ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೂತ್ ಫೋರಂ ಶೃಂಗಸಭೆಗೆ ಮಡಿಕೇರಿಯ ಯದೀಶ್ ಆಯ್ಕೆ!

Published : Apr 08, 2025, 07:58 PM ISTUpdated : Apr 08, 2025, 08:46 PM IST
ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೂತ್ ಫೋರಂ ಶೃಂಗಸಭೆಗೆ ಮಡಿಕೇರಿಯ ಯದೀಶ್ ಆಯ್ಕೆ!

ಸಾರಾಂಶ

ಮಡಿಕೇರಿಯ ಯದೀಶ್ ಕುಂಬಳತ್ತಿಲ್ ರಮೇಶ್, ಯುನೈಟೆಡ್ ನೇಷನ್ಸ್‌ನ 2025ರ ಯೂತ್ ಫೋರಂಗೆ ಭಾರತದಿಂದ ಆಯ್ಕೆಯಾಗಿದ್ದಾರೆ. 138 ದೇಶಗಳ ಪ್ರತಿನಿಧಿಗಳು ಭಾಗವಹಿಸುವ ಈ ಸಮಾವೇಶವು ಏಪ್ರಿಲ್ 15-17ರವರೆಗೆ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. 'ಅಭಿವೃದ್ಧಿಶೀಲ ವಿಜ್ಞಾನ ಮತ್ತು ಸಾಮಾಜಿಕ ಒಳಗೊಳ್ಳುವಿಕೆ' ಕುರಿತು ಚರ್ಚೆ ನಡೆಯಲಿದ್ದು, ಯದೀಶ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಯುವಜನರ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಲಾಗುವುದು.

ಮಡಿಕೇರಿ (ಏ.8): ಯುನೈಟೆಡ್ ನೇಷನ್ಸ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಕೌನ್ಸಿಲ್‌ನ 2025ನೇ ಯೂತ್ ಫೋರಂಗೆ ಮಡಿಕೇರಿಯ ಯದೀಶ್ ಕುಂಬಳತ್ತಿಲ್ ರಮೇಶ್ ಪ್ರತಿನಿಧಿಯಾಗಿ ಭಾರತದಿಂದ ಆಯ್ಕೆಯಾಗಿದ್ದಾರೆ.ಈ ಸಮಾವೇಶದಲ್ಲಿ ಜಗತ್ತಿನ 138 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಮಡಿಕೇರಿಯ ಯದೀಶ್ ಅವರಿಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿದೆ. ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಹಾಗೂ ರಮ್ಯಾ ಕೆ.ಆರ್. ದಂಪತಿಯ ಪುತ್ರ ಯದೀಶ್, ಅಮೆರಿಕದ ಬೋಸ್ಟನ್‌ನ ನಾರ್ಥ್‌ ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ಏ.15ರಿಂದ 17ರ ವರೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ‘ಅಭಿವೃದ್ಧಿ ಶೀಲ ವಿಜ್ಞಾನ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗಾಗಿ ಅಭಿವೃದ್ಧಿಶೀಲತೆಯನ್ನು ಹೆಚ್ಚಿಸುವುದು’ ಎಂಬ ವಿಷಯದ ಅಡಿಯಲ್ಲಿ ಯೂತ್ ಫೋರಂ ಆಯೋಜಿಸಲ್ಪಟ್ಟಿದೆ. ಈ ಪ್ರತಿಷ್ಠಿತ ಶೃಂಗಸಭೆಗೆ ಭಾರತದ ಪ್ರತಿನಿಧಿಯಾಗಿ ಯದೀಶ್ ರಮೇಶ್ ಪಾಲ್ಗೊಳ್ಳುತ್ತಿದ್ದಾರೆ.

ಬಾಂಗ್ಲಾ ನಾಯಕ ಮುಹಮ್ಮದ್‌ ಯೂನುಸ್‌ಗೆ ಎಚ್ಚರಿಕೆ ಸಂದೇಶ ನೀಡಿದ ಪ್ರಧಾನಿ ಮೋದಿ

ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC) ಯುವ ವೇದಿಕೆಯು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಏಪ್ರಿಲ್ 15 ರಿಂದ 17, 2025 ರವರೆಗೆ ನಡೆಯಲಿದೆ.

2030 ರ ಕಾರ್ಯಸೂಚಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ನೇತೃತ್ವದಲ್ಲಿ ಜಗತ್ತನ್ನು ಹೆಚ್ಚು ನ್ಯಾಯಯುತ, ಹಸಿರು ಮತ್ತು ಸುಸ್ಥಿರ ಸ್ಥಳವಾಗಿ ಪರಿವರ್ತಿಸಲು ಕ್ರಮಗಳು ಮತ್ತು ಶಿಫಾರಸುಗಳನ್ನು ಉತ್ತೇಜಿಸಲು, ಸದಸ್ಯ ರಾಷ್ಟ್ರಗಳು ಮತ್ತು ಇತರ ಪಾಲುದಾರರೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಲು ಯುವಜನರಿಗೆ ವೇದಿಕೆಯನ್ನು ಒದಗಿಸುತ್ತದೆ.

ಜಾಗತಿಕ ಚದುರಂಗದಾಟದಲ್ಲಿ ಕಸಿವಿಸಿ? ಪ್ರತಿಕೂಲ ಜಗತ್ತಿನಲ್ಲಿ ಜರ್ಮನಿ-ಯೂರೋಪ್ ಪುನರ್ ವಿಮರ್ಷೆ ಅಗತ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!