
ಅಪ್ಪ ಹಾಗೂ ಮಗಳ ಅನುಬಂಧ ಅದ್ಭುತವಾದುದು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೆಂದರೆ ಅಪ್ಪನಿಗೆ ತುಸು ಹೆಚ್ಚು ಪ್ರೀತಿ ಹೆಣ್ಣು ಮಕ್ಕಳಿಗೂ ಅಷ್ಟೇ ಅಮ್ಮನಿಗಿಂತ ಅಪ್ಪನ ಮೇಲೆಯೇ ಪ್ರೀತಿ ಹೆಚ್ಚು ಮಗಳಿಗೆ ತುಸು ಹೆಚ್ಚು ಕಡಿಮೆ ಆಯ್ತು ಎಂದರೆ ಅಪ್ಪ ಸಹಿಸುವುದಿಲ್ಲ, ಹಾಗೆಯೇ ಮಗಳು ಕೂಡ ತಾನೆಷ್ಟೇ ಕಿತ್ತಾಟವಾಡಿದರೂ ತನ್ನ ಅಪ್ಪನಿಗೆ ಬೇರೆ ಯಾರು ಬೈಯುವುಂತಿಲ್ಲ, ನಿಂದಿಸುವಂತಿಲ್ಲ, ತನ್ನ ಮುಂದೆ ಅಪ್ಪನನ್ನು ತುಸು ನಿಂದಿಸಿದರು ಆಕೆ ಸುಮ್ಮನಿರುವುದಿಲ್ಲ, ಹಾಗೆಯೇ ಇಲ್ಲೊಬ್ಬಳು ಯುವತಿ ತನ್ನ ಮುಂದೆ ಬೀದಿಯಲ್ಲಿ ವ್ಯಕ್ತಿಗಳಿಬ್ಬರು ಅಪ್ಪನನ್ನು ನಿಂದಿಸುತ್ತಿರುವುದನ್ನು ನೋಡುವುದಕ್ಕೆ ಸಾಧ್ಯವಾಗದೇ ಕೂಡಲೇ ಕಾರಿನಲ್ಲಿದ್ದ ಗನ್ ಹೊರ ತೆಗೆದಿದ್ದಾಳೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
libertywirein ಎಂಬ ಇನ್ಸ್ಟಾಗ್ರಾಮ್‌ನಿಂದ ಈ ವೀಡಿಯೋ ವೈರಲ್ ಆಗಿದೆ. ಬೀದಿಯಲ್ಲಿ ಅಪ್ಪನ ಜೊತೆ ಇಬ್ಬರು ಜಗಳವಾಡುತ್ತಿರುವುದನ್ನು ನೋಡಿದ ಮಗಳು ಕೂಡಲೇ ಕಾರಿನಲ್ಲಿದ್ದ ಗನ್ ತೆಗೆದುಕೊಂಡು ಹೊರಗೆ ಬಂದು ತನ್ನ ತಂದೆಯ ಜೊತೆ ಜಗಳ ಮಾಡುತ್ತಿರುವವರಿಗೆ ಗುರಿಯಾಗಿ ಇರಿಸಿದ್ದಾಳೆ. ಗನ್ ನೋಡಿದ ಆ ಯುವಕರು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿದ್ದು, ಈ ವೇಳೆ ಸಿಟ್ಟಿಗೆದ್ದ ಮಗಳನ್ನು ನಿಯಂತ್ರಿಸಲು ಅಪ್ಪ ಪೇಚಾಡುವುದನ್ನು ಕಾಣಬಹುದಾಗಿದೆ. ಭಾರತದಲ್ಲಿ ಗನ್ ಹಿಡಿದುಕೊಂಡು ತಿರುಗಾಡುವಂತಿಲ್ಲ, ಆದರೆ ಪಾಕಿಸ್ತಾನದಲ್ಲಿ ಗನ್ ಸಾಮಾನ್ಯವಾಗಿದ್ದು, ಈ ಯುವತಿಯ ಧೈರ್ಯವನ್ನು ಮೆಚ್ಚಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಆತ್ಮರಕ್ಷಣೆಗಾಗಿ ಮಾಡಲಾಗಿದೆ. ಅವಳು ಧೈರ್ಯವಂತೆ ಅವಳು ತನ್ನ ತಂದೆಯನ್ನು ರಕ್ಷಣೆ ಮಾಡಿದ್ದಾಳೆ. ಅವಳ ನಿರ್ಧಾರ ಸರಿಯಾಗಿದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರತಿಯೊಬ್ಬ ಒಳ್ಳೆಯ ವ್ಯಕ್ತಿಗೆ ಈ ರೀತಿಯ ಮಗಳು ಸಿಗಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ಅಪ್ಪನ ಮಗಳು ಗಟ್ಟಿಗಿತ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆಕೆ ಕಾರಿನ ಬಳಿಗೆ ಹೋಗಿ ಗನ್ ಹೊರತೆಗೆದ ರೀತಿ ಅದ್ಭುತವಾಗಿತ್ತು. ಪ್ರತಿಯೊಬ್ಬ ಪುರುಷನೂ ಇಂತಹದ್ದೇ ಮಗಳನ್ನು ಬಯಸುತ್ತಾನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜನರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ