ನೆರೆಯ ದೇಶದ ಈ ನಗರದಲ್ಲಿ 5 ವರ್ಷದಲ್ಲಿ ಭೀಕರ ಜಲಕ್ಷಾಮ, ಜಗತ್ತಿನ ಮೊದಲ ನೀರಿಲ್ಲದ ನಗರ ಎನಿಸಲಿದೆ!

Published : Jul 08, 2025, 06:43 PM IST
kabul blast

ಸಾರಾಂಶ

ಕಾಬೂಲ್ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ನೀರಿನ ಕೊರತೆ ಅನುಭವಿಸಲಿರುವ ಜಗತ್ತಿನ ಮೊದಲ ನಗರವಾಗಬಹುದು. ಅಂತರ್ಜಲ ಮಟ್ಟದ ಕುಸಿತ, ಹವಾಮಾನ ಬದಲಾವಣೆ ಮತ್ತು ಜನಸಂಖ್ಯಾ ಬೆಳವಣಿಗೆ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳು. ಲಕ್ಷಾಂತರ ಜನರು ಸ್ಥಳಾಂತರಗೊಳ್ಳಬೇಕಾಗಬಹುದು ಎಂಬ ಆತಂಕವಿದೆ.

ಭಾರತದ ನೆರೆಯ ರಾಷ್ಟ್ರ ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ನೀರಿನ ಕೊರತೆ ಅನುಭವಿಸಲಿರುವ ಜಗತ್ತಿನ ಮೊದಲ ನಗರವಾಗಿ ಬೆಳಕಿಗೆ ಬರಲಿದೆ ಎಂದು ವರದಿ ತಿಳಿಸಿದೆ. ಲಾಭರಹಿತ ಸಂಸ್ಥೆಯಾದ ಮರ್ಸಿ ಕಾರ್ಪ್ಸ್ ಪ್ರಕಟಿಸಿರುವ ಇತ್ತೀಚಿನ ವರದಿಯು, ನಗರದ ಭವಿಷ್ಯದ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದ್ದು, ಈ ಪ್ರದೇಶದ 7.1 ಮಿಲಿಯನ್ ಜನರು ಮುಂಬರುವ ವರ್ಷಗಳಲ್ಲಿ ದೊಡ್ಡ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಅಂತರ್ಜಲಮಟ್ಟ ತೀವ್ರ ಕುಸಿತ

ವರದಿ ಪ್ರಕಾರ, ನೀರಿನ ಅತಿಯಾದ ಬಳಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮವಾಗಿ ಕಾಬೂಲ್‌ನ ಅಂತರ್ಜಲ ಮಟ್ಟವು ಕಳೆದ 10 ವರ್ಷಗಳಲ್ಲಿ 25 ರಿಂದ 30 ಮೀಟರ್‌ಗಳಷ್ಟು ತೀವ್ರ ಕುಸಿದಿದೆ. ಪ್ರತಿ ವರ್ಷ ಬಳಕೆಯಾಗುವ ನೀರಿನ ಪ್ರಮಾಣವು, ನೈಸರ್ಗಿಕ ಮರುಪೂರಣದ ಪ್ರಮಾಣಕ್ಕಿಂತ ಸುಮಾರು 44 ಮಿಲಿಯನ್ ಘನ ಮೀಟರ್ ಹೆಚ್ಚು ಇದೆ. ಈ ಸ್ಥಿತಿ ಹಾಗೆಯೇ ಮುಂದುವರೆದರೆ, 2030ರ ವೇಳೆಗೆ ನಗರದಲ್ಲಿ ಎಲ್ಲಾ ಪ್ರಮುಖ ನೀರಿನ ಮೂಲಗಳು ಬತ್ತಬಹುದು ಎಂಬ ಆತಂಕವೂ ಮೂಡಿದೆ.

ಲಕ್ಷಾಂತರ ಜನರ ನೆರಳಲ್ಲಿ ಸ್ಥಳಾಂತರ ಭೀತಿ

ಈ ಬಿಕ್ಕಟ್ಟಿನ ಪರಿಣಾಮವಾಗಿ, ಕನಿಷ್ಠ 3 ಮಿಲಿಯನ್ ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರವಾಗ ಬೇಕಾಗಬಹುದು. ಯುನಿಸೆಫ್ ನೀಡಿರುವ ಅಂದಾಜುಗಳ ಪ್ರಕಾರ, ಈಗಾಗಲೇ ಶೇಕಡಾ 50 ರಷ್ಟು ಭೂಗತ ಬಾವಿಗಳು ಬತ್ತಿ ಹೋಗಿವೆ. ಇವು ನಗರದ ಹೆಚ್ಚಿನ ನಿವಾಸಿಗಳಿಗೆ ಕುಡಿಯುವ ನೀರಿನ ಮೂಲವಾಗಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ.

80% ಅಂತರ್ಜಲ ಅಸುರಕ್ಷಿತ

ನೀರಿನಲ್ಲಿ ಕಂಡುಬರುತ್ತಿರುವ ಆರ್ಸೆನಿಕ್, ಲವಣ ಹಾಗೂ ಕೊಳಚೆ ನೀರಿನ ಪ್ರಮಾಣದ ಕಾರಣದಿಂದಾಗಿ, ಕಾಬೂಲ್‌ನ ಅಂತರ್ಜಲದ ಶೇಕಡಾ 80 ರಷ್ಟು ಭಾಗ ಅಸುರಕ್ಷಿತವಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಹವಾಮಾನ ಬದಲಾವಣೆ, ಕಳಪೆ ನೀತಿ ನಿರ್ವಹಣೆ, ಮತ್ತು ಸೀಮಿತ ಸಂಪನ್ಮೂಲಗಳ ಮೇಲಿನ ಹೆಚ್ಚುತ್ತಿರುವ ಒತ್ತಡ ಈ ಸ್ಥಿತಿಗೆ ಕಾರಣವೆಂದು ತಜ್ಞರು ದೂಷಿಸುತ್ತಿದ್ದಾರೆ.

ಹಿಮನದಿ ಮೇಲೆ ಅವಲಂಬಿತವಾದ ಕಾಬೂಲ್

ಕಾಬೂಲ್‌ನ ನೀರಿನ ಮೂಲಗಳು ಹೆಚ್ಚಿನವಾಗಿ ಹಿಂದೂ ಕುಶ್ ಪರ್ವತಗಳಲ್ಲಿ ಕರಗುವ ಹಿಮನದಿಗಳಿಂದ ಅವಲಂಬಿತವಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಗಂಭೀರವಾಗಿ ಕುಸಿದಿದೆ. ಅಕ್ಟೋಬರ್ 2023 ರಿಂದ ಜನವರಿ 2024ರೊಳಗೆ, ಅಫ್ಘಾನಿಸ್ತಾನವು ತನ್ನ ಸಾಮಾನ್ಯ ಚಳಿಗಾಲದ ಮಳೆಯ ಕೇವಲ 45 ರಿಂದ 60 ಶೇಕಡಾ ಮಾತ್ರ ಪಡೆದಿದೆ.

ಜನಸಂಖ್ಯೆಯ ಮೇಲಿನ ಒತ್ತಡ

2001ರಿಂದ, ಕಾಬೂಲ್‌ನ ಜನಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಬೆಳವಣಿಗೆ ನಗರ ಮೂಲಸೌಕರ್ಯಗಳ ಮೇಲೆ ಭಾರೀ ಒತ್ತಡವನ್ನು ಉಂಟುಮಾಡಿದ್ದು, ನೀರಿನ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಈ ಎಲ್ಲ ಅಂಶಗಳು ಸೇರಿ ಕಾಬೂಲ್‌ನ ಭವಿಷ್ಯಕ್ಕೆ ಗಂಭೀರ ಸವಾಲುಗಳನ್ನು ಉಂಟುಮಾಡುತ್ತಿದ್ದು, ತ್ವರಿತ ಮತ್ತು ದೀರ್ಘಕಾಲಿಕ ನೀರಿನ ನಿರ್ವಹಣಾ ನೀತಿಯ ಅಗತ್ಯತೆಯನ್ನು ಸ್ಪಷ್ಟಪಡಿಸುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!