ಒತ್ತಾಯಕ್ಕೆ ಟೆಕ್ವಾಂಡೋ ಕ್ಲಾಸ್ ಸೇರಿದ ಬಾಲಕನ ಮೊಂಡಾಟ : ವೈರಲ್ ವಿಡಿಯೋ

Published : Jul 18, 2022, 01:47 PM ISTUpdated : Jul 18, 2022, 02:15 PM IST
ಒತ್ತಾಯಕ್ಕೆ ಟೆಕ್ವಾಂಡೋ ಕ್ಲಾಸ್ ಸೇರಿದ ಬಾಲಕನ ಮೊಂಡಾಟ : ವೈರಲ್ ವಿಡಿಯೋ

ಸಾರಾಂಶ

ಬಾಕ್ಸಿಂಗ್ ಅಥವಾ ಟೆಕ್ವಾಂಡೋ ತರಗತಿಯಲ್ಲಿ ಬಾಲಕನೋರ್ವ ಮೊಂಡಾಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬಾಕ್ಸಿಂಗ್ ಅಥವಾ ಟೆಕ್ವಾಂಡೋ ತರಗತಿಯಲ್ಲಿ ಬಾಲಕನೋರ್ವ ಮೊಂಡಾಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಚಿಂಗ್ ಬ್ಯಾಗ್‌ಗೆ ಬಾಲಕ ತನ್ನ ಶಕ್ತಿಯನ್ನೆಲ್ಲಾ ಬಳಸಿ ಕೈಯನ್ನು ಮುಷ್ಠಿಗಟ್ಟಿ ಹೊಡೆಯಬೇಕಾಗಿದೆ. ಆದರೆ ಬಾಲಕ ಕೈಗೆ ಬಾಕ್ಸಿಂಗ್ ಪೌಚ್ ಹಾಕಿದ್ದು, ಪಂಚಿಂಗ್‌ ಬ್ಯಾಗ್ ಮುಂದೆ ನಿಂತು ಸುಮ್ಮನೆ ಅದನ್ನು ಮುಟ್ಟಿದಂತೆ ಮಾಡುತ್ತಿದ್ದಾನೆ. ನನಗೆ ಈ ಆಟ ಇಷ್ಟವಿಲ್ಲ ಎಂಬುದನ್ನು ಆತನ ವರ್ತನೆಯೇ ತೋರಿಸುತ್ತಿದೆ. ಅಳುಮುಖ ಮಾಡಿರುವ ಬಾಲಕನ ಸಮೀಪ ಇರುವ ಬಾಲಕ ಪಂಚಿಂಗ್ ಬ್ಯಾಗ್‌ಗೆ ಸರಿಯಾಗಿ ಮುಷ್ಠಿ ಮಾಡಿ ಪಂಚ್ ಮಾಡುತ್ತಿದ್ದರೆ ಈತ ಮಾತ್ರ ಸುಮ್ಮನೆ ಬೇಕೋಬೇಡವೋ ಎಂಬಂತೆ ಮೆಲ್ಲನೆ ಕೈಯಲ್ಲಿ ಕುಟ್ಟುತ್ತಿದ್ದಾನೆ. ಇದನ್ನು ಈತನ ಹಿಂದೆ ನಿಂತಿರುವ ಕೋಚ್ ಗಮನಿಸುತ್ತಿದ್ದಾರೆ. ಅದಾಗ್ಯೂ ಈತ ಮುಖ ಊದಿಸಿಕೊಂಡು ಮಾಡಲಾಗದು ಎಂಬಂತೆ ವರ್ತಿಸುತ್ತಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಬಹುತೇಕ ಪೋಷಕರಿಗೆ ತಮಗಿಂತ ತಮ್ಮ ಮಕ್ಕಳು ಏನೋ ಭಾರಿ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ. ಈ ಕಾರಣಕ್ಕೆ ಪೋಷಕರು ತಮ್ಮಗಿಲ್ಲದ ಸವಲತ್ತುಗಳನ್ನು ಮಕ್ಕಳಿಗೆ ನೀಡಿ ಸಾಧನೆಗೆ ಪ್ರೇರೆಪಿಸುತ್ತಾರೆ. ಯಾವೊಂದು ಸಣ್ಣ ಕೊರತೆ ನಮ್ಮ ಮಕ್ಕಳ ಸಾಧನೆಯ ಹಾದಿಗೆ ಅಡ್ಡಿಯಾಗಬಾರದು ಎಂದು ಪೋಷಕರು ಇನ್ನಿಲ್ಲದ ಶ್ರಮ ವಹಿಸುತ್ತಾರೆ. ಆದರೆ ಮಕ್ಕಳಿಗೂ ಅದೇ ಆಸಕ್ತಿ ಇರಬೇಕಲ್ಲ. ಮಕ್ಕಳ ಗುರಿಗಳು ಆಸೆಗಳು ಬೇರೆಯದೇ ಇರುತ್ತವೆ. ಆದರೆ ಪೋಷಕರ ಆಸೆ ತಾನು ಅಂದುಕೊಂಡ ಹಾದಿಯಲ್ಲಿ ತನ್ನ ಪುತ್ರ ಅಥವಾ ಪುತ್ರಿ ಸಾಗಬೇಕು ಎಂದಿರುತ್ತದೆ. ಹೀಗಾಗಿ ತನಗೆ ಆ ಇಷ್ಟವಿಲ್ಲದ ಹಾದಿಯಲ್ಲಿ ಮಕ್ಕಳು ಕೆಲವೊಮ್ಮೆ ಅನಿವಾರ್ಯವಾಗಿ ಸಾಗುತ್ತಾರೆ. ಜೊತೆಗೆ ಮನಸ್ಸಿಲ್ಲದ ಮನಸ್ಸಿನಿಂದ ಯಶಸ್ಸಿನತ್ತ ಏಕಾಗ್ರತೆ ಸಾಧಿಸಲಾಗದೆ ಕಷ್ಟಪಡುತ್ತಾರೆ. ಪೋಷಕರ ಒತ್ತಾಯಕ್ಕೆ ಇಷ್ಟವಿಲ್ಲದ ಹಾದಿಯಲ್ಲಿ ಹೋಗಿ ಯಶಸ್ವಿಯಾದ ಮಕ್ಕಳೂ ಇದ್ದಾರೆ. ಆದರೆ ದಾರಿತಪ್ಪಿದ ಮಕ್ಕಳು ಬಹಳಷ್ಟಿದ್ದಾರೆ. 

ಅಂತಹ ಒತ್ತಾಯಕ್ಕೆ ಒಳಗಾದ ಮಗುವಿನ ವಿಡಿಯೋವೊಂದು ಇದು ಎಂದರೆ ತಪ್ಪಾಗಲಾರದೇನೋ. ಒಟ್ಟಿನಲ್ಲಿ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಅನೇಕರು ಇದಕ್ಕೆ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನಿಮಗೆ ಬಾಕ್ಸರ್ ಆಗುವುದು ಇಷ್ಟವಿಲ್ಲ. ಆದರೆ ಪೋಷಕರ ಒತ್ತಾಯಕ್ಕೆ ನೀವು ಅದನ್ನು ಮಾಡದೇ ವಿಧಿಯಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಕಿಕ್ ಬಾಕ್ಸಿಂಗ್  ಕರಾಟೆ ಮತ್ತು ಬಾಕ್ಸಿಂಗ್‌ನಲ್ಲಿ ಬಳಸುವ ತಂತ್ರಗಳನ್ನು ಸಂಯೋಜಿಸುವ ಹೈಬ್ರಿಡ್ ಮಾರ್ಷಲ್ ಆರ್ಟ್ . ಮೂಲಭೂತವಾಗಿ, ಇದು ಶಕ್ತಿಯಿಂದ ತುಂಬಿದ ಹೊಡೆತಗಳನ್ನು ಒಳಗೊಂಡಿದೆ. ಆದಾಗ್ಯೂ ಇದು ಯಾವುದೂ ಇಲ್ಲದೇ ಬಾಲಕನ ವಿಡಿಯೋ ವೈರಲ್ ಆಗಿದೆ. 

ಮೆರೆ ಮೆಹಾಬೂಬ್ ಕಯಾಮತ್ ಹೋಗಯ್: ಪುಟ್ಟ ಬಾಲಕನ ಕಂಠಸಿರಿಗೆ ನೆಟ್ಟಿಗರು ಫಿದಾ

ಪಿಜೆನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಅನೇಕರು ಈ ವಿಡಿಯೋ ನೋಡಿ ತಮ್ಮ ಬಾಲ್ಯದ ದಿನಗಳಿಗೆ ಜಾರಿದ್ದಾರೆ. ನಿಮ್ಮ ಪೋಷಕರು ನಿಮ್ಮನ್ನು ಏನನ್ನಾದರೂ ಮಾಡಲು ಒತ್ತಾಯಿಸಿದಾಗ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಬೂಮ್ರಾಗೆ ಚೀಯರ್ಸ್‌ ಮಾಡ್ತಿರುವ ಪುಟ್ಟ ಬಾಲಕ: ಹಳೆ ವಿಡಿಯೋ ಮತ್ತೆ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!