
ಮಲೇಷಿಯಾ (ಜ.28) ತವರಿನಲ್ಲಿ ಮೊದಲ ಪತ್ನಿ ವಿದೇಶದಲ್ಲಿ ಎರಡನೇ ಪತ್ನಿ. ಒಬ್ಬರಿಗೂಬ್ಬರು ಸಂಪರ್ಕವೇ ಇಲ್ಲ. ವಿದೇಶದಲ್ಲಿ ಮೊದಲ ಪತ್ನಿಗೆ ಯಾರ ಪರಿಚಯವೂ , ಸಂಪರ್ಕವೂ ಇಲ್ಲ. ಅದರೂ ಪತ್ನಿಯ ಗೂಗ್ಲಿಗೆ ಗಂಡ ಸಿಕ್ಕಿ ಬಿದ್ದಿದ್ದಾನೆ. ಮೊದಲ ಪತ್ನಿಗೆ ಗೊತ್ತಾಗದಂತೆ ಎರಡನೇ ಪತ್ನಿಯನ್ನು ಭೇಟಿಯಾಗಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಗಂಡನ ಕಳ್ಳಾಟ ಬಯಲಾಗಲು ಮೊದಲ ಪತ್ನಿ ಹಾಕಿದ ಗೂಗ್ಲಿ ಏನು? ಪಾಸ್‌ಪೋರ್ಟ್ ಮೂಲಕ ಸತ್ಯ ಬಯಲಾದ ಹಲವು ಘಟನೆಗಳಿವೆ. ಆದರೆ ಈ ಪ್ರಕರಣ ಮತ್ತಷ್ಟು ರೋಚಕವಾಗಿದೆ.
ಮಲೇಷಿಯಾದ ವ್ಯಕ್ತಿ ತನ್ನ ತವರಿನಲ್ಲಿ ಮೊದಲ ಪತ್ನಿ ಇದ್ದಾಳೆ. ಆಕೆಯ ಜೊತೆಯ ಸಂಸಾರ ನಡೆಸುತ್ತಿದ್ದಾನೆ. ಇದರ ನಡುವ ಇಂಡೋನೇಷಿಯಾದಲ್ಲೂ ಮದುವೆಯಾಗಿ ಪತ್ನಿ ಇದ್ದಾಳೆ. ಇಂಡೋನೇಷಿಯಾದ ಎರಡನೇ ಪತ್ನಿ ಐದು ತಿಂಗಳ ಗರ್ಭಿಣಿ. ಆಕೆಯನ್ನು ನೋಡಲು ಹೋಗಲೇಬೇಕಾದ ಅನಿವಾರ್ಯತೆ. ಇತ್ತ ಪತ್ನಿಗ ಗೊತ್ತಾಗಬಾರದು.ಹೀಗಾಗಿ ಅತ್ಯಂತ ಅಪಾಯದ ಹಾಗೂ ಸಾವಲಿನ ದಾರಿಯನ್ನೇ ಆಯ್ಕೆ ಮಾಡಿಕೊಳ್ಳಬೇಕಾಯಿತು. ಇದೇ ಮುಳುವಾಯಿತು.
ಮಲೇಷಿಯಾದಲ್ಲಿರುವ ಮೊದಲ ಪತ್ನಿಗೆ ಪತಿಯ ಕಳ್ಳಾಟಗಳ ಬಗ್ಗೆ ಅನುಮಾನವಿತ್ತು. ಪತಿಯ ನಡೆ ಹಾಗೂ ನುಡಿಯಲ್ಲೂ ಅನುಮಾನ ಮೂಡಿತ್ತು. ಹೀಗಾಗಿ ಪತಿಯನ್ನು ಸಾಧ್ಯವಾದಷ್ಟು ಕಂಟ್ರೋಲ್ ಮಾಡುವ ಪ್ರಯತ್ನ ಮಾಡಿದ್ದಳು. ಆದರೂ ಪತಿ ಕದ್ದು ಮುಚ್ಚಿ ಬೇಲಿ ಹಾರುತ್ತಾನೆ ಅನ್ನೋದು ಹೆಂಡತಿಗೆ ಮೊದಲೇ ಗೊತ್ತಿತ್ತು. ಹೀಗಾಗಿ ಗಂಡನ ಪಾಸ್‌ಪೋರ್ಟ್ ತೆಗೆದಿಟ್ಟಿದ್ದಳು. ತನಗೆ ಗೊತ್ತಿಲ್ಲದಂತೆ ವಿದೇಶ ಪ್ರಯಾಣ ಮಾಡುವ ಸಾಧ್ಯತೆಯನ್ನು ಮೊದಲೇ ಊಹಿಸಿದ್ದ ಕಾರಣ ಗಂಡನ ಪಾಸ್‌ಪೋರ್ಟ್ ಬಚ್ಚಿಟ್ಟಿದ್ದಳು.
ಪತ್ನಿ ಬಳಿ ಪಾಸ್‌ಪೋರ್ಟ್ ಕೇಳಿದರೆ ಯಾಕೆ, ಏನು, ಎತ್ತ ಎಂಬ ಪ್ರಶ್ನೆಗಳು ಬರಲಿದೆ. ಇಷ್ಟೇ ಅಲ್ಲ ಮಲೇಷಿಯಾದಲ್ಲಿ ಈತ ಚಾಲಕ ವೃತ್ತಿ ಮಾಡುತ್ತಿದ್ದ. ಮೊದಲ ಪತ್ನಿಗ ಗೊತ್ತಾಗದಂತೆ ಇಂಡೋನೇಷಿಯಾದಲ್ಲಿ 5 ತಿಂಗಳ ಗರ್ಭಿಣಿ ಎರಡನೇ ಪತ್ನಿ ಭೇಟಿ ಅನಿವಾರ್ಯವಾಗಿತ್ತು. ಹೀಗಾಗಿ ಸಮುದ್ರ ಮಾರ್ಗದ ಮೂಲಕ ಇಂಡೋನೇಷಿಯಾ ಪ್ರಯಾಣಕ್ಕೆ ಮುಂದಾಗಿದ್ದ.
ಇಂಡೋನೇಷಿಯಾದಲ್ಲಿರುವ ಎರಡನೇ ಪತ್ನಿ ಐದು ತಿಂಗಳ ಗರ್ಭಿಣಿ. ಇಷ್ಟೇ ಅಲ್ಲ, ಆಕೆಯ ಆರೋಗ್ಯ ಹದಗೆಟ್ಟಿತ್ತು. ಪರಿಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಇಂಡೋನೇಷಿಯಾಗೆ ತೆರಳುವುದು ಅನಿವಾರ್ಯವಾಗಿತ್ತು. ಆಸ್ಪತ್ರೆ ದಾಖಲಾಗಿದ್ದ ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಭೇಟಿಯಾಗಲು ಈತ, ಅಕ್ರಮವಾಗಿ, ಯಾವುದೇ ಪಾಸ್‌ಪೋರ್ಟ್ ಇಲ್ಲದೆ ಇಂಡೋನೇಷಿಯಾಗೆ ತೆರಳಿದ್ದ. ಅಕ್ರಮ ವಲಸೆ ಕಾರ್ಮಿಕರನ್ನು ಕರೆದೊಯ್ಯುವ ಬೂಟ್ ಮೂಲಕ ಈತ ಪ್ರಯಾಣ ಮಾಡಿದ್ದು. ಅಕ್ರಮವಾಗಿ ಈ ರೀತಿ ಕೊಂಡೊಯ್ಯುವ ಕೆಲ ವ್ಯಕ್ತಿಗಳ ಸಂಪರ್ಕಿಸಿ ಹಣ ನೀಡಿ ಪ್ರಯಾಣ ಆರಂಭಿಸಿದ್ದು.
ಇಂಡೋನೇಷಿಯಾಗೆ ತೆರಳಿ ಎರಡನೇ ಪತ್ನಿ ಭೇಟಿಯಾದ ಈತ, ಆಸ್ಪತ್ರೆಯಲ್ಲಿ ಎರಡು ದಿನ ಕಳೆದಿದ್ದ. ಬಳಿಕ ಇಂಡೋನೇಷಿಯಾದಿಂದ ಅದೇ ರೀತಿ ಮರಳಿ ಮಲೇಷಿಯಾಗೆ ಮರಳುವಾಗ ಸಮುದ್ರದ ಕಾವಲು ಪಡೆ ಈತ ಅರೆಸ್ಟ್ ಮಾಡಿದೆ. ವಿಚಾರಣೆ ವೇಳೆ ಈತ ತನ್ನ ಅಳಲು ತೋಡಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ