ಕೋವಿಡ್‌ಗೆ ಮಾತ್ರೆ: ಆಸ್ಪತ್ರೆ ದಾಖಲು, ಸಾವಿನ ಪ್ರಮಾಣ ಅರ್ಧದಷ್ಟು ಇಳಿಕೆ!

By Suvarna NewsFirst Published Oct 3, 2021, 7:56 AM IST
Highlights

* ಕೋವಿಡ್‌ಗೆ ಅಮೆರಿಕದ ಕಂಪೆನಿಯಿಂದ ಮಾತ್ರೆ

* ಆಸ್ಪತ್ರೆ ದಾಖಲು ಸಾವಿನ ಪ್ರಮಾಣ ಅರ್ಧದಷ್ಟು ಇಳಿಕೆ

ವಾಷಿಂಗ್ಟನ್‌(ಸೆ.03): ಕೋವಿಡ್‌ ಸಾಂಕ್ರಾಮಿಕದ(Covid 19) ವಿರುದ್ಧ ಹೋರಾಡಲು ಅಮೆರಿಕ ಮೂಲದ ಮೆರ್ಕ್(Merck) ಕಂಪೆನಿ ‘ಮೋಲ್ನುಪಿರಾವಿರ್‌’ ಹೆಸರಿನ ಮಾತ್ರೆ ತಯಾರಿಸಿದೆ. ಈ ಮಾತ್ರೆಯು ಕೊರೋನಾ ಸೋಂಕಿತರು ಆಸ್ಪತ್ರೆ ಸೇರುವ ಮತ್ತು ಸೋಂಕಿತರ ಸಾವನ್ನು(Covid 19 Death) ಅರ್ಧದಷ್ಟು ಕಡಿಮೆ ಮಾಡುತ್ತದೆ ಎಂದು ಕಂಪೆನಿ ಹೇಳಿದೆ.

775 ಜನರ ಮೇಲೆ ಪ್ರಯೋಗ ನಡೆಸಿದ ಕಂಪೆನಿ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು, ಶೀಘ್ರವೇ ಪ್ರಪಂಚಾದ್ಯಂತ ಪೂರೈಕೆ ಮಾಡಲು ಅಮೆರಿಕ(USA) ಆರೋಗ್ಯ ಅಧಿಕಾರಿಗಳ ಅನುಮತಿ ಕೇಳುವುದಾಗಿ ಕಂಪೆನಿ ಹೇಳಿದೆ. ಮಾಲ್ನುಪಿರೇವಿರ್‌ ಮಾತ್ರೆಯು ಪ್ರಯೊಗದ ವೇಳೆ ಶೀಘ್ರ ಫಲಿತಾಂಶವನ್ನು ನೀಡಿದೆ. ಮಾತ್ರೆ ನೀಡಿದ 5 ದಿನಗಳ ನಂತರ ಕೋವಿಡ್‌ ಸೋಂಕಿತರ ಗುಣಲಕ್ಷಣಗಳು ಅರ್ಧದಷ್ಟುಕಡಿಮೆಯಾಗಿದೆ.

ಸಾಮಾನ್ಯ ರೋಗ ಲಕ್ಷಣ ಹೊಂದಿದವರಿಂದ ತೀವ್ರ ರೋಗ ಲಕ್ಷಣ ಹೊಂದಿರುವವರ ಮೇಲೂ ಈ ಮಾತ್ರೆ ಪ್ರಯೋಗಿಸಲಾಗಿದೆ. ಈ ಮಾತ್ರೆ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಶೇ.7.3ರಷ್ಟುಜನ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಥವಾ ಸಾವೀಗೀಡಾಗಿದ್ದಾರೆ. ಉಳಿದವರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಮೆರ್ಕ್ ಹಾಗೂ ಪಾಲುದಾರ ಸಂಸ್ಥೆ ರಿಡ್ಜ್‌ಬ್ಯಾಕ್‌ ಬಯೋಥೆರಪಿಟಿಕ್ಸ್‌ ಹೇಳಿದೆ.

ಭಾರತದಿಂದ 90 ಕೋಟಿ ಡೋಸ್‌ ಲಸಿಕೆ ವಿತರಣೆ

ಗಾಂಧೀ ಜಯಂತಿ(Gandhi Jayanti) ದಿನವಾದ ಅ.2ರಂದು ದೇಶದಲ್ಲಿ ಕೋವಿಡ್‌ ಲಸಿಕೆ ಅಭಿಯಾನ 90 ಕೋಟಿ ಡೋಸ್‌ಗಳ ಹೊಸ ಮೈಲುಗಲ್ಲು ಸ್ಥಾಪಿಸಿದೆ. 2021ರ ಜ.16ರಂದು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡುವ ಮೂಲಕ ಆರಂಭವಾಗಿದ್ದ ಅಭಿಯಾನ ಬಳಿಕ ಮಾ.1ರಿಂದ 60 ವರ್ಷ ಮೇಲ್ಪಟ್ಟಎಲ್ಲಾ ವ್ಯಕ್ತಿಗಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವ್ಯಕ್ತಿಗಳಿಗೂ ವಿಸ್ತರಣೆಯಾಗಿತ್ತು. ಏ.1ರಿಂದ ಅನ್ನು 18 ವರ್ಷ ಮೇಲ್ಪಟ್ಟಎಲ್ಲಾ ವಯೋವರ್ಗಕ್ಕೂ ವಿಸ್ತರಣೆ ಮಾಡಲಾಗಿತ್ತು.

click me!