ಮದುವೆಗೆ ಬಂದವರಿಗೆ ಕಿಕ್ಕೇರಿಸಿದ ವಧುವಿನ ಬಂಧನ

Published : Apr 27, 2022, 03:39 PM IST
ಮದುವೆಗೆ ಬಂದವರಿಗೆ ಕಿಕ್ಕೇರಿಸಿದ ವಧುವಿನ ಬಂಧನ

ಸಾರಾಂಶ

ಮದುವೆ ಊಟಕ್ಕೆ ಗಾಂಜಾ ಮಿಕ್ಸ್ ಮಾಡಿದ ಆರೋಪ ವಧು ಹಾಗೂ ಆಹಾರ ತಯಾರಕರ ವಿರುದ್ಧ ಪ್ರಕರಣ ಅಮೆರಿಕಾದ ಫ್ಲೋರಿಡಾದಲ್ಲಿ ಘಟನೆ

ಮದುವೆ ಊಟಕ್ಕೆ ಗಾಂಜಾ ಮಿಕ್ಸ್‌ ಮಾಡಿದ ಆರೋಪದ ಮೇಲೆ ವಧುವೊಬ್ಬಳನ್ನು ಪೊಲೀಸರು ಬಂಧಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ಅತಿಥಿಗಳಿಗೆ ತಿಳಿಯದಂತೆ ಆಕೆ ತನ್ನ ಮದುವೆಯ ಆರತಕ್ಷತೆ ಭೋಜನಕ್ಕೆ ಗಾಂಜಾ ಮಿಕ್ಸ್‌ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ 42ರ ಹರೆಯದ ವಧು(Bride) ದನ್ಯಾ ಸ್ವೋಬೋಡಾ (Danya Svoboda) ಮತ್ತು ಮದುವೆಗೆ ಆಹಾರ ಪೂರೈಸಿದ ಆಕೆಯ ಆಹಾರ ಪೂರೈಕೆದಾರ ಜೋಸೆಲಿನ್ ಬ್ರ್ಯಾಂಟ್ (Jocelyn Bryant) ಅವರನ್ನು ಬಂಧಿಸಲಾಗಿದೆ.  ಗಾಂಜಾ ಪೂರೈಕೆ, ನಿರ್ಲಕ್ಷ್ಯ ಮತ್ತು ಉದ್ದೇಶಪೂರ್ವಕ ಹಾನಿ ಮಾಡಿದ ಆರೋಪ ಹೊರಿಸಲಾಗಿದೆ. 

ಮದುವೆಗೆ ಬಂದ ಅತಿಥಿಗಳು ಗಾಂಜಾ ಮಿಶ್ರಿತ ಆಹಾರ ತಿಂದು ಅನಾರೋಗ್ಯಕ್ಕೆ ಒಳಗಾದ ನಂತರ ಈ ಪ್ರಕರಣ ಬಯಲಾಗಿದೆ. ಮದುವೆಗೆ ಬಂದ 41 ವರ್ಷದ ಅತಿಥಿಯೊಬ್ಬರು ತಮ್ಮ ದೇಹದಲ್ಲಿ ಡ್ರಗ್ಸ್ ಇರುವಂತೆ ಭಾಸವಾಗುತ್ತಿದೆ ಎಂದು ಹೇಳಿದ ನಂತರ ಮದುವೆ ಹಾಲ್‌ಗೆ ಪೊಲೀಸರನ್ನು ಕರೆಸಲಾಯಿತು.

 

ಫ್ಲೋರಿಡಾ ಡೆಪ್ಯೂಟೀಸ್‌ನ ಬಾಡಿಕ್ಯಾಮ್ ನಲ್ಲಿ ಸೆರೆಯಾದ ವೀಡಿಯೊದಲ್ಲಿ ಮದುವೆಗೆ ಬಂದ ಅತಿಥಿಗಳನ್ನು ಸ್ಟ್ರೆಚರ್‌ಗಳಲ್ಲಿ ಕರೆದೊಯ್ಯುತ್ತಿರುವುದು ಕಾಣಿಸುತ್ತಿದೆ. ಜೊತೆಗೆ ವಧು ನಗುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ. ಆಹಾರದಲ್ಲಿ ಏನು ಹಾಕಲಾಗಿತ್ತೋ ಗೊತ್ತಿಲ್ಲ, ಆದರೆ ಆಹಾರ ತಿಂದ ನಂತರ ನಾವೆಲ್ಲರೂ ಆಮಲೇರಿದಂತಾಗಿದ್ದೇವೆ ಎಂದು ಮದುವೆಗೆ ಬಂದ ವ್ಯಕ್ತಿಯೊಬ್ಬರು ಸೆಮಿನೋಲ್ ಕೌಂಟಿ ಶೆರಿಫ್‌ನ (Seminole County Sheriff) ಡೆಪ್ಯೂಟಿಗೆ ಹೇಳುತ್ತಿರುವುದು ವಿಡಿಯೋದಲ್ಲಿದೆ.

Bengaluru Drug Bust: ಕುರ್ಕುರೆ, ಚಕ್ಕುಲಿ ಪ್ಯಾಕೆಟಲ್ಲಿ ಡ್ರಗ್ಸ್‌ ತುಂಬಿಸಿ ಮಾರಾಟ..!

ಅದನ್ನು ಯಾರು ಆಹಾರದಲ್ಲಿ (food) ಹಾಕಿರಬಹುದು ಅದನ್ನು ಮದುವೆಗೆ ಬಂದ ಅತಿಥಿ (guest) ಹಾಕಿರಬಹುದೇ ಅಥವಾ ಅಡುಗೆ ಕಂಪನಿ ಹಾಕಿದೆಯೇ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. ಪೊಲೀಸರು ಮದುವೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕ್ಯಾಟರರ್‌ಗಳು ಆ ಸ್ಥಳದಿಂದ ಹೊರ ಹೋಗಲು ಪ್ರಯತ್ನಿಸುತ್ತಿರುವುದು ಮತ್ತು ಡ್ರಗ್‌ ಮಿಶ್ರಿತ ಆಹಾರವನ್ನು ಹೊರಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವುದನ್ನು ಬಾಡಿಕ್ಯಾಮ್  ಸೆರೆ ಹಿಡಿದಿದೆ.

ಗಾಂಜಾ ವ್ಯಸನಿಯಾಗಿದ್ದ ಮಗನನ್ನು ಕಂಬಕ್ಕೆ ಕಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಶಿಕ್ಷೆ ಕೊಟ್ಟ ತಾಯಿ!

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ದಾಖಲೆಗಳು ಹೇಳುವಂತೆ ಸುಮಾರು 50 ಅತಿಥಿಗಳು ಮದುವೆಯ ಆರತಕ್ಷತೆಯಲ್ಲಿ (wedding reception) ಭಾಗವಹಿಸಿದ್ದರು ಮತ್ತು ಅವರಲ್ಲಿ ಕನಿಷ್ಠ 18 ಮಂದಿ ಊಟ ಮಾಡಿದ ನಂತರ  ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಮದುವೆಗೆ ಬಂದ ಅತಿಥಿಗಳು ಆಸ್ಪತ್ರೆಯಲ್ಲಿ ಮೂತ್ರ ಪರೀಕ್ಷೆ ಮಾಡಿಸಿಕೊಂಡಿದ್ದು,  ಗಾಂಜಾ ಸೇವನೆ (marijuana consumption) ಆಗಿದೆ ಎಂಬ ವರದಿ ಬಂದಿದೆ ಎಂದು ತಿಳಿದು ಬಂದಿದೆ. ಗಾಂಜಾ ಮಿಶ್ರಿತ ಆಹಾರ ಸೇವನೆಯ ನಂತರ ವಿಲಕ್ಷಣ, ಜುಮ್ಮೆನಿಸುವ, ಚಡಪಡಿಸುವ ಮತ್ತು ಬಾಯಿ ವಿಪರೀತ ಒಣಗುವಂತ ಅನುಭವವಾಗಿದೆ ಎಂದು ಅತಿಥಿಯೊಬ್ಬರು ಹೇಳಿದ್ದಾರೆ.

ಮಾರ್ಚ್‌ನಲ್ಲಿ ಗಾಂಜಾ(Marijuana) ಚಾಕ್ಲೆಟ್‌ ಮಾರಾಟ ಮಾಡುತ್ತಿದ್ದ ಒಡಿಸ್ಸಾ ಮೂಲದ ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳನ್ನು ಮಹದೇವಪುರ ಠಾಣೆ ಪೊಲೀಸರು(Police) ಬಂಧಿಸಿದ್ದರು. ಒಡಿಸ್ಸಾದ ಬಿನಕಾಪುರ ಗ್ರಾಮದ ಪ್ರದೀಪ್‌ ಕುಮಾರ್‌ ರಾವುತ್‌(33) ಮತ್ತು ಬಾಸುದೇವ್‌ ಗ್ರಾಮದ ಎಸ್‌.ಕೆ.ಸಜಾನ್‌ ಆಲಿ (27) ಬಂಧಿತರು. ಆರೋಪಿಗಳಿಂದ(Accused) 2 ಲಕ್ಷ ಮೌಲ್ಯದ ಒಂದು ಕೆ.ಜಿ.ಗಾಂಜಾ, 18 ಕೆ.ಜಿ. ತೂಕದ 3200 ಗಾಂಜಾ ಚಾಕ್ಲೆಟ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎ.ನಾರಾಯಣಪುರದ ಮಹದೇವಪುರ ರಿಂಗ್‌ ರಸ್ತೆಯ ಮೇಲ್ಸೇತುವೆ ಕೆಳಗೆ ಇಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?