ಮೇಕ್‌ ಇನ್‌ ಅಮೆರಿಕ ಪಾಲಿಸಿ, ಇಲ್ಲವೇ ಸುಂಕ ಎದುರಿಸಿ: ಡೊನಾಲ್ಡ್ ಟ್ರಂಪ್‌

Published : Jan 24, 2025, 07:41 AM IST
ಮೇಕ್‌ ಇನ್‌ ಅಮೆರಿಕ ಪಾಲಿಸಿ, ಇಲ್ಲವೇ ಸುಂಕ ಎದುರಿಸಿ: ಡೊನಾಲ್ಡ್ ಟ್ರಂಪ್‌

ಸಾರಾಂಶ

‘ಅಮೆರಿಕದಲ್ಲಿ ನಿಮ್ಮ ಉತ್ಪನ್ನಗಳನ್ನು ತಯಾರಿಸಿ. ಇಲ್ಲದಿದ್ದರೆ ಹೆಚ್ಚುವರಿ ಸುಂಕವನ್ನು ಪಾವತಿಸಿ’ ಎಂದು ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗುಡುಗಿದ್ದಾರೆ.   

ದಾವೋಸ್ (ಜ.24): ‘ಅಮೆರಿಕದಲ್ಲಿ ನಿಮ್ಮ ಉತ್ಪನ್ನಗಳನ್ನು ತಯಾರಿಸಿ. ಇಲ್ಲದಿದ್ದರೆ ಹೆಚ್ಚುವರಿ ಸುಂಕವನ್ನು ಪಾವತಿಸಿ’ ಎಂದು ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗುಡುಗಿದ್ದಾರೆ. ಈ ಮೂಲಕ ಭಾರತ ಸೇರಿ ಬ್ರಿಕ್ಸ್‌ ದೇಶದ ವಸ್ತುಗಳಿಗೆ ಅಮೆರಿಕವು ಶೇ.100ರಷ್ಟು ಸುಂಕ ವಿಧಿಸಲಿದೆ ಎಂಬ ತಮ್ಮ ಇತ್ತೀಚಿನ ಹೇಳಿಕೆಗೆ ಹೊಸ ಸೇರ್ಪಡೆ ಮಾಡಿದ್ದಾರೆ. ಗುರುವಾರ ರಾತ್ರಿ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಗೆ ವಿಡಿಯೋ ಸಂದೇಶ ಕಳಿಸಿರುವ ಟ್ರಂಪ್‌, ‘ಅಮೆರಿಕದಲ್ಲಿ ನಿಮ್ಮ ಉತ್ಪನ್ನವನ್ನು ಉತ್ಪಾದಿಸಿದರೆ ಮತ್ತು ಭೂಮಿಯ ಮೇಲಿನ ಯಾವುದೇ ರಾಷ್ಟ್ರಕ್ಕಿಂತ ಅತ್ಯಂತ ಕಡಿಮೆ ತೆರಿಗೆಯನ್ನು ನಾವು ವಿಧಿಸುತ್ತೇವೆ’ ಎಂದರು.

‘ಹಾಗಂತ ನಾವು ಅಮೆರಿಕದಲ್ಲೇ ಉತ್ಪನ್ನ ಸಿದ್ಧಪಡಿಸಿ ಎಂದು ಬಲವಂತ ಮಾಡುವುದಿಲ್ಲ. ಅದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಒಂದು ವೇಳೆ ಉತ್ಪಾದಿಸದೇ ಇದ್ದರೆ ನಂತರ ನೀವು ಸುಂಕವನ್ನು ಪಾವತಿಸಬೇಕಾಗುತ್ತದೆ ಅಷ್ಟೇ’ ಎಂದು ಜಾಗತಿಕ ನಾಯಕರಿಗೆ ಎಚ್ಚರಿಕೆ ನೀಡಿದರು. ತನ್ನ ವ್ಯಾಪಕ ಭಾಷಣದಲ್ಲಿ, ಟ್ರಂಪ್ ಉಕ್ರೇನ್ ಯುದ್ಧ ಮತ್ತು ತೈಲ ಬೆಲೆಗಳ ನಡುವೆ ಸಂಪರ್ಕ ಇದೆ ಎಂದು ಪ್ರತಿಪಾದಿಸಿದರು. ‘ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಸ್ಥೆಗೆ ಕಚ್ಚಾ ಬೆಲೆಯನ್ನು ಇಳಿಸುವಂತೆ ಕೇಳಿಕೊಳ್ಳುತ್ತೇನೆ. ಒಂದು ವೇಳೆ ಬೆಲೆ ಇಳಿಕೆಯಾದರೆ ರಷ್ಯಾ-ಉಕ್ರೇನ್ ಯುದ್ಧ ತಕ್ಷಣವೇ ಅಂತ್ಯಗೊಳ್ಳಲಿದೆ’ ಎಂದರು.

ಟ್ರಂಪ್‌ ಜತೆ ಒಟ್ಟಾಗಿ ಕೆಲಸ: ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಭಿನಂದನಾ ಸಂದೇಶ ಕಳಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಆತ್ಮೀಯ ಗೆಳೆಯ ಟ್ರಂಪ್‌ ಜತೆ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿರುವೆ’ ಎಂದಿದ್ದಾರೆ.  ಟ್ವೀಟ್‌ ಮಾಡಿರುವ ಮೋದಿ, ‘ನನ್ನ ಆತ್ಮೀಯ ಗೆಳೆಯ, ಅಧ್ಯಕ್ಷ ಟ್ರಂಪ್‌ ಅವರಿಗೆ ಅಭಿನಂದನೆಗಳು. ಅಮೆರಿಕದ 47ನೇ ಅಧ್ಯಕ್ಷರಾಗಿ ನಿಮ್ಮ ಐತಿಹಾಸಿಕ ಪ್ರಮಾಣ ಸ್ವೀಕಾರ ಸಮಾರಂಭ ನಡೆದಿದೆ. ಈ ವೇಳೆ ನಮ್ಮ ಎರಡೂ ದೇಶಗಳಿಗೆ ಅನುಕೂಲವಾಗಲು ಮತ್ತು ಜಗತ್ತಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. 

ಜನ್ಮಸಿದ್ಧ ಪೌರತ್ವ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡೆಗೆ ಭಾರತೀಯರ ವಿರೋಧ

ಮುಂದೆ ಯಶಸ್ವಿ ಅವಧಿಗೆ ಶುಭಾಶಯಗಳು’ ಎಂದಿದ್ದಾರೆ. ಈ ನಡುವೆ, ಟ್ರಂಪ್‌ ಸಮಾರಂಭದಲ್ಲಿ ಭಾರತದ ಪ್ರತಿನಿಧಿಯಾಗಿದ್ದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ಬಳಿ ಪ್ರತ್ಯೇಕ ಸಂದೇಶ ಪತ್ರವನ್ನೂ ಮೋದಿ ರವಾನಿಸಿದ್ದಾರೆ. ‘ನನ್ನ ಆತ್ಮೀಯ ಗೆಳೆಯ, ಅಧ್ಯಕ್ಷ ಟ್ರಂಪ್‌ ಅವರಿಗೆ ಅಭಿನಂದನೆಗಳು. ಅಮೆರಿಕದ 47ನೇ ಅಧ್ಯಕ್ಷರಾಗಿ ನಿಮ್ಮ ಐತಿಹಾಸಿಕ ಪ್ರಮಾಣ ಸ್ವೀಕಾರ ಸಮಾರಂಭ ನಡೆದಿದೆ. ಈ ವೇಳೆ ನಮ್ಮ ಎರಡೂ ದೇಶಗಳಿಗೆ ಅನುಕೂಲವಾಗಲು ಮತ್ತು ಜಗತ್ತಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಮುಂದೆ ಯಶಸ್ವಿ ಅವಧಿಗೆ ಶುಭಾಶಯಗಳು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!