
ರೊಸೆಯು (ಜೂ.08): ಪಿಎನ್ಬಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ದೇಶ ಭ್ರಷ್ಟಉದ್ಯಮಿ ಮೇಹುಲ್ ಚೋಕ್ಸಿ, ಡೊಮಿನಿಕಾ ಪೊಲೀಸರಿಗೆ ಸಿಕ್ಕಿ ಬೀಳುವುದಕ್ಕೂ ಮುನ್ನ ಕೆಲವೊಂದು ಸಾಕ್ಷ್ಯಾಧಾರಗಳನ್ನು ಸಮುದ್ರಕ್ಕೆ ಎಸೆದು ನಾಶಪಡಿಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಚೋಕ್ಸಿ ತನ್ನ ಬಳಿ ಇದ್ದ ಕೆಲವೊಂದು ದಾಖಲೆಗಳನ್ನು ಸಮುದ್ರಕ್ಕೆ ಎಸೆಯುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಬೆನ್ನತ್ತಿ ಬಂದಿದ್ದರು. ಈ ವೇಳೆ ಮೇಹುಲ್ ಚೋಕ್ಸಿ ಓಡಲು ಆರಂಭಿಸಿದ್ದ. ಆದರೆ, ಓಡಲು ಸಾಧ್ಯವಾಗದೇ ಎರಡು ಬಾರಿ ಎಡವಿ ಬಿದ್ದಿದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ನನ್ನ ಮೇಲೆ ಹಲ್ಲೆ:
ನಾನು ಆ್ಯಂಟಿಗುವಾದಿಂದ ಪರಾರಿ ಆಗಿದ್ದಲ್ಲ. 8-10 ಮಂದಿ ತನ್ನ ಮೇಲೆ ದಾಳಿ ನಡೆಸಿ ಬಲವಂತವಾಗಿ ಡೊಮಿನಿಕಾಗೆ ಕರೆತಂದಿದ್ದಾರೆ ಎಂದು ಚೋಕ್ಸಿ ಆರೋಪಿಸಿದ್ದಾನೆ. ಈ ಪ್ರಕರಣದಲ್ಲಿ ರಹಸ್ಯ ಮಹಿಳೆ ಎಂದೇ ಗುರುತಿಸಿಕೊಂಡಿರುವ ಬರ್ಬರಾ ಜಬಾರಿಕಾ ಪಾತ್ರದ ಬಗ್ಗೆಯೂ ಚೋಕ್ಸಿ ಬಾಯಿಬಿಟ್ಟಿದ್ದಾನೆ.
ಬರ್ಬರಾ ತನ್ನ ಸ್ನೇಹಿತೆ ಆಗಿದ್ದು, ಎರಡು ವರ್ಷದಿಂದ ಆಕೆಯ ಜೊತೆ ಸಂಪರ್ಕದಲ್ಲಿದ್ದೇನೆ. ಮನೆಗೆ ಬಂದು ತನ್ನನ್ನು ಕರೆದೊಯ್ಯವಂತೆ ಆಕೆ ಕೇಳಿಕೊಂಡಿದ್ದಳು. ಆಕೆಯ ಮನೆಗೆ ಹೋದ ವೇಳೆ 8ರಿಂದ 10 ಮಂದಿ ತನ್ನ ಮೇಲೆ ಹಲ್ಲೆ ನಡೆಸಿ ಫೋನ್ ಹಾಗೂ ಪರ್ಸ್ ಅನ್ನು ಕಿತ್ತುಕೊಂಡು ಡೊಮಿನಿಕಾಗೆ ಬಲವಂತವಾಗಿ ಕರೆತಂದಿದ್ದಾರೆ. ಈ ವೇಳೆ ಬರ್ಬರಾ ತನ್ನ ಸಹಾಯಕ್ಕೆ ಬರಲಿಲ್ಲ ಎಂದು ಚೋಕ್ಸಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ