
ನವದೆಹಲಿ: ಮೈಕ್ರೋಸಾಫ್ಟ್ ಒಡೆತನದ ‘ಗಿಟ್‌ಹಬ್’ನಲ್ಲಿ ಉದ್ಯೋಗಿಯೊಬ್ಬ ಮಾಡಿದ ತಪ್ಪಿನಿಂದಾಗಿ ಸುಮಾರು 32 ಟಿಬಿಯಷ್ಟು ಮಾಹಿತಿ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಇಂಟರ್ನೆಟ್‌ನಲ್ಲಿ ಕ್ಲೌಡ್ ಭದ್ರತೆಯನ್ನು (cloud security) ಒದಗಿಸುವ ‘ವಿಜ್’(Wiz) ಇದನ್ನು ಕಂಡುಹಿಡಿದಿದೆ. ‘ಗಿಟ್‌ಹಬ್’ (GitHub) ಎಂಬುದು ಫೇಸ್ ರೆಕಗ್ನಿಶನ್‌ಗಾಗಿ ಎಐ ಸೌಲಭ್ಯವನ್ನು ಒದಗಿಸುವ ಸಂಸ್ಥೆಯಾಗಿದ್ದು, ಉದ್ಯೋಗಿಯೊಬ್ಬ ತಪ್ಪಾದ ಯುಆರ್‌ಎಲ್ ಸೃಷ್ಟಿ ಮಾಡಿದ ಕಾರಣಕ್ಕಾಗಿ ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸಿದವರಿಗೆ ನಿಗದಿತಕ್ಕಿಂತ ಹೆಚ್ಚು ಮಾಹಿತಿಗಳು ಕಂಪನಿಯ ಸರ್ವರ್‌ನಿಂದ (Server) ಲಭ್ಯವಾಗಿದೆ. ಸುಮಾರು 32 ಟಿಬಿಯಷ್ಟು ಡಾಟಾ ಸೋರಿಕೆಯಾಗಿದ್ದು, ಇದರಲ್ಲಿ ಮೈಕ್ರೋಸಾಫ್ಟ್ ಸೇವೆಗಳ (Microsoft service) ಖಾಸಗಿ ಕೀಗಳು ಮತ್ತು 30 ಸಾವಿರಕ್ಕೂ ಹೆಚ್ಚು ಮೈಕ್ರೋಸಾಫ್ಟ್‌ನ ಟೀಮ್ ಮೆಸೇಜ್ (Team Message)ಸೇರಿದಂತೆ ಸಾಕಷ್ಟು ಖಾಸಗಿ ಮಾಹಿತಿಯನ್ನು ಬಿಟ್ಟುಕೊಟ್ಟಿರುಬಹುದು ಎಂದು ವಿಜ್ ಹೇಳಿದೆ.
ಕಮೆಂಟ್ ಮಾಡಿದರೂ ಸಾಕು ನಿಮ್ಮ ಡೇಟಾ ಕದಿಯುತ್ತೆ ChatGPT, 300 ಬಿಲಿಯನ್ ಮಾಹಿತಿಗೆ ಕನ್ನ!
ಸಲ್ಮಾನ್ ಖಾನ್, ಸುಂದರ್ ಪಿಚೈ ಸೇರಿ 40 ಕೋಟಿ ಟ್ವಿಟ್ಟರ್ ಗ್ರಾಹಕರ ಮಾಹಿತಿ ಸೋರಿಕೆ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ