ಮೋದಿ-ಮೆಲೋನಿ ಫೋಟೋ ನೋಡಿ ಹೊಟ್ಟೆ ಉರಿದುಕೊಂಡ ಟ್ರಂಪ್​? ಎಡವಟ್ಟು ಹೇಳಿಕೆ ನೀಡಿ ಮುಖಭಂಗ

Published : Jun 20, 2026, 04:09 PM IST
PM Modi, Meloni and Trump

ಸಾರಾಂಶ

ಜಿ7 ಶೃಂಗಸಭೆಯಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂಬ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆ ಸಂಚಲನ ಸೃಷ್ಟಿಸಿದೆ. ಟ್ರಂಪ್ ಅವರ ಆರೋಪವನ್ನು ಸಂಪೂರ್ಣ ಕಟ್ಟುಕಥೆ ಎಂದು ತಳ್ಳಿಹಾಕಿದ ಮೆಲೋನಿ, ತಾವಾಗಲಿ ಅಥವಾ ಇಟಲಿಯಾಗಲಿ ಯಾರ ಮುಂದೆಯೂ ಬೇಡುವುದಿಲ್ಲ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ, ಇದರಿಂದ ಟ್ರಂಪ್ ಮುಖಭಂಗ ಅನುಭವಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇಟಲಿ ಪ್ರವಾಸದ ವೇಳೆ ಮೋದಿ, ಮೇಡ್​ ಇನ್​ ಇಂಡಿಯಾ ಚಾಕಲೇಟ್​ ನೀಡಿ ಸಾಕಷ್ಟು ಸುದ್ದಿಯಾಗಿದ್ದರು. ಜಿ 7 ಶೃಂಗಸಭೆಯಲ್ಲಿ ಕೂಡ, ನಾವಿಬ್ಬರೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಫೇಮಸ್​ ಎಂದು ಮೆಲೋನಿ ತಮಾಷೆ ಕೂಡ ಮಾಡಿದ್ದರು.

ಇಷ್ಟಾಗುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಹೊಟ್ಟೆ ಉರಿದಂತೆ ಕಾಣುತ್ತಿದೆ. ಅದಕ್ಕಾಗಿಯೇ ಎಡವಟ್ಟು ಹೇಳಿಕೆ ನೀಡಿ ಈಗ ಭಾರಿ ಮುಖಭಂಗ ಅನುಭವಿಸಿದ್ದಾರೆ. ಜಿ7 ಶೃಂಗಸಭೆಯಲ್ಲಿ ಮೆಲೋನಿ ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂದು ಟ್ರಂಪ್​ ಹೇಳಿಕೆ ನೀಡಿದ್ದರು. ಇಟಲಿಯ 'La7' ಟಿವಿ ವಾಹಿನಿಗೆ ನೀಡಿದ ಕಿರು ಸಂದರ್ಶನದಲ್ಲಿ ಮಾತನಾಡಿದ್ದ ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್, "ನಾನು ಮೆಲೋನಿ ಜೊತೆ ಮಾತನಾಡಬೇಕಾದ ಅಗತ್ಯವಿರಲಿಲ್ಲ. ಆದರೆ, ನಾನು ಮಾತನಾಡಿದ್ದಕ್ಕೆ ಅವರಿಗೆ ಖುಷಿಯಾಗಿರಬಹುದು. ಅವರು ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ತುಂಬಾ ಆಸೆಪಟ್ಟಿದ್ದರು, ಅದಕ್ಕಾಗಿ ನನ್ನ ಬಳಿ ಬೇಡಿಕೊಂಡರು. ನಾನು ಫೋಟೋ ತೆಗೆಸಿಕೊಳ್ಳಲು ಇಷ್ಟಪಡಲಿಲ್ಲ, ಆದರೆ ಅವರ ಪರಿಸ್ಥಿತಿ ನೋಡಿ ಅಯ್ಯೋ ಪಾಪ ಎನಿಸಿತು" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹೀಗೇಕೋ ಗೊತ್ತಿಲ್ಲ

ಇದರ ಅರ್ಥ ತಾವೂ ಮೆಲೋನಿ ಜೊತೆ ಫೋಟೋ ತೆಗೆಸಿಕೊಳ್ಳುವ ಹಂಬಲ ಅವರಿಗೆ ಆದಂತಿತ್ತು. ಆದರೆ ಈ ಹೇಳಿಕೆ ಮೆಲೋನಿಗೆ ಭಾರಿ ಸಿಟ್ಟು ತಂದಿದೆ. ಸುಖಾ ಸುಮ್ಮನೆ ತಮ್ಮ ಹೆಸರನ್ನು ತಂದಿರುವುದಕ್ಕೆ ಟ್ರಂಪ್​ ಮೇಲೆ ಮೆಲೋನಿ ಕೆಂಡಾಮಂಡಲ ಆಗಿದ್ದಾರೆ. ಟ್ರಂಪ್​ ಹೇಳಿಕೆಗೆ ತಿರುಗೇಟು ನೀಡಿರೋ ಮೆಲೋನಿ, "ಇದು ಸಂಪೂರ್ಣ ಕಟ್ಟುಕಥೆ, ನಾನಾಗಲಿ ಅಥವಾ ಇಟಲಿಯಾಗಲಿ ಯಾರ ಮುಂದೆಯೂ ಬೇಡುವುದಿಲ್ಲ. ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣ ಕಟ್ಟುಕಥೆಯಾಗಿವೆ, ಅವರ ಮಾತು ಕೇಳಿ ನನಗೆ ನಿಜಕ್ಕೂ ದಿಗ್ಭ್ರಮೆಯಾಗಿದೆ. ಅಮೆರಿಕದ ಅಧ್ಯಕ್ಷರು ತಮ್ಮದೇ ಮಿತ್ರರಾಷ್ಟ್ರಗಳೊಂದಿಗೆ ಈ ರೀತಿ ಏಕೆ ವರ್ತಿಸುತ್ತಾರೋ ನನಗೆ ತಿಳಿಯುತ್ತಿಲ್ಲ; ಅಷ್ಟಕ್ಕೂ, ಅವರು ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ" ಎಂದು ಮೆಲೋನಿ ಹೇಳಿದ್ದಾರೆ.

ನಾನಾಗಲಿ ಹಾಗೂ ಇಟಲಿಯಾಗಲಿ ಬೇಡಲ್ಲ

"ಪಾಶ್ಚಿಮಾತ್ಯ ದೇಶಗಳ ಶತ್ರುಗಳೊಂದಿಗೆ ಹಾಗೂ ಅಮೆರಿಕದ ಶತ್ರುಗಳೊಂದಿಗೆ ಟ್ರಂಪ್ ಇದೇ ರೀತಿಯ ಕಠಿಣ ನಿಲುವನ್ನು ತೋರುವುದಿಲ್ಲ ಎಂಬುದೇ ನಾಚಿಕೆಗೇಡಿನ ಸಂಗತಿ. ಬದಲಾಗಿ, ಅಂತಹ ನಾಯಕರೊಂದಿಗೆ ಅವರು ಹೆಚ್ಚು ಹೊಂದಾಣಿಕೆ ಮಾಡಿಕೊಂಡು ಮೃದುವಾಗಿ ವರ್ತಿಸುತ್ತಾರೆ. ಆದರೆ, ಅವರು ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮೆಲೋನಿ ಗುಡುಗಿದ್ದಾರೆ. ಇಟಲಿ ವಿದೇಶಾಂಗ ಸಚಿವ ಆಂಟೋನಿಯೊ ತಾಜಾನಿ: "ಅಧ್ಯಕ್ಷ ಟ್ರಂಪ್ ಅವರ ಗಂಭೀರ ಮತ್ತು ಆಕ್ಷೇಪಾರ್ಹ ಮಾತುಗಳು ಇಡೀ ಇಟಲಿಗೆ ಮಾಡಿದ ಅವಮಾನವಾಗಿದೆ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದರಿಂದ ಟ್ರಂಪ್​ ಭಾರಿ ಮುಖಭಂಗ ಅನುಭವಿಸುವಂತಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ನಕ್ಷೆಯಲ್ಲಿ ಶ್ರೀಲಂಕಾ ಯಾಕೆ ಕಾಣಿಸುತ್ತೆ? ಇಲ್ಲಿದೆ ನೋಡಿ ನಿಜವಾದ ಸೀಕ್ರೆಟ್
‘ಭಾರತದಲ್ಲಿ ಪ್ರಧಾನಿಗಳು ಬದಲಾಗುತ್ತಲೇ ಇದ್ದರು, ಮೋದಿ ಬಂದ ಮೇಲೆ ಸ್ಥಿರತೆ ಸಿಕ್ಕಿದೆ’: ಪ್ರಧಾನಿ ನಾಯಕತ್ವಕ್ಕೆ ಟ್ರಂಪ್ ಫಿದಾ!