8ನೇ ಪ್ಲೋರ್‌ನಲ್ಲಿ ನೇತಾಡ್ತಿದ್ದ ಮಗುವನ್ನು ರಕ್ಷಿಸಿದ ಯುವಕ : ವಿಡಿಯೋ ವೈರಲ್‌

By Anusha KbFirst Published May 15, 2022, 10:50 AM IST
Highlights
  • ಬಹುಮಹಡಿ ಕಟ್ಟಡದ ಎಂಟನೇ ಪ್ಲೋರ್‌ನಲ್ಲಿ ನೇತಾಡ್ತಿದ್ದ ಮಗು
  • ಕಟ್ಟಡವೇರಿ ಮಗುವನ್ನು ರಕ್ಷಿಸಿದ ಯುವಕ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕಜಕಿಸ್ತಾನ: ಯುವಕನೋರ್ವ ಬಹುಮಹಡಿ ಕಟ್ಟಡದ ಎಂಟನೇ ಮಹಡಿಯಲ್ಲಿ ನೇತಾಡುತ್ತಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪುಟ್ಟ ಮಗುವನ್ನು ರಕ್ಷಣೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. ಈತ ಮಗುವನನ್ನು ರಕ್ಷಣೆ ಮಾಡುವ ಸಲುವಾಗಿ 80 ಅಡಿಯಷ್ಟು ಎತ್ತರಕ್ಕೆ ಏರಿದ್ದಾನೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಗುಡ್‌ ನ್ಯೂಸ್ ಕರೆಸ್ಪಾಂಡೆಂಟ್‌ ಎಂಬ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವ್ಯಕ್ತಿಯ ಕಾರ್ಯಕ್ಕೆ ಹೀರೋ ಎಂದು ಶ್ಲಾಘಿಸಿದ್ದಾರೆ.

ಕಜಕಿಸ್ತಾನದಲ್ಲಿ (Kazakhstan) ಈ ಘಟನೆ ನಡೆದಿದ್ದು, ಸಬಿತ್ ಶೋಂಟಕ್ಬಾವ್ (Sabit Shontakbaev) ಎಂಬ ಯುವಕನೇ ಹೀಗೆ ಹೀರೋ ತರ ಮಗುವನ್ನು ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ ವ್ಯಕ್ತಿ. ಈತ ಮಗುವೊಂದು ಕಟ್ಟಡದ 8ನೇ ಮಹಡಿಯ ಕಿಟಕಿಯಿಂದ ನೇತಾಡುತ್ತಿರುವುದನ್ನು ಗಮನಿಸಿದ್ದಾನೆ. ಸ್ವಲ್ಪ ಆಯತಪ್ಪಿದರೂ ಮಗು ಕೆಳಗೆ ಬಿದ್ದು, ಪ್ರಾಣ ಕಳೆದುಕೊಳ್ಳುವ ಸ್ಥಿತಿ ಅಲ್ಲಿತ್ತು. ಇದನ್ನು ಗಮನಿಸಿದ ಆತ ಸ್ವಲ್ಪವೂ ತಡ ಮಾಡದೇ 80 ಅಡಿಯಷ್ಟು ಎತ್ತರವೇರಿ ಚಾಣಾಕ್ಷತನದಿಂದ ಮೂರು ವರ್ಷದ ಮಗುವಿನ ರಕ್ಷಣೆ ಮಾಡಿದ್ದಾನೆ.

Latest Videos

ಪುಟ್ಟ ಕಂದನ ಜೀವ ಉಳಿಸುವ 16 ಕೋಟಿ ಮದ್ದಿಗೆ ತೆರಿಗೆ ರದ್ದು!

ಮಗು ಇರುವ ಸ್ಥಿತಿಯನ್ನು ನೋಡಿದ ನಾನು ನನ್ನ ಬಗ್ಗೆ ಸುರಕ್ಷಿತ ನಿಯಮಗಳನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಲಿಲ್ಲ. ನನ್ನ ಗೆಳೆಯ ನನ್ನ ಕಾಲುಗಳನ್ನು ಹಿಡಿದುಕೊಂಡಿದ್ದರ ಹೊರತಾಗಿ ಬೇರಾವ ಸುರಕ್ಷತ ಕ್ರಮಗಳನ್ನು ನಾನು ಹೊಂದಿರಲಿಲ್ಲ.  ಆ ಸಂದರ್ಭದಲ್ಲಿ ಬೇರೆ ಯಾವುದರ ಬಗ್ಗೆಯೂ ಯೋಚಿಸಲಿಲ್ಲ ಎಂದು ಮಗುವನ್ನು ರಕ್ಷಿಸಿದ ಸಬಿತ್ ಹೇಳಿದ್ದಾರೆ. ಸಬಿತ್ ಸ್ವತಃ ನಾಲ್ಕು ಮಕ್ಕಳನ್ನು ಹೊಂದಿದ್ದು, ಈಗ ಈ ಮಗುವನ್ನು ರಕ್ಷಿಸಿರುವುದಕ್ಕೆ ದೇಶದ ತುರ್ತು ಉಪ ಸಚಿವರು ಆತನಿಗೆ ಪದಕ ನೀಡಿ ಗೌರವಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಡಿಯೋವನ್ನು 12 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

brave mother: ಚಿರತೆಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ಸಾಹಸಿ ತಾಯಿ
 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 15  ತಿಂಗಳ ಮಗುವನ್ನು ಬರೋಬ್ಬರಿ 10 ಗಂಟೆಗೂ ಅಧಿಕ ಕಾಲದ ಕಾರ್ಯಾಚರಣೆಯ ಮೂಲಕ ಪೊಲೀಸರು (police) ಹಾಗೂ ರಾಜ್ಯ ವಿಪತ್ತು ತುರ್ತು ಮೀಸಲು ಪಡೆ (State Disaster Emergency Reserve Force ) (ಎಸ್ ಡಿಇಆರ್ ಎಫ್) ರಕ್ಷಣೆ ಮಾಡಿದ್ದರು. ಛತ್ತರ್ ಪುರ (Chhatarpur ) ಜಿಲ್ಲೆಯಲ್ಲಿ 80 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ 15 ತಿಂಗಳ ಮಗುವನ್ನು ಮಧ್ಯಾಹ್ನ 3.30ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದ ಮಗುವನ್ನು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ರಕ್ಷಣೆ ಮಾಡಲಾಗಿತ್ತು. 

(Kazakhstan): Sabit Shontakbaev was walking with a friend yesterday when he saw a dangling toddler holding on for her life from a window on the 8th floor of a building. Immediately Sabit rushed into the building & ran up, getting access to the apt. below.pic.twitter.com/klmjWgFIXc

— GoodNewsCorrespondent (@GoodNewsCorres1)

 

ಮಧ್ಯಪ್ರದೇಶ (Madhya Pradesh) ರಾಜ್ಯದ ರಾಜಧಾನಿ ಭೋಪಾಲ್ ನಿಂದ (Bhopal) 350 ಕಿಲೋಮೀಟರ್ ದೂರದಲ್ಲಿರುವ ಛತ್ತರ್ ಪುರ ಜಿಲ್ಲೆಯ ನೌಗಾಂವ್ (Naugaon) ನಲ್ಲಿ ಈ ಘಟನೆ ನಡೆದಿತ್ತು.  ಬಾಲಕಿಯನ್ನು ದಿವ್ಯಾಂಶಿ (Divyanshi)ಎಂದು ಗುರುತಿಸಲಾಗಿದೆ.
 

click me!