Israel ಭೀಕರ ದಾಳಿಗೆ ಹೌತಿ ಸೇನಾ ಮುಖ್ಯಸ್ಥ ಮುಹಮ್ಮದ್ ಅಲ್‌-ಘಮರಿ ಸಾವು, ಸಂಘಟನೆಯಿಂದ ಪ್ರತೀಕಾರದ ಎಚ್ಚರಿಕೆ

Published : Oct 16, 2025, 09:59 PM IST
Israeli airstrike in Yemen Houthi military chief killed

ಸಾರಾಂಶ

Israeli airstrike in Yemen: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸೇನಾ ಮುಖ್ಯಸ್ಥ ಮುಹಮ್ಮದ್ ಅಬ್ದುಲ್-ಕರೀಮ್ ಅಲ್-ಘಮರಿ ಸಾವನ್ನಪ್ಪಿದ್ದಾರೆ. ಗಾಜಾ ಬೆಂಬಲಿಸಿ ಇಸ್ರೇಲ್‌ಗೆ ಕ್ಷಿಪಣಿ ಹಾರಿಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ.

ಸನಾ, ಯೆಮನ್ (ಅ.16): ಇರಾನ್ ಬೆಂಬಲಿತ ಹೌತಿ ಬಂಡುಕೋರರ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಗುರುವಾರ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹೌತಿ ಸಂಘಟನೆಯ ಸೇನಾ ಮುಖ್ಯಸ್ಥ ಮತ್ತು ಹಿರಿಯ ಮಿಲಿಟರಿ ಅಧಿಕಾರಿ ಮುಹಮ್ಮದ್ ಅಬ್ದುಲ್-ಕರೀಮ್ ಅಲ್-ಘಮರಿ ಸಾವನ್ನಪ್ಪಿದ್ದಾರೆ.

ತಮ್ಮ ಮಿಲಿಟರಿ ಕರ್ತವ್ಯಗಳಲ್ಲಿ ತೊಡಗಿರುವಾಗ ನಡೆದ ದಾಳಿಯ ಮೃತಪಟ್ಟಿರುವ ಬಗ್ಗೆ ಹೌತಿ ಬಂಡುಕೋರರ ಗುಂಪು ಘೋಷಿಸಿದ್ದು, ಇಸ್ರೇಲ್‌ಗೆ ನೇರ ಆರೋಪ ಮಾಡದಿದ್ದರೂ ಅಪರಾಧಗಳಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಎಚ್ಚರಿಸಿದೆ.

ಹೌತಿ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದು, ಅಲ್-ಘಮರಿಯ ಹುತಾತ್ಮರಾಗಿದ್ದಾರೆ. ಇದು ನಮ್ಮ ಸ್ಥೈರ್ಯವನ್ನು ಕುಗ್ಗಿಸುವುದಿಲ್ಲ, ಬದಲಿಗೆ ಪ್ರತಿರೋಧ ಇನ್ನಷ್ಟು ಬಲಗೊಳ್ಳುತ್ತದೆ. ಇಸ್ರೇಲ್‌ನೊಂದಿಗಿನ ಸಂಘರ್ಷ ಇಲ್ಲಿಗೆ ಮುಗಿಯಿಲ್ಲ, ನಮ್ಮ ಜನರ ರಕ್ಷಣೆಗೆ ಯಾವ ಬೆಲೆ ತೆತ್ತಾದರೂ ಸಿದ್ಧ! ಎಂದು ಘೋಷಿಸಿದ್ದಾರೆ.

ಇಸ್ರೇಲ್‌ನ ಪ್ರತಿದಾಳಿ ಹಿನ್ನೆಲೆ: ಹೌತಿಗಳು ಗಾಜಾದ ಪ್ಯಾಲೆಸ್ಟೀನಿಯನ್ನರ ಬೆಂಬಲಕ್ಕಾಗಿ ಇಸ್ರೇಲ್‌ನ ಕಡೆ ಕ್ಷಿಪಣಿಗಳನ್ನು ಹಾರಿಸಿದ್ದರು, ಹೆಚ್ಚಿನವುಗಳನ್ನು ಇಸ್ರೇಲ್ ತಲುಪುವ ಮುನ್ನವೇ ಆಕಾಶದಲ್ಲೇ ನಾಶಪಡಿಸಿತು. ಇದರ ಪ್ರತಿಕ್ರಿಯೆಯಾಗಿ ಇಸ್ರೇಲ್ ಯೆಮನ್‌ನ ಹೌತಿ ನಿಯಂತ್ರಿತ ಪ್ರದೇಶಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿದೆ.

ಘಮರಿ ಹತ್ಯೆಗೆ ವೈಮಾನಿಕ ದಾಳಿ ನಡೆಸಿದ್ದವು: ಇಸ್ರೇಲ್

ಇಸ್ರೇಲ್ ರಕ್ಷಣಾ ಸಚಿವರು ಹೇಳಿಕೆ ನೀಡಿದ್ದು, ಘಮರಿ ಮೇಲೆ ನಾವು ವೈಮಾನಿಕ ದಾಳಿ ನಡೆಸಿದ್ದೇವೆ. ಯಾವುದೇ ಬೆದರಿಕೆಗಳ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರೆಸುತ್ತೇವೆ ಎಂದು ಹೌತಿ ಬಂಡುಕೋರರಿಗೆ ಇಸ್ರೇಲ್ ಎಚ್ಚರಿಕೆ ನೀಡಿದೆ. ಹೌತಿ ನಾಯಕ ಅಬ್ದುಲ್ ಮಲಿಕ್ ಅಲ್-ಹೌತಿ ಕಳೆದ ವಾರ, ಇಸ್ರೇಲ್ ಗಾಜಾ ಕದನ ವಿರಾಮ ಒಪ್ಪಂದವನ್ನು ಪಾಲಿಸುತ್ತಿದೆಯೇ ಎಂಬುದನ್ನು ಗುಂಪು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಇಸ್ರೇಲ್ ಪಾಲಿಸಲು ವಿಫಲವಾದರೆ ಗಾಜಾಗೆ ಬೆಂಬಲವನ್ನು ಪುನರಾರಂಭಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.

ಹೌತಿಗಳ ಮಾಸ್ಟರ್ ಮೈಂಡ್ ಆಗಿದ್ದ ಘಮರಿ:

ಅಲ್-ಘಮರಿ ಹೌತಿ ಮಿಲಿಟರಿ ರಚನೆಯ ಪ್ರಮುಖ ವ್ಯಕ್ತಿಯಾಗಿದ್ದ. ಸೌದಿ ಅರೇಬಿಯಾ ಮತ್ತು ಇತರ ವಿರೋಧಿಗಳ ವಿರುದ್ಧದ ಕಾರ್ಯತಂತ್ರಗಳು, ಮಿಲಿಟರಿ ಕಾರ್ಯಾಚರಣೆಗಳನ್ನ ರೂಪಿಸುವಲ್ಲಿ ಪ್ರಮುಖನಾಗಿದ್ದ. ಇದಗ ಇಸ್ರೇಲ್ ದಾಳಿಯಲ್ಲಿ ಘಮರಿ ಸಾವು ಹೌತಿ ಸಂಘಟನೆಗೆ ಭಾರೀ ಹಿನ್ನಡೆ ಎಂದೇ ಪರಿಗಣಿಸುತ್ತಿದ್ದಾರೆ. ಈ ಘಟನೆಯೊಂದಿಗೆ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆಗಳು ಹೆಚ್ಚು.ಈ ಬ್ರೇಕಿಂಗ್ ಸುದ್ದಿ ಮಧ್ಯಪ್ರಾಚ್ಯದಲ್ಲಿ ಹೊಸ ತಿರುವು ಪಡೆದುಕೊಂಡಿಡು ವಿಶ್ವ ಗಮನ ಸೆಳೆದಿದೆ. ಹೆಚ್ಚಿನ ಅಪ್ಡೇಟ್‌ಗಳಿಗಾಗಿ ನಮ್ಮನ್ನು ಟ್ರ್ಯಾಕ್ ಮಾಡಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!