Ukraine Crisis: ಉಕ್ರೇನ್‌ನ ಖಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಬಲಿ!

By Suvarna NewsFirst Published Mar 1, 2022, 3:08 PM IST
Highlights

* ಉಕ್ರೇನ್-ರಷ್ಯಾ ಯುದ್ಧಕ್ಕೆ ಭಾರತೀಯ ವಿದ್ಯಾರ್ಥಿ ಬಲಿ

* ಕರ್ನಾಟಕದ ನವೀನ್ ಶೇಖರಪ್ಪ ಕ್ಷಿಪಣಿ ದಾಳಿಯಿಂದ ಸಾವು

ಕೀವ್(ಮಾ.01): ರಷ್ಯಾ-ಉಕ್ರೇನ್‌ ಯುದ್ಧ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಉಕ್ರೇನ್ ನಗರಗಳನ್ನು ವಶಪಡಿಸಿಕೊಳ್ಳಲು ರಷ್ಯಾ ವೇಗವಾಗಿ ವಾಯುದಾಳಿ ನಡೆಸುತ್ತಿದೆ. ಮಂಗಳವಾರ, ಖಾರ್ಕಿವ್‌ನಲ್ಲಿ, ಅವರು ವಾಯುದಾಳಿ ನಡೆಸಿ, ಖಾರ್ಕಿವ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸಿದೆ. ಈ ವೇಳೆ ನಡೆದ ವೈಮಾನಿಕ ದಾಳಿಯಲ್ಲಿ ಭಾರತೀಯ ಮೂಲದ, ಕರ್ನಾಟಕದ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಮಾಹಿತಿ ಹೊರ ಬಿದ್ದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಮಾಹಿತಿ ಖಚಿತಪಡಿಸಿದ್ದಾರೆ. 

ದಿನಸಿ ತರಲು ಹೋಗಿದ್ದ ವೇಳೆ ಕ್ಷಿಪಣಿ ದಾಳಿ

Latest Videos

ಹೌದು ಮೃತ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ, ರಾಣೆಬೆನ್ನೂರು ತಾಲೂಕಿನ ಚಲಗೇರಿಯ 20 ವರ್ಷದ ಯುವಕ ನವೀನ್ ಶೇಕರಪ್ಪ ಜ್ಞಾನಗೌಡರ್ ಎಂದು ಗುರುತಿಸಲಾಗಿದೆ. ಇನ್ನು ನವೀನ್ ದಿನಸಿ ಪದಾರ್ಥ ಖರೀದಿಸಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈ ಕ್ಷಿಪಣಿ ದಾಳಿ ನಡೆದಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ನವೀನ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಮೃತ ವಿದ್ಯಾರ್ಥಿ ನವೀನ್ ಎಂಬುವುದನ್ನು ಆತನ ಸ್ನೇಹಿತರೂ ಖಚಿತಪಡಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

With profound sorrow we confirm that an Indian student lost his life in shelling in Kharkiv this morning. The Ministry is in touch with his family.

We convey our deepest condolences to the family.

— Arindam Bagchi (@MEAIndia)

ಈ ಬಗ್ಗೆ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಟ್ವೀಟ್ ಮಾಡಿದ್ದು, ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಸಚಿವಾಲಯ ತನ್ನ ಟ್ವೀಟ್‌ನಲ್ಲಿ ಇಂದು ಬೆಳಿಗ್ಗೆ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾವು ತೀವ್ರ ದುಃಖದಿಂದ ದೃಢಪಡಿಸುತ್ತೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕುಟುಂಬಕ್ಕೆ ನಮ್ಮ ಸಂತಾಪವನ್ನು ಸೂಚಿಸುತ್ತೇವೆ ಎಂದಿದ್ದಾರೆ. 

ಭಾರತೀಯ ವಿದ್ಯಾರ್ಥಿಗಳು ತಕ್ಷಣವೇ ಕೀವ್ ತೊರೆಯುವಂತೆ ಆದೇಶ

ಮುಂದುವರಿದ ದಾಳಿಗಳ ನಡುವೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು ಭಾರತೀಯ ವಿದ್ಯಾರ್ಥಿಗಳಿಗೆ ಕೀವ್‌ನಿಂದ ತಕ್ಷಣ ತೊರೆಯುವಂತೆ ಸೂಚಿಸಿದೆ. ಏತನ್ಮಧ್ಯೆ, ಖಾರ್ಕಿವ್‌ನಲ್ಲಿಯೂ ಭಾರೀ ಗುಂಡಿನ ದಾಳಿ ಪ್ರಾರಂಭವಾಗಿದೆ. ರಷ್ಯಾ ಖಾರ್ಕಿವ್ ಪ್ರಧಾನ ಕಛೇರಿಯ ಮೇಲೆ ಕ್ಷಿಪಣಿ ದಾಳಿ ಮಾಡಿತು. ಈ ದಾಳಿಯಲ್ಲಿ ಕಟ್ಟಡಗಳೆಲ್ಲ ಧ್ವಂಸಗೊಂಡಿವೆ. ಖಾರ್ಕಿವ್ ನಗರವನ್ನು ರಷ್ಯಾ ಭಾನುವಾರ ವಶಪಡಿಸಿಕೊಂಡಿದೆ. ಕೀವ್ ಅನ್ನು ನಿಯಂತ್ರಿಸಲು ರಷ್ಯಾ ಅತಿದೊಡ್ಡ ಮಿಲಿಟರಿ ತಂಡವನ್ನು ಕಳುಹಿಸಿದೆ.

ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಮೋದಿ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ

ಕಳೆದ ಆರು ದಿನಗಳಿಂದ ರಷ್ಯಾದ ಉಕ್ರೇನ್ ಮೇಲಿನ ದಾಳಿಗಳ ನಡುವೆ, ಸಿಲುಕಿರುವ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಭಾರತವು ವೇಗವಾಗಿ ಕೆಲಸ ಮಾಡುತ್ತಿದೆ. ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ರಧಾನಿ ಮೋದಿ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಗಂಗಾ ನಡೆಸುತ್ತಿರುವ ಬಗ್ಗೆ ಅವರು ಮಾಹಿತಿ ನೀಡಿದರು. ಸೋಮವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆರಂಭಿಕ ಸಲಹೆಯನ್ನು ನೀಡಿದ ನಂತರ ಭಾರತವು 8,000 ಕ್ಕೂ ಹೆಚ್ಚು ನಾಗರಿಕರನ್ನು ಸ್ಥಳಾಂತರಿಸಿದೆ ಎಂದು ವರದಿ ಮಾಡಿದೆ.

ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಾಯುಪಡೆಯ ವಿಮಾನಗಳು

ಭಾರತದ ಸುಮಾರು 16 ಸಾವಿರ ಜನರು ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಮರಳಿ ಕರೆತರಲು, ಆಪರೇಷನ್ ಗಂಗಾ ಮೂಲಕ, ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನ ಗಡಿ ದೇಶಗಳಾದ ಹಂಗೇರಿ, ಪೋಲೆಂಡ್ ಮತ್ತು ರೊಮೇನಿಯಾದ ವಿದ್ಯಾರ್ಥಿಗಳನ್ನು ಸರ್ಕಾರವು ಏರ್‌ಲಿಫ್ಟ್ ಮಾಡುತ್ತಿದೆ. ಆದರೆ ಪ್ರತಿದಿನ ಬರಲು ಸಾಧ್ಯವಾಗುವುದು 250 ಮಂದಿ ಮಾತ್ರ. ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಕಾರ್ಯಾಚರಣೆಗೆ ಕೈಜೋಡಿಸುವಂತೆ ವಾಯುಸೇನೆಗೂ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಇಂದು ವಾಯುಪಡೆಯ ವಿಮಾನಗಳು ಮಾತ್ರ ಕಾರ್ಯಾಚರಣೆಗೆ ಸೇರಬಹುದು ಎಂದು ಹೇಳಲಾಗುತ್ತಿದೆ.

click me!