ಅಫ್ಘಾನ್‌ ಸಹಾಯವಾಣಿ ಕೇಂದ್ರಕ್ಕೆ 5 ದಿನದಲ್ಲೇ 9,200 ಪ್ರಶ್ನೆಗಳು!

By Suvarna NewsFirst Published Aug 23, 2021, 9:33 AM IST
Highlights

* ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಅಟ್ಟಹಾಸ

* ಭಾರತೀಯ ರಕ್ಷಣೆಗಾಗಿ ಭಾರತದ ವಿದೇಶಾಂಗ ಇಲಾಖೆ ಸ್ಥಾಪಿಸಿದ ವಿಶೇಷ ಸಹಾಯವಾಣಿ

* ಐದು ದಿನಗಳಲ್ಲೇ 2 ಸಾವಿರಕ್ಕೂ ಹೆಚ್ಚು ಕರೆಗಳು

ನವದೆಹಲಿ(ಆ.23): ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಅಟ್ಟಹಾಸದಿಂದ ಭಾರತೀಯರ ರಕ್ಷಣೆಗಾಗಿ ಅಲ್ಲಿ ಭಾರತದ ವಿದೇಶಾಂಗ ಇಲಾಖೆ ಸ್ಥಾಪಿಸಿದ ವಿಶೇಷ ಸಹಾಯವಾಣಿ ಕೇಂದ್ರಕ್ಕೆ ಐದು ದಿನಗಳಲ್ಲೇ 2 ಸಾವಿರಕ್ಕೂ ಹೆಚ್ಚು ಕರೆಗಳು ಸೇರಿದಂತೆ ಒಟ್ಟಾರೆ 9200 ಪ್ರಶ್ನೆಗಳು ಹರಿದುಬಂದಿವೆ.

ಈ ಪೈಕಿ ವಾಟ್ಸಾಪ್‌ ಮುಖಾಂತರ 6000 ಪ್ರಶ್ನೆಗಳು ಬಂದಿದ್ದರೆ, 1200ಕ್ಕೂ ಹೆಚ್ಚು ಪ್ರಶ್ನೆಗಳು ಮೇಲ್‌ಗಳಲ್ಲಿ ಹರಿದುಬಂದಿದ್ದು, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಷ್ಘಾನಿಸ್ತಾನ ತಾಲಿಬಾನ್‌ ಉಗ್ರರ ವಶವಾದ ಬಳಿಕ ಅಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರಲು ಸೇರಿದಂತೆ ಇನ್ನಿತರ ನೆರವು ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ವಿದೇಶಾಂಗ ಇಲಾಖೆ ಸಹಾಯವಾಣಿ ರೀತಿಯ ಅಷ್ಘಾನ್‌ ವಿಶೇಷ ಘಟಕವೊಂದನ್ನು ಸ್ಥಾಪನೆ ಮಾಡಿತ್ತು.

ಮತ್ತೊಂದೆಡೆ 107 ಭಾರತೀಯರು ಸೇರಿದಂತೆ ಒಟ್ಟಾರೆ 168 ಪ್ರಯಾಣಿಕರನ್ನು ಭಾರತೀಯ ವಾಯುಪಡೆಯ ಸಿ-17 ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ.

click me!