‘ಕಂದಹಾರ್‌’ ಉಗ್ರ ಇಂದು ಪಾಕ್‌ ಜೈಲಿಂದ ರಿಲೀಸ್‌

Suvarna News   | Asianet News
Published : Dec 26, 2020, 08:39 AM ISTUpdated : Dec 26, 2020, 08:56 AM IST
‘ಕಂದಹಾರ್‌’ ಉಗ್ರ ಇಂದು ಪಾಕ್‌ ಜೈಲಿಂದ ರಿಲೀಸ್‌

ಸಾರಾಂಶ

‘ಕಂದಹಾರ್‌’ ಉಗ್ರ ಇಂದು ಪಾಕ್‌ ಜೈಲಿಂದ ರಿಲೀಸ್‌ | ಉಗ್ರ ಅಹಮದ್‌ ಒಮರ್‌ ಸಯೀದ್‌ ಶೇಖ್‌ ಹಾಗೂ ಆತನ ಮೂವರು ಸಹಚರರು ಶನಿವಾರ ಜೈಲಿನಿಂದ ಬಿಡುಗಡೆ  

ಕರಾಚಿ(ಡಿ.26): ಕಂದಹಾರ್‌ ವಿಮಾನ ಅಪಹರಣ ಪ್ರಕರಣದ ವೇಳೆ ಭಾರತದ ಜೈಲಿನಿಂದ 1999ರಲ್ಲಿ ಬಿಡುಗಡೆಯಾಗಿದ್ದ, ಅಮೆರಿಕ ಮೂಲದ ತನಿಖಾ ಪತ್ರಕರ್ತ ಡೇನಿಯಲ್‌ ಪರ್ಲ್ ಹತ್ಯೆ ಪ್ರಕರಣ ಸಂಬಂಧ 2002ರಿಂದ ಪಾಕಿಸ್ತಾನ ಜೈಲಿನಲ್ಲಿದ್ದ ಅಲ್‌ಖೈದಾ ಉಗ್ರ ಅಹಮದ್‌ ಒಮರ್‌ ಸಯೀದ್‌ ಶೇಖ್‌ ಹಾಗೂ ಆತನ ಮೂವರು ಸಹಚರರು ಶನಿವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಒಮರ್‌ ಶೇಖ್‌ ಸೇರಿದಂತೆ ಇತರೆ ಮೂವರು ಆರೋಪಿಗಳ ಬಂಧನವು ಅಕ್ರಮ. ಹೀಗಾಗಿ ತಕ್ಷಣವೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಸಿಂಧ್‌ ಹೈಕೋರ್ಟ್‌ ತಾಕೀತು ಮಾಡಿದೆ. ಹೀಗಾಗಿ ಉಗ್ರರು ಶನಿವಾರ ಬಿಡುಗಡೆಯಾಗಲಿದ್ದಾರೆ.

ಬ್ರಿಟನ್‌ ಆಯ್ತು, ಈಗ ನೈಜೀರಿಯಾ ವೈರಸ್‌

1999ರಲ್ಲಿ 150 ಪ್ರಯಾಣಿಕರಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನವನ್ನು ಅಪಹರಿಸಿ ಕಂದಹಾರ್‌ಗೆ ಒಯ್ಯಲಾಗಿತ್ತು. ಪ್ರಯಾಣಿಕರ ಸುರಕ್ಷಿತ ಬಿಡುಗಡೆಗಾಗಿ ಅಂದಿನ ಕೇಂದ್ರ ಸರ್ಕಾರ ಒಮರ್‌ ಶೇಖ್‌, ಮೌಲಾನಾ ಮಸೂದ್‌ ಅಜರ್‌ ಮತ್ತಿತರ ಉಗ್ರರನ್ನು ಭಾರತದ ಜೈಲಿನಿಂದ ಬಿಡುಗಡೆ ಮಾಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!