಹ ಬಂಧನಕ್ಕೆ ಒಳಗಾಗಲಿದ್ದಾರೆ.
undefined
ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
186: ಸೋಂಕು ಹರಡಿರುವ ದೇಶಗಳು
2.88 ಲಕ್ಷ: ವಿಶ್ವದಾದ್ಯಂತ ಸೋಂಕಿತರು
11950: ಕೊರೋನಾಗೆ ಬಲಿಯಾದವರು
93620: ಸೋಂಕಿಂದ ಗುಣಮುಖರಾದವರು
ಶನಿವಾರ ಅತಿ ಹೆಚ್ಚು ಸಾವು
ಇಟಲಿ: 793
ಸ್ಪೇನ್: 285
ಇರಾನ್: 123
ಹಾಲೆಂಡ್: 30