ಕೊರೋನಾ ವೈರಸ್‌ಗೆ ತೀವ್ರವಾಗಿ ನಲುಗಿದೆ ದೇಶ ಇಟಲಿ. ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಇಟಲಿ, ಕೊರೋನಾ ವೈರಸ್ ಹುಟ್ಟಿನ ಕುರಿತು ಸ್ವತಂತ್ರ ತನಿಖೆಗೆ ಮುಂದಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ಜೊತೆ ಸೇರಿ ಆರ್ಥಿಕತೆ ಬಲಪಡಿಸಲು ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ. ಈ ಕುರಿತು ಯುರೋಪಿಯನ್ ವಿದೇಶಾಂಗ ಸಚಿವ ವಿನ್ಸೆಂಝೋ ಅಮೆಂಡೋಲಾ ಮಾತುಗಳು ಇಲ್ಲಿವೆ.
ಇಟಲಿ(ಮೇ.30): ಕೊರೋನಾ ವೈರಸ್ ವುಹಾನ್ ಪ್ರಾಂತ್ಯ ಹೊರತು ಪಡಿಸಿದರೆ ಚೀನಾದ ಇನ್ಯಾವ ಭಾಗಗಳಲ್ಲೂ ಕಾಣಿಸಿಕೊಂಡೇ ಇಲ್ಲ. ಹೀಗಾಗಿ ಇತರ ದೇಶಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇತ್ತ ವಿಶ್ವ ಆರೋಗ್ಯ ಸಂಸ್ಥೆ ಕೂಡ ಮೆಲ್ಲನೆ ಎಚ್ಚರಿಸಿ ಸುಮ್ಮನಾಗಿತ್ತು. ಆದರೆ ಕೊರೋನಾ ವೈರಸ್ ನಿಜ ರೂಪ ಹಾಗೂ ಪರಿಣಾಮ ಗೋಚರಿಸಿದ್ದು ಇಟಲಿಯಲ್ಲಿ. ಇಟಲಿ ಅಕ್ಷರಶ ಕೊರೋನಾಗೆ ತತ್ತರಿಸಿತ್ತು. ಇದೀಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಇದೀಗ ಚೀನಾದಲ್ಲಿ ಆರಂಭವಾದ ಕೊರೋನಾ ವೈರಸ್ ಕುರಿತು ಸ್ವತಂತ್ರ ತನಿಖೆಗೆ ಇಟಲಿ ಮುಂದಾಗಿದೆ.
ಚೀನಾ ವಿರುದ್ಧ ತಿರುಗಿ ಬಿದ್ದ 62 ರಾಷ್ಟ್ರಗಳು; ಪಾಠ ಕಲಿಯುತ್ತಾ ಡ್ರ್ಯಾಗನ್ ದೇಶ?
undefined
ಕೊರೋನಾ ವೈರಸ್ ಸ್ವತಂತ್ರ ತನಿಖೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಸೇರಿ ವಿಶ್ವದಲ್ಲಿ ಹಲವು ಬದಲಾವಣೆ ತರಲು ಇಟಲಿ ತುದಿಗಾಲಲ್ಲಿ ನಿಂತಿದೆ. ವಿಶ್ವ ಸಂಸ್ಥೆಗಳಲ್ಲಿ ಪ್ರಮುಖವಾಗಿ ಆರೋಗ್ಯ ಸಂಸ್ಥೆ ಕೊರೋನಾ ಭೀಕರತೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಅನ್ನೋ ಆರೋಪಗಳು ಕೇಳಿಬಂದಿದೆ. ಹಲವು ದೇಶಗಳು ಆರೋಗ್ಯ ಸಂಸ್ಥೆ ವಿರುದ್ದ ಕಿಡಿ ಕಾರಿವೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಹೊಸ ರೂಪ ನೀಡುವ ಅವಶ್ಯಕತೆ ಇದೆ ಎಂದು ಮೋದಿ ಹೇಳಿದ್ದರು. ಇದೀಗ ಮೋದಿ ಮಾತನ್ನು ಇಟಲಿ ಬೆಂಬಲಿಸಿದೆ.
ಸ್ಥಳೀಯ ಉತ್ಪನ್ನ ಖರೀದಿಸಿ: ಚೀನಿ ಉತ್ಪನ್ನ ತ್ಯಜಿಸಲು ಮೋದಿ ಪರೋಕ್ಷ ಮನವಿ!
ಭಾರತದ ಖಾಸಗಿ ಮಾಧ್ಯಮದ ತೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಯೋರೋಪಿಯನ್ ವಿದೇಶಾಂಗ ಸಚಿವ ವಿನ್ಸೆಂಝೋ ಅಮೆಂಡೋಲಾ, ಕೊರೋನಾ ಬಳಿಕ ಭಾರತ ಹಾಗೂ ಇಟಲಿ ಮೇಲೆ ಮಹತ್ವದ ಜವಾಬ್ದಾರಿಗಳಿವೆ. ಕಾರಣ 2021ರ ಜಿ20 ಅಧ್ಯಕ್ಷತೆಯನ್ನು ಇಟಲಿ ವಹಿಸಿದರೆ, 2022ರ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಲಿದೆ. ಹೀಗಾಗಿ ಕೊರೋನಾ ಬಳಿಕ ಆರ್ಥಿಕತೆಯನ್ನು ಮೇಲಕ್ಕೆತಲು, ಆರೋಗ್ಯ ಸುಧಾರಣೆ ಸೇರಿದಂತೆ ಹಲವು ಜವಾಬ್ದಾರಿಗಳು ನಮ್ಮ ಮೇಲಿದೆ. ಪ್ರಧಾನಿ ಮೋದಿ ಜೊತೆ ಸೇರಿ ಇಟಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಿದ್ದವಾಗಿದೆ ಎಂದು ವಿನ್ಸೆಂಝೋ ಅಮೆಂಡೋಲಾ ಹೇಳಿದ್ದಾರೆ.
ಇಟಲಿ ಹಾಗೂ ಭಾರತ ಜೊತೆಗೂಡಿ ಟಿ20ಗೆ ಹೊಸ ರೂಪ ನೀಡಲಿದ್ದೇವೆ. ಬೇಡಿಕೆ, ವಸ್ತುಗಳ ಪೂರೈಕೆ, ಉತ್ಪಾದನೆ ಸೇರಿದಂತೆ ಹಲವು ವಿಚಾರಗಳಿಗೆ ಇಟಲಿ ಹಾಗೂ ಭಾರತ ಜೊತೆಯಾಗಿ ಹೊಸ ರೂಪುರೇಶೆ ಸಿದ್ದಪಡಿಸಲಿದೆ. ಇದರ ಜೊತೆಗೆ ಚೀನಾದಲ್ಲಿ ಕಾಣಿಸಿಕೊಂಡು ಇದೀಗ ವಿಶ್ವದಲ್ಲೇ ಮರಣಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ತನಿಖೆಯನ್ನು ಇಟಲಿ ಸ್ವತಂತ್ರವಾಗಿ ಮಾಡಲಿದೆ ಎಂದು ಇಟಲಿಯ ವಿನ್ಸೆಂಝೋ ಅಮೆಂಡೋಲಾ ಹೇಳಿದ್ದಾರೆ.