
ಕೌಲಾಲಂಪುರ[ಫೆ.24] ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮದ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.
ಮಹತಿರ್ ಮೊಹಮದ್ ಅವರು ಮಲೇಷ್ಯಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ರಾಜೀನಾಮೆ ಪತ್ರವನ್ನು ಮಲೇಷಿಯಾದ ರಾಜರಿಗೆ ಸಲ್ಲಿಸಲಾಗಿದೆ’ ಎಂದು ಪ್ರಧಾನಮಂತ್ರಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರತಿಪಕ್ಷಗಳು ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಭಾನುವಾರ ಸಭೆಗಳನ್ನು ನಡೆಸುವ ಮೂಲಕ ರಾಜಕೀಯ ಮರುಮೈತ್ರಿ ಯೋಚನೆ ಹಾಕಿಕೊಂಡಿದ್ದು ಹೊಸ ರಾಜಕಾರಣದ ಬೆಳವಣಿಗೆ ಸೂಚನೆ ಸಿಕ್ಕ ಕಾರಣ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀಮಾಮೆ ಕೊಡುವ ಪರಿಸ್ಥಿತಿ ಬಂತಾ?
2018ರ ಸಾರ್ವತ್ರಿಕ ಚುನಾವಣೆ ನಂತರ ರಾಜಕೀಯ ಬಿಕ್ಕಟ್ಟು ಎದುರಾಗಿತ್ತು. ಪಕಾಟನ್ ಹರಪನ್ ಎಂದು ಕರೆಯಲ್ಪಡುವ ‘ಅಲೈಯನ್ಸ್ ಆಫ್ ಹೋಪ್’ ಒಕ್ಕೂಟ ಅಧಿಕಾರಕ್ಕೆ ಏರಿ ಮಹತಿರ್ ಮಲೇಷ್ಯಾ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದರು. ಮಹತಿರ್ ಅವರು ಪಕಾಟನ್ ಹರಪನ್ ಒಕ್ಕೂಟದ ನಾಲ್ಕು ಮೈತ್ರಿ ಪಕ್ಷಗಳಲ್ಲಿ ಒಂದಾದ ಪ್ರಿಬುಮಿ ಬರ್ಸಾಟು ಮಲೇಷ್ಯಾ (ಪಿಪಿಬಿಎಂ)ನ ಅಧ್ಯಕ್ಷರೂ ಆಗಿದ್ದಾರೆ.
ಮಹತಿರ್ ಅವರ ರಾಜೀನಾಮೆ ಹೇಳಿಕೆಗೂ ಮುನ್ನ ಪಿಪಿಬಿಎಂ ಅಧ್ಯಕ್ಷ ಮುಹಿದ್ದೀನ್ ಯಾಸಿನ್ ಹೇಳಿಕೆ ನೀಡಿ, ಫೆ. 23 ರಂದು ನಡೆದ ಸಭೆಯ ನಂತರ ಪಕಟಾನ್ ಹರಪನ್ ಒಕ್ಕೂಟವನ್ನು ತ್ಯಜಿಸಲು ಪಕ್ಷದ ಸರ್ವೋಚ್ಛ ಮಂಡಳಿ ನಿರ್ಧರಿಸಿದೆ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ