
- ಈ ಮೂಲಕ ಅಂತಾರಾಷ್ಟ್ರೀಯ ತೈಲ ಪೂರೈಕೆ ಮೇಲೆ ಹಿಡಿತ: ಸೌರಭ್ ಮುಖರ್ಜಿಯಾ
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್ ಜತೆ ಸೇರಿಕೊಂಡು ಚೀನಾ ಕೂಡ ಹೋರ್ಮುಜ್ ಜಲಸಂಧಿ ಮೇಲೆ ಹಿಡಿತ ಸಾಧಿಸಲಿದೆ. ಈ ಮೂಲಕ ವಿಶ್ವದ ವಿಶ್ವದ ಬಹುತೇಕ ತೈಲ ಪೂರೈಕೆ ಮೇಲೆ ನಿಯಂತ್ರಣ ಹೊಂದಲಿದೆ. ಹೀಗೇನಾದರೂ ಆದರೆ ಅದು ಅಂತಾರಾಷ್ಟ್ರೀಯ ತೈಲ ಪೂರೈಕೆ ಮೇಲೆ ನಿಯಂತ್ರಣ ಹೊಂದುವ ನಿಟ್ಟಿನಲ್ಲಿ ಚೀನಾಗೆ ಸಿಕ್ಕ ಅತಿದೊಡ್ಡ ಯಶಸ್ಸಾಗಲಿದೆ ಎಂದು ಮರ್ಸಿಲಸ್ ಇನ್ವೆಸ್ಟ್‌ಮೆಂಟ್ಸ್‌ನ ಸೌರಭ್ ಮುಖರ್ಜಿಯಾ ಹೇಳಿದ್ದಾರೆ.
ಖ್ಯಾತ ಹೂಡಿಕೆ ಸಲಹೆಗಾರರಾಗಿರುವ ಮುಖರ್ಜಿಯಾ ಅವರು, ಮಧ್ಯಪ್ರಾಚ್ಯ ಸಂಘರ್ಷವು ಅಲ್ಪಾವಧಿಯ ತಿಕ್ಕಾಟ ಅಲ್ಲ. ಇದು ತೈಲ ಮತ್ತು ಹೋರ್ಮುಜ್‌ಗಾಗಿ ನಡೆಯುತ್ತಿರುವ, ವ್ಯೂಹಾತ್ಮಕ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ದುರದೃಷ್ಟವಶಾತ್ ಇದು ಶೀಘ್ರದಲ್ಲಿ ಮುಕ್ತಾಯವಾಗುವ ಲಕ್ಷಣ ಕಾಣುತ್ತಿಲ್ಲ. ಹೋರ್ಮುಜ್ ಮೇಲಿನ ನಿಯಂತ್ರಣದ ಹೋರಾಟ ಹಲವು ತಿಂಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚೀನಾವು ಗಲ್ಫ್ ದೇಶಗಳ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಹೋರ್ಮುಜ್ ಮೂಲಕ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಆ ದೇಶದ ರಾಷ್ಟ್ರೀಯ ಹಿತಾಸಕ್ತಿಯ ಭಾಗವಾಗಿದೆ. ಈಗಾಗಲೇ ಚೀನಾ ಅಮೆರಿಕದ ನಿರ್ಬಂಧಗಳನ್ನು ಬದಿಗೆ ತಳ್ಳಿ ಇರಾನ್‌ನಿಂದ ಭಾರೀ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದೆ ಎಂದು ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ ಅಬ್ದುಲ್ಲಾ ಬಾಬೂದ್ ಕೂಡ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಿಂತಲ್ಲೇ ನಡುಗಿದ ಪಾಕ್, ಚೀನಿಗಳು ಗಡಗಡ: ಎಂಟ್ರಿ ಆಗಲಿದೆ ಶತ್ರುಗಳ ಎದೆಸೀಳೋ ಅಣ್ವಸ್ತ್ರ ಧಾರಿ ಜಲಾಂತರ್ಗಾಮಿ ಅರಿಧಮನ್
ಈ ನಡುವೆ, ಚೀನಾವು ಯಾವುದೇ ಮಾಹಿತಿ ನೀಡದೆ 40 ದಿನಗಳ ಕಾಲ ಸಮುದ್ರದಾಚೆಯ ಬಹುದೊಡ್ಡ ಪ್ರಮಾಣದ ವಾಯುಪ್ರದೇಶವನ್ನು ಬಂದ್ ಮಾಡಿರುವುದು ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಯಾವುದೇ ಯುದ್ಧ ಅಭ್ಯಾಸ ಅಥವಾ ಕ್ಷಿಪಣಿ ಪರೀಕ್ಷೆಗಾಗಿ ಮೂರ್ನಾಲ್ಕು ದಿನಗಳ ನಿರ್ಬಂಧ ಹೇರಲಾಗುತ್ತದೆ. ಆದರೆ, ಒಂದೂವರೆ ತಿಂಗಳ ಕಾಲ ತೈವಾನ್‌ನಿಂದ ನೂರಾರು ಮೈಲಿ ದೂರದ ವಾಯು ಪ್ರದೇಶದಲ್ಲಿ ಈ ರೀತಿ ನಿರ್ಬಂಧ ಹೇರಿರುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ