ಚೀನಾದಲ್ಲಿ ಹೆಚ್ಚಾಗ್ಗುತ್ತಿದೆ ಕೊರೋನಾ: ಗಂಟಲು ದ್ರವದ ಬದಲು ಗುದದ್ವಾರ ಮಾದರಿ ಸಂಗ್ರಹ!

By Kannadaprabha NewsFirst Published Jan 28, 2021, 5:55 PM IST
Highlights

ಚೀನಾದಲ್ಲಿ ಹೆಚ್ಚಾಗ್ಗುತ್ತಿದೆ ಕೊರೋನಾ ಸೋಂಕು| ಗಂಟಲು ದ್ರವದ ಬದಲು ಗುದದ್ವಾರ ಮಾದರಿ ಸಂಗ್ರಹ| ಸಂಪರ್ಕಿತರ ನಿಖರ ಫಲಿತಾಂಶ ಪತ್ತೆಗೆ ಇದು ಸಹಕಾರಿ| ಚೀನಾ ಸ್ಥಳೀಯ ಮಾಧ್ಯಮಗಳು ಮಾಡಿವೆ ಈ ವರದಿ

ಬೀಜಿಂಗ್(ಜ.28): ತಾನೇ ಹುಟ್ಟು ಹಾಕಿದ ಕೊರೋನಾ ವೈರಸ್‌ ಅನ್ನು ಓಡಿಸುವಲ್ಲಿ ಚೀನಾ ಬಹಳ ಬೇಗ ಯಶಸ್ವಿಯಾಗಿದ್ದು ಸುಳ್ಳಲ್ಲ. ಆದರೆ, ಇದೀಗ ಮತ್ತೆ ಅನೇಕ ಹೊಸ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಚೀನಾದಲ್ಲಿ ಆತಂಕ ಸೃಷ್ಟಿಯಾಗಿದೆ. 

ಸೋಂಕನ್ನು ಪತ್ತೆ ಹಚ್ಚಲು ಇದುವರೆಗೆ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ,  ಇದೀಗ ಗುದದ್ವಾರದಿಂದ ಸ್ವ್ಯಾಬ್ ತೆಗೆದುಕೊಳ್ಳಲಾಗುತ್ತಿದೆ. ಇದು ಸೋಂಕಿನ ಬಗ್ಗೆ ನಿಖರ ಫಲಿತಾಂಶ ನೀಡುತ್ತದೆ ಎನ್ನಲಾಗಿದೆ.

2ನೇ ಡೋಸ್ ಕೊರೋನಾ ಲಸಿಕೆ ಪಡೆದವ ಸಾವು: ಕೋಮಾಗೆ ಜಾರಿ ಬಹು ಅಂಗಾಂಗ ವೈಫಲ್ಯ!

ಬೀಜಿಂಗ್‌ನಲ್ಲಿ ಹಲವು ಸೋಂಕು ಕಾಣಿಸಿಕೊಂಡಿದ್ದು, ಸಂಪರ್ಕಿತರ ಏನಲ್ ಸ್ವ್ಯಾಬ್ ತೆಗೆದುಕೊಳ್ಳುತ್ತಿರುವುದಾಗಿ ಚೀನಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸಾಮೂಹಿಕ ಪರೀಕ್ಷೆಗಳನ್ನೂ ನಡೆಸಲಾಗುತ್ತಿದೆ. ಇದಕ್ಕೆ ಇದುವರೆಗೂ ಸಾಮಾನ್ಯವಾಗಿ ಗಂಟಲು ಅಥವಾ ಮೂಗಿನ ದ್ರವವನ್ನು ಮಾತ್ರ ಪರೀಕ್ಷೆಗೆ ಪಡೆಯಲಾಗುತ್ತಿತ್ತು.  

click me!