ಪೆಗಾಸಸ್‌ ದುರ್ಬಳಕೆ ಆರೋಪದ ತನಿಖೆಗೆ ಇಸ್ರೇಲ್‌ ನಿರ್ಧಾರ!

By Suvarna NewsFirst Published Jul 24, 2021, 8:27 AM IST
Highlights

* ಪೆಗಾಸಸ್‌ ದುರ್ಬಳಕೆ ಆರೋಪದ ತನಿಖೆಗೆ ಇಸ್ರೇಲ್‌ ನಿರ್ಧಾರ

* ತನಿಖಾ ಫಲಿತಾಂಶ ಆಧರಿಸಿ ಲೈಸೆನ್ಸಿಂಗ್‌ ನಿಯಮ ಬದಲು ಸಾಧ್ಯತೆ

* ಪೆಗಾಸಸ್‌ನಿಂದ ಭಾರತದ ರಾಜಕಾರಣಿಗಳ ಮೇಲೆ ಗೂಢಚರ್ಯೆ ಆರೋಪ

ಜೆರುಸಲೇಂ(ಜು.24): ಭಾರತದ ಸೇರಿದಂತೆ ವಿಶ್ವದ ಹಲವು ದೇಶಗಳ 50000ಕ್ಕೂ ಹೆಚ್ಚು ರಾಜಕಾರಣಿಗಳು, ಪತ್ರಕರ್ತರು, ಖ್ಯಾತನಾಮನ ಮೊಬೈಲ್‌ ಮೇಲೆ ಅಕ್ರಮವಾಗಿ ಬೇಹುಗಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ‘ಪೆಗಾಸಸ್‌’ ತಂತ್ರಾಂಶದ ಲೈಸೆನ್ಸಿಂಗ್‌ ಪ್ರಕ್ರಿಯೆ ದುರ್ಬಳಕೆ ಕುರಿತು ತನಿಖೆ ನಡೆಸಲು ಇಸ್ರೇಲ್‌ ಸರ್ಕಾರ ನಿರ್ಧರಿಸಿದೆ.

‘ಪೆಗಾಸಸ್‌’ ತಂತ್ರಾಂಶವು ಗೂಢಚರ್ಯೆ ತಂತ್ರಾಂಶವಾಗಿದ್ದು, ಇಸ್ರೇಲ್‌ನ ಎನ್‌ಎಸ್‌ಒ ಕಂಪನಿಯು ವಿವಿಧ ದೇಶಗಳ ಸರ್ಕಾರಗಳಿಗೆ ನೀಡುತ್ತದೆ. ಭಾರತದ ರಾಜಕಾರಣಿಗಳ ಮೇಲೆ ಕೂಡ ಇದು ಗೂಢಚರ್ಯೆ ನಡೆಸಿದೆ ಎಂಬ ಆರೋಪ ಈಗ ಕೇಳಿಬಂದಿದೆ. ಆದರೆ ಭಾರತ ಸರ್ಕಾರ ಇದನ್ನು ನಿರಾಕರಿಸಿದೆ.

ಈ ಹಿನ್ನೆಲೆಯಲ್ಲಿ ಪೆಗಾಸಸ್‌ ಲೈಸೆನ್ಸಿಂಗ್‌ ಪ್ರಕ್ರಿಯೆ ದುರ್ಬಳಕೆ ಆಗಿದೆಯೇ ಎಂಬುದನ್ನು ಪರಿಶೀಲನೆಗೆ ಒಳಪಡಿಸಲು ಇಸ್ರೇಲ್‌ ಸರ್ಕಾರ ನಿರ್ಧರಿಸಿದೆ. ಪರಿಶೀಲನೆಯ ಫಲಿತಾಂಶ ಆಧರಿಸಿ, ಅಗತ್ಯ ಕಂಡುಬಂದರೆ ಲೈಸೆನ್ಸಿಂಗ್‌ ನಿಯಮಾವಳಿ ಬದಲಿಸಲಿದೆ.

ಇಸ್ರೇಲ್‌ ಸರ್ಕಾರದ ನಿರ್ಧಾರವನ್ನು ಎನ್‌ಎಸ್‌ಒ ಸ್ವಾಗತಿಸಿದೆ. ‘ಇದರಿಂದಾಗಿ ನಮ್ಮ ವಿರುದ್ಧ ಕೇಳಿಬಂದ ಆರೋಪಗಳಿಂದ ನಾವು ಮುಕ್ತರಾಗಲಿದ್ದೇವೆ’ ಎಂದು ಎಎಸ್‌ಒ ಸಿಇಒ ಆಲೇವ್‌ ಹುಲಿಯೊ ಹೇಳಿದ್ದಾರೆ.

click me!