ನಮ್ಮ ಲಸಿಕೆ ಶೇ.100ರಷ್ಟು ಪರಿಣಾಮಕಾರಿ, ಬಳಕೆಗೆ ಅನುಮತಿ ಕೊಡಿ: ಮಾಡೆರ್ನಾ

By Kannadaprabha NewsFirst Published Dec 1, 2020, 7:51 AM IST
Highlights

ನಮ್ಮ ಲಸಿಕೆ ಶೇ.100ರಷ್ಟು ಪರಿಣಾಮಕಾರಿ, ಬಳಕೆಗೆ ಅನುಮತಿ ಕೊಡಿ: ಮಾಡೆರ್ನಾ| ಕೊರೋನಾ ವೈರಸ್‌ ತಗಲದಂತೆ ತಡೆಯುತ್ತದೆ

ವಾಷಿಂಗ್ಟನ್‌(ಡಿ.01): ಕೊರೋನಾ ವೈರಸ್‌ ತಗಲದಂತೆ ತಡೆಯುವ ಲಸಿಕೆಗೆ ಫೈಝರ್‌ ಕಂಪನಿ ಕಳೆದ ವಾರವಷ್ಟೇ ಅಮೆರಿಕ ಸರ್ಕಾರದ ಬಳಿ ತುರ್ತು ಬಳಕೆಗೆ ಅನುಮತಿ ಕೇಳಿದ ಬೆನ್ನಲ್ಲೇ ಇದೀಗ ಇನ್ನೊಂದು ಪ್ರಮುಖ ಲಸಿಕೆ ತಯಾರಿಕಾ ಕಂಪನಿಯಾದ ಮಾಡೆರ್ನಾ ತನ್ನ ಲಸಿಕೆಗೂ ತುರ್ತು ಬಳಕೆಯ ಅನುಮತಿ ಕೇಳಿದೆ. ಅಲ್ಲದೆ, ಮಾಡೆರ್ನಾ ಕಂಪನಿ ತನ್ನ ಲಸಿಕೆಯು ತೀವ್ರತರದ ಕೊರೋನಾ ಸೋಂಕು ತಡೆಯುವಲ್ಲಿ ಶೇ.100ರಷ್ಟುಪರಿಣಾಮಕಾರಿ ಎಂದೂ ಹೇಳಿಕೊಂಡಿದ್ದು, ಯುರೋಪ್‌ನಲ್ಲೂ ತುರ್ತು ಬಳಕೆಗೆ ಅನುಮತಿ ಕೋರಿದೆ.

ಗುಡ್‌ ನ್ಯೂಸ್: ಆಗಸ್ಟ್‌ನೊಳಗೆ ವಿಶ್ವದ ಮೊಟ್ಟ ಮೊದಲ ಕೊರೋನಾ ಲಸಿಕೆ ಬಿಡುಗಡೆ!

ಫೈಝರ್‌ ಕಂಪನಿ ತನ್ನ ಲಸಿಕೆ ಶೇ.95ರಷ್ಟುಪರಿಣಾಮಕಾರಿ ಎಂದು ಹೇಳಿಕೊಂಡಿತ್ತು. ಆದರೆ, ಮಾಡೆರ್ನಾ ಕಂಪನಿ ತೀವ್ರತರದ ಕೊರೋನಾ ಸೋಂಕು ತಡೆಯುವಲ್ಲಿ ತನ್ನ ಲಸಿಕೆ ಶೇ.100 ಪರಿಣಾಮಕಾರಿ ಎಂದು ಹೇಳಿಕೊಂಡಿದೆ. ಅಲ್ಲದೆ, ಫೈಝರ್‌ ಕಂಪನಿಯ ಲಸಿಕೆಯನ್ನು -70 ಡಿಗ್ರಿಯಲ್ಲಿ ಶೇಖರಿಸಿಡಬೇಕಿದ್ದು, ಅದು ಲಸಿಕೆಯ ವಿತರಣೆಯನ್ನು ಕಷ್ಟವಾಗಿಸಲಿದೆ. ಆದರೆ, ಮಾಡೆರ್ನಾ ಲಸಿಕೆಯನ್ನು ಸಾಮಾನ್ಯ ಫ್ರೀಜರ್‌ನ ಕನಿಷ್ಠ ಉಷ್ಣತೆಯಲ್ಲೇ ಶೇಖರಿಸಬಹುದು. ಹೀಗಾಗಿ ಇದನ್ನು ವಿತರಿಸುವುದು ಸುಲಭವೆಂದು ಹೇಳಲಾಗುತ್ತಿದೆ.

ಬೀದಿ ಬದಿ ವ್ಯಾಪಾರಕ್ಕೆ ಅನುಮತಿ; ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ!

ಈ ಎರಡೂ ಕಂಪನಿಗಳ ಲಸಿಕೆಯನ್ನು ಅಮೆರಿಕದ ಸ್ವತಂತ್ರ ವಿಜ್ಞಾನಿಗಳು ಶೀಘ್ರದಲ್ಲೇ ಮೌಲ್ಯಮಾಪನ ನಡೆಸಲಿದ್ದಾರೆ. ನಂತರ ಫೈಝರ್‌ ಲಸಿಕೆಗೆ ಮೊದಲು ಹಾಗೂ ಮಾಡೆರ್ನಾ ಲಸಿಕೆಗೆ ಕೆಲ ದಿನಗಳ ನಂತರ ತುರ್ತು ಬಳಕೆಗೆ ಅನುಮತಿ ದೊರೆಯುವ ಸಾಧ್ಯತೆಯಿದೆ.

click me!