ಫಿಲಿಪೈನ್ಸ್: 85 ಸೈನಿಕರಿದ್ದ ವಿಮಾನ ಪತನ!

By Suvarna NewsFirst Published Jul 4, 2021, 11:35 AM IST
Highlights

* ಫಿಲಿಪೈನ್ಸ್ ಮಿಲಿಟರಿ ವಿಮಾನ ಅಪಘಾತ.

* 85 ಸೈನಿಕರಿದ್ದ ವಿಮಾನ

* ಫಿಲಿಪೈನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಸಿರಿಲಿಟೊ ಸೊಬೆಜಾನಾ ಹೇಳಿಕೆ

ಮನಿಲಾ(ಜು.04): 85 ಮಂದಿ ಸೈನಿಕರಿದ್ದ ಮಿಲಿಟರಿ ವಿಮಾನ ದಕ್ಷಿಣ ಫಿಲಿಪೈನ್ಸ್‌ನಲ್ಲಿ ಅಪಘಾತಕ್ಕೀಡಾಗಿದೆ. ಪತನಗೊಂಡಿರುವ C-130 ಮಿಲಿಟರಿ ವಿಮಾನದಿಂದ ಒಟ್ಟು 40 ಸೈನಿಕರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಭಾನುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ವಿಮಾನ ಪತನಗೊಂಡಿರುವ ಮಾಹಿತಿಯನ್ನು ಫಿಲಿಪೈನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಸಿರಿಲಿಟೊ ಸೊಬೆಜಾನಾ ಖಚಿತಪಡಿಸಿದ್ದಾರೆ. 

ಇನ್ನು ಸೈನಿಕರಲ್ಲಿ ಹೆಚ್ಚಿನವರು ಇತ್ತೀಚೆಗಷ್ಟೇ ಬೇಸಿಕ್ ಮಿಲಿಟರಿ ತರಬೇತಿ ಪಡೆದವರಾಗಿದ್ದರು. ಇವರನ್ನು ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ಜಂಟಿ ಕಾರ್ಯಪಡೆಯ ಭಾಗವಾಗಿ ನೇಮಕಗೊಳಿಸಲಾಗಿತ್ತೆಂದು ತಿಳಿದು ಬಂದಿದೆ.

C-130 Military Aircraft Crash crashed in a southern province 40s ware rescued n brought to Hospital Thank God today . pic.twitter.com/fylCHb3XwU

— pynshailangjyrwa (@pynshailangjyr1)

ಲ್ಯಾಂಡಿಂಗ್ ವೇಳೆ ದುರಂತ

ಸುಲು ಪ್ರಾಂತ್ಯದ ಜೋಲೋ ದ್ವೀಪದಲ್ಲಿ ಲ್ಯಾಂಡಿಂಗ್ ವೇಳೆ ಈ ದುರಂತ ಸಂಭವಿಸಿದೆ. ರನ್‌ ವೇ ಮೇಲೆ ವಿಮಾನ ಲ್ಯಾಂಡ್‌ ಆಗದ ಕಾರಣ ಈ ಅಪಘಾತ ಸಂಭವಿಸಿದೆ. 

 

click me!