ಸ್ತನ ಕ್ಯಾನ್ಸರ್ ಹೆಸರಲ್ಲಿ ಲೈಂಗಿಕ ಶೋಷಣೆ ನಡೆಸುತ್ತಿದ್ದ ವೈದ್ಯ!| ಭಯ ಹುಟ್ಟಿಸಿ ಮಹಿಳೆಯರನ್ನು ಶೋಷಿಸುತ್ತಿದ್ದ ಭಾರತೀಯ ಮೂಲದ ವೈದ್ಯ| 25 ಮಹಿಳೆಯರ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ಆರೋಪಿ ಶಾ
ಲಂಡನ್[ಡಿ.11]: ಲಂಡನ್ ನಲ್ಲಿ ವೃತ್ತಿ ಮಾಡಿಕೊಂಡಿದ್ದ ಭಾರತೀಯ ಮೂಲದ ವೈದ್ಯನೊಬ್ಬನ ವಿರುದ್ಧ ಕ್ಯಾನ್ಸರ್ ಹೆಸರಲ್ಲಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಆರೋಪ ಕೇಳಿ ಬಂದಿದೆ. ಪ್ರಕರಣದ ವಿಚಾರಣೆ ನಡೆಸಿದ ಲಂಡನ್ ನ್ಯಾಯಾಲಯ ವೈದ್ಯನನ್ನು ಅಪರಾಧಿ ಎಂದು ತೀರ್ಪು ನೀಡಿದೆ. ಅಪರಾಧಿಯನ್ನು ಮನೀಷ್ ಶಾ ಎಂದು ಗುರುತಿಸಲಾಗಿದ್ದು, ಈತ ಲಂಡನ್ ನಲ್ಲಿ ಜನರಲ್ ಫಿಸಿಶನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನನ್ನು 25 ಪ್ರಕರಣಗಳಲ್ಲಿ ದೋಷಿ ಎಂದು ಪರಿಗಣಿಸಲಾಗಿದೆ.
ಶವದ ಜೊತೆ ಸೆಕ್ಸ್‌ಗಿಳಿಯುವಷ್ಟು ಸ್ಯಾಡಿಸ್ಟ್ ಆಗೋದಾದ್ರೂ ಯಾಕೆ?
undefined
ಲಂಡನ್ ನ ಓಲ್ಡ್ ಬೆಲ್ ಕೋರ್ಟ್ ನಲ್ಲಿ ವಿಚಾರಣೆಯಲ್ಲಿ ಮನೀಷ್ ಶಾ ತನ್ನ ಬಳಿ ತನ್ನ ಬಳಿ ಚಿಕಿತ್ಸೆಗೆಂದು ಬರುತ್ತಿದ್ದ ಯುವತಿಯರಿಗೆ ಸುದ್ದಿಗಳನ್ನು ತೋರಿಸಿ ಕ್ಯಾನ್ಸರ್ ಭಯ ಹುಟ್ಟಿಸುತ್ತಿದ್ದ. ಓರ್ವ ಮಹಿಳೆಯನ್ನು ಹೆಸರಿಸಲು ಆತ ಹಾಲಿವುಡ್ ಸ್ಟಾರ್ ಅಂಜಲಿನಾ ಜೋಲಿಗೆ ಸಂಬಂಧಿಸಿದ ಸುದ್ದಿಯನ್ನೂ ಬಳಸಿಕೊಂಡಿದ್ದಾರೆ. ಅಂಜಲೆನಾ ಜೋಲಿಯವರಿಗೆ ಸ್ತನ ಕ್ಯಾನ್ಸರ್ ಇತ್ತು. ನಿಮಗೂ ಇಂತಹ ಕ್ಯಾನ್ಸರ್ ಬಂದಿರಬಹುದು ಹೀಗಾಗಿ ನೀವು ಸ್ತನ ಪರೀಕ್ಷೆ ಮಾಡುವುದು ಒಳ್ಳೆಯದು ಎಂದು ಸೂಚಿಸಿದ್ದಾರೆ ಎಂಬ ವಿಚಾರ ಬಯಲಾಗಿದೆ.
ಕೋರ್ಟ್ ಬನಲ್ಲಿ ವಾದ ಮಂಡಿಸಿದ ದೂರುದಾರ ಕಕ್ಷಿದಾರನ ವಕೀಲರು 'ಡಾಕ್ಟರ್ ಮನೀಷ್ ಮಹಿಳೆಯರ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದ್ದ. ಕ್ಯಾನ್ಸರ್ ಭಯ ಹುಟ್ಟಿಸಿ ಅವರ ಯೋನಿ ಹಾಗೂ ಸ್ತನ ಪರೀಕ್ಷೆ ಮಾಡಲು ಸೂಚಿಸುತ್ತಿದ್ದ. ಹೀಗೆ ಲೈಂಗಿಕ ಶೋಷಣೆ ನಡೆಸುತ್ತಿದ್ದ. ಭಯ ಮನುಷ್ಯನನ್ನು ಏನು ಬೇಕಾದರೂ ಮಾಡಿಸುತ್ತದೆ. ಮನೀಷ್ ಇದನ್ನು ತನ್ನ ಕೆಟ್ಟ ಉದ್ದೇಶಕ್ಕೆ ಬಳಸಿಕೊಂಡಿದ್ದಾನೆ' ಎಂದಿದ್ದಾರೆ.
ಕಠಿಣ ಕಾನೂನಿದ್ದರೂ ನಿಲ್ಲದ ಸ್ತ್ರೀ ದೌರ್ಜನ್ಯ; ಭಾರತ ಎಡವುತ್ತಿರುವುದು ಎಲ್ಲಿ?
2009ರ ಮೇ ತಿಂಗಳಿನಿಂದ 2013ರವರೆಗೆ 50 ವರ್ಷದ ಡಾಕ್ಟರ್ ಮನೀಷ್ ಪೂರ್ವ ಲಂಡನ್ ನ ಮಾವ್ನೀ ಮೆಡಿಕಲ್ ಸೆಂಟರ್ ನ 6 ಮಂದಿ ರೋಗಿಗಳ ಮೇಲೆ ಇಂತಹ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. 25 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಮನೀಷ್ಗೆ ಫೆಬ್ರವರಿ 7 ರಂದು ಶಿಕ್ಷೆ ಪ್ರಕಟಿಸಲಾಗುತ್ತದೆ.