10 ವರ್ಷ ತಾಯಿಯ ಶವವನ್ನು ಫ್ರೀಜರ್‌ನಲ್ಲೇ ಇಟ್ಟುಕೊಂಡಿದ್ದಳು!

Published : Jan 31, 2021, 02:46 PM IST
10 ವರ್ಷ ತಾಯಿಯ ಶವವನ್ನು ಫ್ರೀಜರ್‌ನಲ್ಲೇ ಇಟ್ಟುಕೊಂಡಿದ್ದಳು!

ಸಾರಾಂಶ

ಮೃತರ ಶವಸಂಸ್ಕಾರ ಮಾಡುವುದು ರೂಢಿ| 10 ವರ್ಷ ತಾಯಿಯ ಶವವನ್ನು ಫ್ರೀಜರ್‌ನಲ್ಲೇ ಇಟ್ಟುಕೊಂಡಿದ್ದಳು| ಬಯಲಾಯ್ತು ವಿಚಿತ್ರ ಘಟನೆ

ಟೋಕಿಯೋ(ಜ.31): ಮೃತರ ಶವಸಂಸ್ಕಾರ ಮಾಡುವುದು ರೂಢಿ. ಆದರೆ ಜಪಾನಿನ ಮಹಿಳೆಯೊಬ್ಬರು ತಾಯಿಯ ಮೃತ ದೇಹವನ್ನು ಬರೋಬ್ಬರಿ 10 ವರ್ಷಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿದ್ದರು ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದ 48 ವರ್ಷದ ಮಹಿಳೆ ಯೋಶಿನೋ ಎಂಬವರೇ ತಾಯಿಯ ಶವವನ್ನು ಫ್ರೀಜರ್‌ನಲ್ಲಿ 10 ವರ್ಷ ಇಟ್ಟುಕೊಂಡ ಮಹಿಳೆ. ಯೋಶಿನೋ ಅಪಾರ್ಟ್‌ಮೆಂಟ್‌ ಬಾಡಿಗೆಯನ್ನು ಪಾವತಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಕೆಯನ್ನು ಮನೆಯಿಂದ ಹೊರಹಾಕಲಾಗಿತ್ತು. ಆಗ ಮನೆಯನ್ನು ಸ್ವಚ್ಛ ಮಾಡುತ್ತಿದ್ದ ವೇಳೆ ಕಾರ್ಮಿಕರೊಬ್ಬರು ಫ್ರೀಜರ್‌ನಲ್ಲಿ ಹೆಣ ಇರುವುದನ್ನು ಕಂಡು ದಂಗಾಗಿದ್ದಾರೆ.

ಮನೆ ತಾಯಿಯ ಹೆಸರಿನಲ್ಲಿ ಲೀಸ್‌ಗೆ ಇತ್ತು. ತಾಯಿ ಸತ್ತಿದ್ದು ಗೊತ್ತಾದರೆ ತನ್ನನ್ನೂ ಮನೆಯಿಂದ ಹೊರದಬ್ಬಬಹುದು ಎಂಬ ಆತಂಕದಿಂದ ಆಕೆಯ ಸಾವಿನ ವಿಚಾರ ಮುಚ್ಚಿಟ್ಟು, ಹೆಣವನ್ನು ಮಗಳು ಫ್ರೀಜರ್‌ನಲ್ಲಿ ಇಟ್ಟಿದ್ದಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್