
ನವದೆಹಲಿ: ‘12 ಸಾವಿರ ಕೋಟಿ ರು. ಬ್ಯಾಂಕ್ ವಂಚನೆ ಎಸಗಿರುವ ಹಾಗೂ ಭಾರತದ ಬಹುಬೇಡಿಕೆ ಪಟ್ಟಿಯಲ್ಲಿರುವ ವಂಚಕ ಮೆಹುಲ್ ಚೋಕ್ಸಿ ಗಡೀಪಾರಿಗೆ ಮುಂಬೈ ಜೈಲನ್ನು ಗುರುತಿಸಲಾಗಿದೆ. ಜೈಲಲ್ಲಿ ಚೋಕ್ಸಿಗಾಗಿ ಹಲವು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ’ ಎಂದು ಭಾರತ ಸರ್ಕಾರವು ಬೆಲ್ಜಿಯಂ ಸರ್ಕಾರಕ್ಕೆ ಪತ್ರ ಬರೆದಿದೆ.
ಬೆಲ್ಜಿಯಂನಲ್ಲಿ ಚೋಕ್ಸಿ ಬಂಧಿತನಾಗಿದ್ದು, ಆತನ ಗಡೀಪಾರಿಗೆ ಭಾರತ ಕಾಯುತ್ತಿದೆ. ಗಡೀಪಾರು ವಿಷಯ ಬೆಲ್ಜಿಯಂ ಕೋರ್ಟಿನಲ್ಲಿದೆ.
ಈ ಸಂಬಂಧ, ಕೋರ್ಟಿಗೆ ಮನವರಿಕೆ ಮಾಡಲು ಮುಂದಾಗಿರುವ ಕೇಂದ್ರ ಗೃಹ ಇಲಾಖೆ, ‘ಚೋಕ್ಸಿಗಾಗಿ ಮುಂಬೈನ ಅರ್ಥರ್ ರಸ್ತೆಯಲ್ಲಿರುವ ಜೈಲ್ ಕೋಣೆ ಸಂಖ್ಯೆ 12 ನಿಗದಿಪಡಿಸಲಾಗಿದೆ. ಅಲ್ಲಿ 3 ಚದರಡಿ ವಿಸ್ತೀರ್ಣವನ್ನು ಕೊಡಲಾಗುತ್ತದೆ.
ಅಲ್ಲಿ ಅಟಾಚ್ಡ್ ಶೌಚಾಲಯ, ವಾಷ್ ಬೇಸನ್, 3 ಹೊತ್ತು ಬಿಸಿ ಊಟ, ಸಮಯಕ್ಕೆ ಸರಿಯಾಗಿ ತಿಂಡಿ, ಹೊರಾಂಗಣ ಕ್ರೀಡೆ, ಒಳಾಂಗಣ ಆಟ, ಗ್ರಂಥಾಲಯ ಸೌಲಭ್ಯ ನೀಡಲಾಗುತ್ತದೆ. ಜೊತೆಗೆ ಆರೋಗ್ಯ ತಪಾಸಣೆ, ಐಸಿಯು ವ್ಯವಸ್ಥೆ ಹೊಂದಿರುವ ಆಸ್ಪತ್ರೆಯೂ ಸಹ ಇದೆ’ ಎಂದು ಪತ್ರ ಬರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ