
ನವದೆಹಲಿ(ಆ.03): ಈ ಬಾರಿಯ ರಕ್ಷಾ ಬಂಧನದಂದು ಭಾರತ ಚೀನಾದಿಂದ ಆಮದಾಗುತ್ತಿದ್ದ ರಾಖಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದರಿಂದಾಗಿ ಚೀನಾಕ್ಕೆ ಬರೊಬ್ಬರಿ 4000 ಕೋಟಿ ರು. ನಷ್ಟಸಂಭವಿಸಿದೆ.
'ಈ ಸಲ ನನಗೆ ಸ್ಪೆಷಲ್ ರಕ್ಷಾ ಬಂಧನ' ಅಣ್ಣನ ಗುಟ್ಟು ಹೇಳಿದ ಯಶ್ ತಂಗಿ!
ಜೂ.10ರಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಟಿಐ) ಈ ಬಾರಿ ಚೀನಾದ ರಾಖಿಗಳನ್ನು ನಿಷೇಧಿಸಿ ಹಿಂದುಸ್ತಾನಿ ರಾಖಿಯೊಂದಿಗೆ ರಕ್ಷಾ ಬಂಧನ ಆಚರಿಸುವಂತೆ ಕರೆ ನೀಡಿತ್ತು. ಸಿಎಟಿಐ ಸಹಕಾರದೊಂದಿಗೆ ಸ್ವದೇಶಿ ಉತ್ಪನ್ನಗಳನ್ನು ಬಳಸಿಕೊಂಡು ದೇಶದೆಲ್ಲಡೆ 1 ಕೋಟಿಗೂ ಹೆಚ್ಚಿನ ರಾಖಿಗಳನ್ನು ಭಾರತದಲ್ಲಿ ತಯಾರಿಸಲಾಗಿದೆ.
ವಾಣಿಜ್ಯಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ರಾಖಿಗಳನ್ನು ತಯಾರಿಸಲು ನೆರವಾಗಿದ್ದಾರೆ.
ದೇಶದ ಸೈನಿಕರಿಗೆ ರಾಖಿ ಕಳಿಸಿ, ಸಂದೇಶ ನೀಡಲು ಅವಕಾಶ ಇದೆ!
ಭಾರತದಲ್ಲಿ ಪ್ರತಿ ವರ್ಷ ಸುಮಾರು 50 ಕೋಟಿ ರಾಖಿಗಳು ಮಾರಾಟವಾಗುತ್ತವೆ. 6000 ಕೋಟಿ ರು. ವಹಿವಾಟು ನಡೆಯುತ್ತದೆ. ಇದರಲ್ಲಿ 4000 ಕೋಟಿ ರು. ನಷ್ಟುರಾಖಿ ಚೀನಾದಿಂದ ಆಮದಾಗುತ್ತಿದ್ದವು ಎಂದು ಸಿಎಟಿಐನ ರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ