88 ಕೋಟಿ ರೂಗೆ ಪಾಂಡ ತಂದ ಮೃಗಲಾಯಕ್ಕೆ ಆರ್ಥಿಕ ಸಂಕಷ್ಟ, ಹಿಂದಿರುಗಿಸಲು ನಿರ್ಧಾರ!

By Chethan Kumar  |  First Published Sep 26, 2024, 6:37 PM IST

ಭಾರತ ಆಫ್ರಿಕಾದಿಂದ ಚೀತಾಗಳನ್ನು ತಂದು ಇಲ್ಲಿ ಸಂತತಿ ಅಭಿವೃದ್ಧಿಯಲ್ಲಿ ತೊಡಗಿದೆ. ಇದೇ ರೀತಿ ಫಿನ್‌ಲೆಂಡ್ ದೇಶ 88 ಕೋಟಿ ರೂಪಾಯಿಗೆ ಪಾಂಡಾಗಳನ್ನು ತಂದು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.


ಫಿನ್‌ಲೆಂಡ್(ಸೆ.26) ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಪ್ರಾಣಿಗಳು ಅತ್ಯವಶ್ಯಕ. ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾ ಸಂತತಿ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಆಫ್ರಿಕಾ ದೇಶಗಳಿಂದ ಚೀತಾಗಳನ್ನು ತಂದು ಕುನು ರಾಷ್ಟ್ರೀಯ ಅಭರಣ್ಯದಲ್ಲಿ ಬಿಟ್ಟಿದೆ. ಭಾರತದ ರೀತಿಯಲ್ಲೇ ಫಿನ್‌ಲೆಂಡ್ ಸರ್ಕಾರ ಚೀನಾದಿಂದ ಪಾಂಡಾಗಳನ್ನು ತಂದಿದೆ. 2018ರಲ್ಲಿ ಬರೋಬ್ಬರಿ 88 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡು ಈ ಪಾಂಡಾಗಳನ್ನು ಫಿನ್‌ಲೆಂಡ್ ಸರ್ಕಾರ ಚೀನಾದಿಂದ ತರಿಸಿತ್ತು. ಆದರೆ ಈ ಪಾಂಡಾದಿಂದ ಮೃಗಾಲಯ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಪಾಂಡಾಗಳನ್ನು ಚೀನಾಗೆ ಹಿಂದಿರುಗಿಸಲು ಮುಂದಾಗಿದೆ.

ಫಿನ್‌ಲೆಂಡ್‌ನ ಅಹ್ಟಾರಿ ಮೃಗಲಾಯಕ್ಕೆ ಚೀನಾದಿಂದ ಎರಡು ಪಾಂಡಾಗಳನ್ನು 2018ರಲ್ಲಿ ತರಲಾಗಿದೆ. 15 ವರ್ಷದ ಅವಧಿಗೆ 2 ಪಾಂಡಾಗಳನ್ನು ತರಲಾಗಿದೆ. ಇದಕ್ಕಾಗಿ ಆರಂಭದಲ್ಲೇ ಫಿನ್‌ಲೆಂಡ್ ಸರ್ಕಾರ 74 ಕೋಟಿ ರೂಪಾಯಿ ಚೀನಾಗೆ ನೀಡಿದೆ. ಫಿನ್‌ಲೆಂಡ್ ದೇಶದಲ್ಲಿ ಪ್ರವಾಸೋದ್ಯಮ ಪ್ರಮುಖ ಆದಾಯವಾಗಿದೆ. ಹೀಗಾಗಿ ಪಾಂಡಾಗಳು ಪ್ರವಾಸಿಗರನ್ನು ಆಕರ್ಷಿಸಲಿದೆ. ಜೊತೆಗೆ ಪಾಂಡಾ ಸಂತತಿ ಬೆಳೆಸಲು ನೆರವಾಗಲಿದೆ ಅನ್ನೋ ಕಾರಣಕ್ಕೆ ಮಹತ್ತರ ಯೋಜನೆಗೆ ಚಾಲನೆ ನೀಡಲಾಗಿತ್ತು.

Tap to resize

Latest Videos

undefined

ಪಾಂಡಾ ಮರಿಗೆ ಬಾಟಲ್‌ ಫೀಡಿಂಗ್‌... ವಿಡಿಯೋ ವೈರಲ್‌

88 ಕೋಟಿ ರೂಪಾಯಿಗಳಲ್ಲಿ 74 ಕೋಟಿ ಪಾವತಿ ಮಾಡಲಾಗಿದೆ. ಇನ್ನುಳಿದ ಮೊತ್ತ ಹಂತ ಹಂತವಾಗಿ ಪಾವತಿಸಲು ಉಭಯ ಸರ್ಕಾರಗಳು ಒಪ್ಪಿಕೊಂಡಿತ್ತು. ಇತ್ತ 2018ರಿಂದ ಇಲ್ಲೀವರೆಗೆ ಅಹ್ಟಾರಿ ಮೃಗಲಾಯದಲ್ಲಿ ಪಾಂಡಾಗೆ ಆಹಾರ, ನೋಡಿಕೊಳ್ಳಲು ಸಿಬ್ಬಂದಿ, ನಿರ್ವಹಣೆ ಸೇರಿ ಬರೋಬ್ಬರಿ 14 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 

ಇದೀಗ ಸಮಸ್ಯೆ ಎಂದರೆ ಈ ಎರಡು ಪಾಂಡಾದಿಂದ ಮೃಗಾಲಯದಿಂದ ಬರುವ ಆದಾಯ ಇದರ ನಿರ್ವಹಣೆ ಹಾಗೂ ನೀಡಿದ ಮೊತ್ತಕ್ಕೆ ಸರಿಹೊಂದುತ್ತಿಲ್ಲ. ಸರ್ಕಾರ ವಿಶೇಷ ಅನುದಾನ ನೀಡಿದರೂ ಸಾಕಾಗುತ್ತಿಲ್ಲ. ಇದೀಗ ಫಿನ್‌ಲೆಂಡ್ ಮೃಗಾಲಯ 2 ಪಾಂಡದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಮುಖ್ಯ ಕಾರಣ ಕೋವಿಡ್ ವೈರಸ್. 

2018ರಿಂದ 2019ರ ಅಂತ್ಯದವರೆಗೆ ಅಹ್ಟಾರಿ ಮೃಗಾಲಯದಲ್ಲಿ ಪ್ರವಾಸಿಗರ ಸಂಖ್ಯೆ ಫಲಪ್ರದವಾಗಿತ್ತು. ಇತರ ಪ್ರಾಣಿ ಪಕ್ಷಿಗಳ ಜೊತೆ ಪಾಂಡಾ ಕೂಡ ಅಹ್ಟಾರಿ ಮೃಗಲಾಯದ ಆಕರ್ಷಣೆ ಹೆಚ್ಚಿಸಿತ್ತು. ಆದರೆ ಕೋವಿಡ್ ವಕ್ಕರಿಸಿದ ಬೆನ್ನಲ್ಲೇ ವಿಶ್ವವೇ ಲಾಕ್‌ಡೌನ್ ಲೋಕದಲ್ಲಿ ಬಂಧಿಯಾಗಿತ್ತು. ನಿರ್ಬಂಧಗಳ ಕಾರಣ 2022ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. 2022ರ ಬಳಿಕ ನಿರ್ಬಂಧ ತೆರವು ಮಾಡಿದ್ದರೂ ಪ್ರವಾಸಿಗರ ಆಗಮನ ಕಡಿಮೆಯಾಗಿತ್ತು. ಹೀಗಾಗಿ ಆಹ್ಟಾರಿ ಮೃಗಾಲಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಪಾಂಡಾ ಲದ್ದಿಯ ಒಂದು ಕಪ್ ಗ್ರೀನ್ ಟೀಗೆ 2.5 ಲಕ್ಷ..! ಜೊಲ್ಲುರಸ, ವಾಂತಿಯಿಂದಲೂ ತಯಾರಿಸ್ತಾರೆ ಕಾಫಿ..!

ಆರ್ಥಿಕ ಸಂಕಷ್ಟದಿಂದ ಇದೀಗ ಫಿನ್‌ಲೆಂಡ್ 15 ವರ್ಷದ ಒಪ್ಪಂದ ಮುರಿದು ಇದೀಗ ಚೀನಾಗೆ 2 ಪಾಂಡಾ ಹಿಂದಿರುಗಿಸಲು ಮುಂದಾಗಿದೆ.
 

click me!