ಮಾಲ್ಡೀವ್ಸ್‌ನಲ್ಲಿ ದಿಢೀರ್ ಕರ್ಫ್ಯೂ: ಯಶ್ ಫ್ಯಾಮಿಲಿ ಮರಳಿ ಬಂದ್ರಾ..?

Published : Jan 28, 2021, 06:26 PM ISTUpdated : Jan 28, 2021, 06:43 PM IST
ಮಾಲ್ಡೀವ್ಸ್‌ನಲ್ಲಿ ದಿಢೀರ್ ಕರ್ಫ್ಯೂ: ಯಶ್ ಫ್ಯಾಮಿಲಿ ಮರಳಿ ಬಂದ್ರಾ..?

ಸಾರಾಂಶ

ಸೆಲೆಬ್ರಿಟಿಗಳ ನೆಚ್ಚಿನ ಟೂರಿಸ್ಟ್ ಸ್ಪಾಟ್ ಆಗಿದ್ದ ಮಾಲ್ಡೀವ್ಸ್‌ನಲ್ಲಿ ಕರ್ಫ್ಯೂ | ಇನ್ನೆಲ್ಲಿ ಹೋಗ್ತಾರೆ ಸೆಲೆಬ್ರಿಟಿಗಳು ? ವೆಕೇಷನ್‌ಗೆ ಹೋದ ಯಶ್ ಫ್ಯಾಮಿಲಿ ಮಾಲ್ಡೀವ್ಸ್‌ನಲ್ಲಿ ಸಿಕ್ಕಾಕೊಂಡ್ರಾ..?

ಕೊರೋನಾ ಬಂದು ಸ್ವಲ್ಪ ಕಡಿಮೆಯಾದ ಮೇಲೆ ಅತ್ಯಧಿಕ ಪ್ರವಾಸಿಗರನ್ನು ಸೆಳೆದ ಸ್ಥಳ ಮಾಲ್ಡೀವ್ಸ್. ಬಾಲಿವುಡ್‌ ಮಂದಿಯಂತೂ ಅದೇ ತವರು ಮನೆ ಎಂಬಂತೆ ಒಬ್ಬರ ಹಿಂದೊಬ್ಬರು ಹೋಗಿ ರಿಲ್ಯಾಕ್ಸ್ ಆಗಿ ಬಂದರು.

ಬಾಲಿವುಡ್‌ ಮಂದಿ ಮಾಲ್ಡೀವ್ಸ್‌ಗೆ ಹೋಗೋದರ ಜೊತೆ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಮಾಲ್ಡೀವ್ಸ್‌ನಲ ಮರಳು, ನೀರಿನಲ್ಲಿ ಮಿಂದೆದ್ದು ಬಂದದ್ದಾಯ್ತು. ರಾಕಿಂಗ್ ಸ್ಟಾರ್ ರಾಧಿಕಾ ಮತ್ತು ಇಬ್ಬರು ಮುದ್ದು ಮಕ್ಕಳ ಜೊತೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡಿದ ಫೋಟೋಸ್ ಶೇರ್ ಮಾಡಿಕೊಂಡಿದ್ದರು.

ಅಭಿಮಾನಿಗಳ ಅದೊಂದು ಬೇಡಿಕೆಗೆ ಮಾಲ್ಡೀವ್ಸ್‌ನಿಂದಲೇ ಸ್ಪಂದಿಸಿದ ಯಶ್ ಕುಟುಂಬ

ಆದ್ರೆ ಇದೀಗ ದಿಢೀರ್ ಆಗಿ ಮಾಲ್ಡೀವ್ಸ್‌ನಲ್ಲಿ ಕೊರೋನಾ ಕಾರಣಗಳಿಂದ ಮತ್ತೆ ಲಾಕ್‌ಡೌನ್ ಹೇರಳು ತೀರ್ಮಾನ ಮಾಡಲಾಗಿದೆ. ಕೊರೋನಾ ಕೇಸ್‌ಗಳು ಹೆಚ್ಚಾದ ಕಾರಣ ಕರ್ಫ್ಯೂ ಹೇರುತ್ತಿರುವುದಾಗಿ ಮಾಲ್ಡೀವ್ಸ್ ಆರೋಗ್ಯ ರಕ್ಷಣಾ ಏಜೆನ್ಸಿ ತಿಳಿಸಿದೆ.

ಮಧ್ಯರಾತ್ರಿ ಮತ್ತು ಬೆಳಗ್ಗೆ 4 ಗಂಟೆಯ ಒಳಗೆ ಕರ್ಫ್ಯೂ ಇರಲಿದೆ. ವಿದೇಶದಿಂದ ಬಂದವರಿಗೂ, ಬೇರೆ ಐಲ್ಯಾಂಡ್‌ನಿಂದ ಬಂದವರಿಗೂ 10 ದಿನದ ಕ್ವಾರೆಂಟೈನ್ ವಿಧಿಸಲೂ ತೀರ್ಮಾನಿಸಲಾಗಿದೆ. ಮಾಲ್ಡೀವ್ಸ್‌ನಲ್ಲಿ ಸದ್ಯ ದಿನಕ್ಕೆ 100 ಕೇಸುಗಳು ದೃಢಪಡುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 15247 ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!