ಗಾಜಾಪಟ್ಟಿ: ಇಸ್ರೇಲ್ ಹಮಾಸ್ ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಇಸ್ರೇಲ್ ಸೇನೆ ಪ್ಯಾಲೇಸ್ತೇನ್‌ನ ಆಸ್ಪತ್ರೆ ಮೇಲೆ ವಾಯುದಾಳಿ ನಡೆಸಿದ ಪರಿಣಾಮ 500 ಜನ ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಇದನ್ನು ಇಸ್ರೇಲ್ ಸೇನೆ ಬಲವಾಗಿ ನಿರಾಕರಿಸಿದೆ. ನಾವು ಯಾವುದೇ ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ, ಇದು ಹಮಾಸ್ ಉಗ್ರರು ನಡೆಸಿದ ರಾಕೆಟ್ ದಾಳಿ ಮಿಸ್ಫೈರ್ ಆಗಿ ಆಸ್ಪತ್ರೆ ಧ್ವಂಸವಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಜೊತೆಗೆ ಇಸ್ರೇಲ್ ಈ ಘಟನೆಯ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಆರೋಪಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ಎಂದು ಜಾಗತಿಕ ಮಾಧ್ಯಮಗಳಿಗೆ ಕರೆ ನೀಡಿದೆ.
ನಿನ್ನೆ ಸಂಜೆ ಇಸ್ರೇಲ್ ಸಮಯ 6.59ಕ್ಕೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಲು ಹಾರಿಬಿಟ್ಟ ರಾಕೆಟ್ ಮಿಸ್‌ಫೈರ್ ಆಗಿ ಸ್ಫೋಟಗೊಂಡಿದೆ. ಪರಿಣಾಮ ಅದು ಗಾಜಾ ಪಟ್ಟಿಯ ಆಸ್ಪತ್ರೆ ಮೇಲೆ ಬಿದ್ದು 100 ಜನರ ಸಾವಿಗೆ ಕಾರಣವಾಗಿದೆ. ಈ ಕೃತ್ಯವನ್ನು ನಾವು ಮಾಡಿಲ್ಲ ಎಂದು ಇಸ್ರೇಲ್ ಹೇಳಿದೆ. ಆದರೆ ಹಮಾಸ್ ಉಗ್ರರು ಇದು ಇಸ್ರೇಲ್‌ನದ್ದೇ ಕೈವಾಡ ಎಂದು ಆರೋಪಿಸಿದ್ದಾರೆ. ಇಸ್ರೇಲ್ ಗಾಜಾಪಟ್ಟಿಯಲ್ಲಿ ಹತ್ಯಾಕಾಂಡ ನಡೆಸುತ್ತಿದೆ ಎಂದು ಹಮಾಸ್ ಸಂಘಟನೆ ಆರೋಪಿಸಿದೆ.
ಇನ್ನು ಅಸೋಸಿಯೇಟೆಡ್ ಪ್ರೆಸ್ ಕೂಡ ಈ ಬಗ್ಗೆ ವೀಡಿಯೋ ಸಮೇತ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ರಾಕೆಟ್ ದಾಳಿಯಿಂದ ಗಾಜಾ ಪಟ್ಟಿಯಲ್ಲಿರುವ ಅಲ್ ಅಹ್ಲಿ ಆಸ್ಪತ್ರೆ ಹೊತ್ತಿ ಉರಿಯುವ ದೃಶ್ಯವನ್ನು ಪೋಸ್ಟ್ ಮಾಡಿದೆ. ಈ ದಾಳಿಗೆ ಇಸ್ರೇಲ್ ಕಾರಣ ಎಂದು ಹಮಾಸ್ ಸಂಘಟನೆ ಆರೋಪಿಸಿದೆ. ಆದರೆ ಇಸ್ರೇಲ್ ಸೇನೆ ಇದನ್ನು ನಿರಾಕರಿಸಿದೆ ಇದು ಹಮಾಸ್ ಸಂಘಟನೆ ಇಸ್ರೇಲ್ ಮೇಲೆ ದಾಳಿಗೆ ಹಾರಿಬಿಟ್ಟ ರಾಕೆಟ್ ಮಿಸ್‌ಫೈರ್ ಆಗಿ ಆಸ್ಪತ್ರೆ ಮೇಲೆ ಬಿದ್ದಿದೆ ಎಂದು ಇಸ್ರೇಲ್ ಹೇಳಿದೆ.
ಈ ದಾಳಿಗೆ ಈಗ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಎರಡು ದೇಶಗಳ ಮಾರಕ ದಾಳಿಯಿಂದ ಗಾಜಾಪಟ್ಟಿಯಲ್ಲಿರುವ ಅಮಾಯಕ ಅಸಹಾಯಕ ಜೀವಗಳು ಬಲಿಯಾಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ